ಪತಿಯ ಚಿಕಿತ್ಸೆಗೆ ಮಗುವನ್ನೇ ಮಾರಿದ ಈ ಕಥೆ ಕೇಳಿದ್ರೆ, ಎಂಥವರಿಗೂ ಕರುಳು ಚುರುಕ್ ಅನ್ನುತ್ತೆ!!

0
582

ಪತಿಗಾಗಿ ಕರುಳ ಕುಡಿಯನ್ನೇ ಮಾರಿದಳಾ ಹೆತ್ತಬ್ಬೆ..?!

ಹೆಣ್ಣನ್ನು ಸಹನಾಮೂರ್ತಿ, ಕ್ಷಮಯಾ ಧರಿತ್ರಿ ಎಂಬೆಲ್ಲ ಪದಗಳಿಂದ ಹೊಗಳುತ್ತಾರೆ, ಕೊಂಡಾಡ್ತೀವಿ.. ಅಲ್ಲದೇ ತಾಯಿ ಕಣ್ಣಿಗೆ ಕಾಣುವ ದೇವರು ಎಂದರೆ ಅವಳೆ ಅಮ್ಮ.. ಅವಳು ತಾಯಾಗಿ, ಮಗಳಾಗಿ, ಹೆಂಡತಿಯಾಗಿ ಆಕೆಯನ್ನು ವರ್ಣಿಸಲು ಪದಗಳಿಲ್ಲ.. ಯಾಕಿಷ್ಟು ಹೆಣ್ಣಿನ ಬಗ್ಗೆ ಹೊಗಳುತ್ತಿದ್ದೀನಿ ಅಂದುಕೊಂಡ್ರಾ.. ವಿಷಯ ಇದೇ ಕೇಳಿ..

ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಪತಿರಾಯನಿಗೆ ಚಿಕಿತ್ಸೆ ಕೊಡಿಸೋಕೆ ಇಲ್ಲೊಬ್ಬ ಮಹಿಳೆ ತಾನೆತ್ತ ಕರುಳನ್ನೆ ಮಾರಾಟ ಮಾಡಿದ್ದಾಳೆ.. ಹೌದು.. ಹಾಸನ ಜಿಲ್ಲೆಯಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಗಂಡನಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲ ಅಂತ ಹಾಸನದಲ್ಲಿ ಮಹಿಳೆಯೊಬ್ಬಳು ತನ್ನ ಮೂರೂವರೆ ತಿಂಗಳ ಗಂಡು ಹಸುಗೂಸನ್ನು ಮಾರಿದ್ದಾಳೆ.. ಮಗುವನ್ನು ಕೊಟ್ಟು 22 ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದಾಳೆ.

ಮಗುವನ್ನು ರಂಗೋಲಿಹಳ್ಳದ ಗಾಯತ್ರಿ ನಾಗರಾಜ್‌ ಎಂಬಾಕೆ ಖರೀದಿಸಿದ್ದಾರೆ. ನಂತರ ಈಕೆ ಕಂದಮ್ಮನನ್ನು ಬೇಲೂರಿನ ಹೊಸನಗರ ಬಡಾವಣೆಯ ಮಂಜುಳಾ ದೇವರಾಜ್‌ ಎಂಬುವರಿಗೆ ಮತ್ತೆ ಮಾರಾಟ ಮಾಡಿದ್ದಾರೆ. ನಿವೃತ್ತ ನರ್ಸ್​ ಶಾಂತಮ್ಮ ಎಂಬುವವರಿಗೆ ಮಗು ಮಾರಾಟಕ್ಕೆ ನೆರವಾಗಿದ್ದಾರೆ. ಆದರೆ ಮಗುವಿನ ತಾಯಿಗೆ ಬಿಟ್ಟು ಬೇರೆ ಯಾರಿಗೂ ಈ ಕಂದಮ್ಮನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ..

ಹಾಗಾಗಿ ಅಧಿಕಾರಿಯೊಬ್ಬರು ಮಗು ಬಗ್ಗೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಸಂರಕ್ಷಣಾ ಇಲಾಖೆ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಂಜುಳಾ ಮನೆಗೆ ತೆರಳಿ ಮಗುವನ್ನು ವಶಕ್ಕೆ ಪಡೆದಿದ್ದಾರೆ. ಬೇಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಗು ಮಕ್ಕಳ ಕಲ್ಯಾಣ ಇಲಾಖೆ ವಶದಲ್ಲಿದ್ದು, ಮಗುವಿನ ತಂದೆ-ತಾಯಿ ಬರುವವರೆಗೂ ಯಾರಿಗೂ ಕೊಡುವುದಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಅದೇನೆ ಇರ್ಲಿ ಈಗ ಮಂಜುಳಾ ಅವರಿಗೆ ಇತ್ತ ಮಗೂನೂ ಇಲ್ಲ, ಅತ್ತ ದುಡ್ಡು ಇಲ್ಲ.. ಮಗು ಬೇಕಿದ್ರೆ ಕಾನೂನು ರೀತಿಯಲ್ಲೇ ದತ್ತು ತಗೊಂಡಿದ್ರೆ ಮಂಜುಳಾ ಅವರಿಗೆ ಇವತ್ತು ಇಂಥಾ ಪರೀಸ್ಥಿತಿ ಬರ್ತಿರ್ಲಿಲ್ಲ.. ಆದ್ರೆ ಈಕಡೆ ಮಗುವಿನ ತಾಯಿ ಸ್ಥಿತಿ ಹೇಗಿದಿಯೋ ಗೊತ್ತಿಲ್ಲ.. ಕರುಳ ಬಳ್ಳಿಗಿಂತಲೂ ಗಂಡ ಬೇಕು ಅಂತ ಮಗುವನ್ನು ಹಣಕ್ಕಾಗಿ ಮಾರಿರೋದು ದುರಂತವೇ ಸರಿ..