ವೈ-ಫೈ ಸಿಗ್ನಲ್ ಶಕ್ತಿಯನ್ನು ವೃದ್ದಿಸಬೇಕೇ?? ಇಲ್ಲಿದೆ ಉಪಯುಕ್ತ ಮಾಹಿತಿ !!!

0
5376

ವೈ-ಫೈ ವೇಗ ಕಡಿಮೆಯಾಗಿದೆಯೇ?
ತಂತ್ರಜ್ಞಾನ ಬೆಳೆದಂತೆಲ್ಲಾ ಅದಕ್ಕೆ ಸಂಬಂಧಿಸಿದ ಎಲ್ಲಾ ಸೌಕರ್ಯಗಳೂ ಕೈಗೆಟಕುವ ಬೆಲೆಯಲ್ಲಿ ಈಗ ಲಭ್ಯ. ಈ ಪೈಕಿ ಬಹುತೇಕರ ಮನೆಗಳಲ್ಲೂ ಈಗ ವೈಫೈ ಸೌಕರ್ಯ ಇರುವುದು ಸಾಮಾನ್ಯವಾಗಿಬಿಟ್ಟಿದೆ. ಮನೆಯಲ್ಲೇ ಕುಳಿತು ವೈಫೈ ಮೂಲಕ ಪ್ರಪಂಚ ಸುತ್ತುವ ಭಾಗ್ಯ ಈಗಿನವರದ್ದು. ಇದರ ಮೂಲಕ ಯಾವುದೇ ಡಿವೈಸ್‍ಗೂ ವೈಫೈ ಸಂಪರ್ಕ ನೀಡಿ ಇಂಟರ್ನೆಟ್ ಸಂಪರ್ಕವನ್ನೂ ಪಡೆದು ಮನೆಯಲ್ಲೇ ಹಲವಾರು ಕೆಲಸಗಳನ್ನು ಆನ್‍ಲೈನ್ ಮಾಡಬಹುದು. ಆದರೆ ಇಂಥ ಸಂದರ್ಭದಲ್ಲಿ ವೈಫೈ ವೇಗ ಕಡಿಮೆಯಾಗಿ ಬಿಟ್ಟರೆ? ಚಿಂತೆ ಬೇಡ. ಈ ಸುಲಭ ಸಲಹೆಗಳನ್ನು ಅನುಸರಿಸುವ ಮೂಲಕ ವೈಫೈ ವೇಗ ಹೆಚ್ಚಿಸಿ, ಮತ್ತೆ ಆನಂದಿಸಿ.

ಸಿಗ್ನಲ್ ದಿಸೆಯಲ್ಲಿ ರೌಟರ್‍ವೈಫೈಗೆ ಸಂಬಂಧಿಸಿದ ರೌಟರ್ ಅನ್ನು ಮನೆಯ ಯಾವ ಸ್ಥಳದಲ್ಲಿ ಸಮರ್ಪಕ ಸಿಗ್ನಲ್ ದೊರಕುವುದೋ ಅಂಥ ಕಡೆಗೆ ಜೋಡಿಸಿ. ಒಂದು ವೇಳೆ ರೌಟರ್ ಅನ್ನು ಮನೆಯೊಳಗೆ ಮುಖ ಮಾಡಿ ಜೋಡಿಸಿದ್ದರೆ ಕೂಡಲೇ ಅದನ್ನು ಮನೆಯ ಹೊರಗಡೆ ಮುಖ ಮಾಡಿ ಜೋಡಿಸಿ ಮತ್ತೆ ನೋಡಿ.

Image result for wifi router

ಲೋಹದ ಸಂಪರ್ಕ ಬೇಡ : ರೌಟರ್ ಅನ್ನು ಮನೆಯೊಳಗೆ ಜೋಡಿಸುವಾಗ ರೌಟರ್‍ನ ಸಿಗ್ನಲ್ ರೇಂಜ್‍ನ ಮಧ್ಯೆ ಯಾವುದೇ ಲೋಹದ ಸಾಧನವಿಲ್ಲದಂತೆ ನೋಡಿಕೊಳ್ಳುವುದು ಉತ್ತಮ. ಏಕೆಂದರೆ ವೈಫೈವರೆಗೆ ಸಿಗ್ನಲ್ ತಲುಪಿಸುವಲ್ಲಿ ಲೋಹದ ಸಾಧನ ಅಡ್ಡಿಯಾಗುವ ಸಂಭವವೇ ಅಧಿಕ.ಎಕ್ಸಟೆಂಡರ್ ಇರಲಿವೈಫೈ ಬಳಸುವಾಗ ಆದಷ್ಟು ನಿಮ್ಮ ಡಿವೈಸ್ ವೈಫೈ ಹತ್ತಿರವೇ ಇರುವಂತೆ ನೋಡಿಕೊಳ್ಳಿ. ಜೊತೆಗೆ ವೈಫೈ ಅನ್ನು ಮನೆಯಲ್ಲಿ ಅಳವಡಿಸುವಾಗ ಆದಷ್ಟು ನೀವು ಹತ್ತಿರದಲ್ಲೇ ಇರುವಂಥ ಸ್ಥಳದಲ್ಲಿರುವಂತೆ ನೋಡಿಕೊಳ್ಳಿ. ಒಂದು ವೇಳೆ ನಿಮ್ಮ ಮನೆ ದೊಡ್ಡದಾಗಿದ್ದರೆ ವೈಫೈ ಜೊತೆಗೆ ಎಕ್ಸಟೆಂಡರ್ ಕೂಡಾ ಅಳವಡಿಸುವುದು ಅಗತ್ಯ. ಇದರಿಂದ ಯಾವುದೇ ರೀತಿಯ ಅಡ್ಡಿ ಅಡಚಣೆ ಇಲ್ಲದೇ ವೈಫೈ ಸಂಪರ್ಕ ಸಾಧ್ಯವಾಗುತ್ತದೆ.ಆರ್ಕಿಟೆಕ್ಚರ್ ಆಫ್ ರೇಡಿಯೋದಿ ಆರ್ಕಿಟೆಕ್ಚರ್ ಆಫ್ ರೇಡಿಯೋ ಹೆಸರಿನ ಈ ಡಿವೈಸ್ ಅನ್ನು ಇನ್‍ಫಾರ್ಮೇಶನ್ ಡಿಸೈನರ್ ರಿಚರ್ಡ್ ವಿಜೆನ್ ವಿನ್ಯಾಸಗೊಳಿಸಿದ್ದು, ಇದು ನಿಮ್ಮ ಅಕ್ಕಪಕ್ಕದಲ್ಲೇ ಸುಲಭವಾಗಿ ವೈಫೈ ಸಿಗ್ನಲ್ ದೊರಕಿಸುವಲ್ಲಿ ನೆರವಾಗುತ್ತದೆ.

Image result for wifi router

ಈ ಡಿವೈಸ್ ಸಾರ್ವಜನಿಕ ಮಾಹಿತಿ, ಸೆಲ್ ಟವರ್ ಇತ್ಯಾದಿಗಳನ್ನು ಬಳಸುವ ಮೂಲಕ ನಿಮ್ಮ ಅಕ್ಕಪಕ್ಕ ಸಿಗ್ನಲ್ ದೊರಕಿಸುತ್ತದೆ. ಇದರಿಂದಾಗಿ ಯಾವುದೇ ರೀತಿಯ ತೊಂದರೆಗಳಿಲ್ಲದೇ ವೈಫೈ ಸಂಪರ್ಕವನ್ನು ವೇಗವಾಗಿ ಪಡೆಯಬಹುದಾಗಿದೆ. ಮೈಕ್ರೋವೆಬ್‍ನಿಂದ ನಿಧಾನಗತಿವೈಫೈ ವೇಗ ನಿಧಾನಗತಿ ಪಡೆಯಲು ಮೈಕ್ರೋವೆಬ್ ಕೂಡಾ ಕಾರಣವಾಗುತ್ತದೆ. ಅಚ್ಚರಿಯಾದರೂ ಇದು ನಿಜ. ಏಕೆಂದರೆ ಮೈಕ್ರೋವೇಬ್ 2.4 ಗೀಗಾಹಟ್ರ್ಸ್ ಫ್ರಿಕ್ವೆನ್ಸಿ ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ವೈಫೈ ಫ್ರಿಕ್ವೆನ್ಸಿ ವೇಗವೂ 2.4 ಗೀಗಾಹಟ್ರ್ಸ್ ಆಗಿದ್ದರಿಂದ ಮೈಕ್ರೋವೆಬ್ ಮತ್ತು ವೈಫೈ ಫ್ರಿಕ್ವೆನ್ಸಿ ಒಂದಕ್ಕೊಂದು ತಾಗುವ ಮೂಲಕ ವೈಫೈ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ವೈಫೈ ಸಂಪರ್ಕ ಇದ್ದಾಗ ಮೈಕ್ರೋವೆಬ್ ಆಫ್ ಆಗಿದ್ದರೆ ಒಳಿತು.