ಬೇಸಿಗೆ ರಜೆಯಲ್ಲಿ ಕರ್ನಾಟಕದ ಈ ಜಾಗಗಳಿಗೆ ಹೋದರೆ ಕಾಡಿನ ಸಫಾರಿಯ ಮಜಾ ಸಿಗುತ್ತೆ!!

0
1356

ನಮ್ಮ ರಾಜ್ಯದ ಕಾಡುಗಳಲ್ಲಿ ಸಒಹಾರಿ ಹೋಗುವುದೇ ಒಂದು ರೀತಿಯ ಆನಂದ.. ಇಲ್ಲಿದೆ ನೋಡಿ ಸಫಾರಿ ಪ್ರೇಮಿಗಳಿಗೆ ನಮ್ಮ ನಾಡಿನಲ್ಲೇ ಇರುವ ಬೆಸ್ಟ್ ಜಾಗಗಳ ಸಂಪೂರ್ಣ ಮಾಹಿತಿ..

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಭಾರತದ ಕರ್ನಾಟಕದಲ್ಲಿರುವ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸುಮಾರು 22 km ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. 25,000 acre ಝೂವಲಾಜಿಕಲ್ ಪಾರ್ಕ್ ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳವಾಗಿದೆ..

ನಾಗರಹೊಳೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ,ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆಯ ಮತ್ತು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿತವಾಗಿದೆ..
ಇದು ಒಂದು ಶ್ರೀಮಂತ ಕಾಡುಪ್ರದೇಶ, ಸಣ್ಣ ಹೊಳೆಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳನ್ನು ಹೊಂದಿದೆ. ಪಾರ್ಕ್ ಅನೇಕ ಹುಲಿಗಳು, ಭಾರತೀಯ ಕಾಡೆಮ್ಮೆ ಮತ್ತು ಆನೆಗಳು ಆರೋಗ್ಯಕರ ಮಾಂಸಾಹಾರಿ ಪ್ರಾಣಿಗಳ ಬೇಟೆಯ ಅನುಪಾತ ಹೊಂದಿದೆ. ಸಫಾರಿಯ ಅನುಕೂಲ ಕೂಡ ಈ ಕಾಡಿನಲ್ಲಿದೆ..

ಬಂಡೀಪುರ

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವ ನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ. ಹುಲಿ, ಆನೆ, ಚಿರತೆ ಇತ್ಯಾದಿ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.. ಇಲ್ಲಿಯೂ ಸರ್ಕಾರಿ ಸಫಾರಿಯ ಜೊತೆಗೆ ಪ್ರೈವೇಟ್ ಕಂಪನಿಗಳು ಸಫಾರಿಯನ್ನು ನಡೆಸುತ್ತವೆ..

ಭದ್ರ ವನ್ಯ ಜೀವಿ ತಾಣ

ಭದ್ರ ವನ್ಯ ಜೀವಿತಾಣದಲ್ಲಿ.. ಲಕ್ಕವಳ್ಳಿ, ಮುತ್ತೋಡಿ ಮತ್ತಿತರ ರಾಜ್ಯ ಅರಣ್ಯಗಳನ್ನು ಒಳಗೊಂಡ ಒಂದು ಕ್ಷೇತ್ರವೂ ಬಾಬಾಬುಡನ್‍ಗಿರಿ ಅರಣ್ಯವನ್ನು ಒಳಗೊಂಡ ಎರಡನೆಯ ಕ್ಷೇತ್ರವೂ ಇದೆ. ಉತ್ತರದಲ್ಲಿ ಭದ್ರಾ ಜಲಾಶಯ ಇದೆ. ಈ ಅಭಯಾರಣ್ಯದ ದಕ್ಷಿಣಭಾಗದಲ್ಲಿ ಆದ್ರ್ರಪರ್ಣಪಾತಿ ಬಗೆಯ ಅರಣ್ಯವೂ ಉತ್ತರಭಾಗದಲ್ಲಿ ಶುಷ್ಕಪರ್ಣಪಾತಿ ಬಗೆಯ ಅರಣ್ಯವೂ ಬಾಬಾಬುಡನ್‍ಗಿರಿ ವಲಯದಲ್ಲಿ ಶೋಲಾ ಬಗೆಯ ಅರಣ್ಯವೂ ಇವೆ. ಹುಲಿ, ಚಿರತೆ, ಕಾಡುಬೆಕ್ಕು, ಕಾಡುನಾಯಿ, ನರಿ, ಬೆಕ್ಕು, ಕರಡಿ, ಆನೆ, ಕಾಟಿ, ಕಡವೆ, ಜಿಂಕೆ, ಕೆಮ್ಮ, ಕೊಂಡಕುರಿ, ಕಾಡುಹಂದಿ, ಮುಸುವ, ಮಂಗ, ಕಾಡುಪಾಪ, ಪುನುಗುಬೆಕ್ಕು, ತಾಳೆಬೆಕ್ಕು, ಮುಂಗುಸಿ, ಚಿಪು ಹಂದಿ, ಕೇಶಳಿಲು, ಕಣೆಹಂದಿ, ನೀರುನಾಯಿ, ಹಾರುವ ಓತಿ ಪ್ರಾಣಿಜಾತಿಗಳು. 250ಕ್ಕೂ ಹೆಚ್ಚು ಬಗೆಯ ಹಕ್ಕಿಗಳಿವೆ. ಬ್ಲ್ಯಾಕ್‍ರ್ಡ್, ಶಾಮ, ಕೆಂಪೆದೆ ಪಿಕಳಾರ, ಕಾಜಾಣ, ಕಗ್ಗಿಲು, ಓಂಗಿಲೆಗಳು ಇಲ್ಲಿ ಕಾಣಸಿಗುವ ಪಕ್ಷಿ ಪ್ರಭೇದಗಳು. ಪ್ರವಾಸಿಗರಿಗೆ ವಸತಿ ಹಾಗೂ ವೀಕ್ಷಣೆಗೆ ವಾಹನ ಸೌಕರ್ಯ ಇವೆ.

ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದ ಅಭಯಾರಣ್ಯ

ಚಾಮರಾಜನಗರದಿಂದ 48ಕಿಮೀ ದೂರದಲ್ಲಿ ಪಶ್ಚಿಮ ಮತ್ತು ಪೂರ್ವ ಘಟ್ಟಗಳು ಸಂದಿಸುವ ಪ್ರದೇಶದಲ್ಲಿ ಇದೆ. ಬಿಳಿಗಿರಿ ರಂಗನ ಬೆಟ್ಟವನ್ನೆಲ್ಲ ಹೆಚ್ಚುಕಡಿಮೆ ಆಕ್ರಮಿಸಿರುವ ಈ ಅಭಯಾರಣ್ಯ ತಪ್ಪಲಿನಲ್ಲಿ ಕುರುಚಲು ಕಾಡನ್ನೂ ಎತ್ತರದ ಪ್ರದೇಶಗಳಲ್ಲಿ ಆದ್ರ್ರಪರ್ಣಪಾತಿ, ನಿತ್ಯಹಸುರಿನ ಅರಣ್ಯಗಳನ್ನೂ ಇನ್ನೂ ಉನ್ನತ ಪ್ರದೇಶಗಳಲ್ಲಿ ಶೋಲಾ ಅರಣ್ಯವನ್ನೂ ಪಡೆದಿದೆ. 215ಕ್ಕೂ ಹೆಚ್ಚು ಬಗೆಯ ಪಕ್ಷಿಗಳೂ ಇಲ್ಲಿ ಕಾಣದೊರೆಯುತ್ತವೆ. ಇತ್ತಲೆ ಮಂಡಲ ಇಲ್ಲಿನ ಉಭಯಚರಿ ಪ್ರಾಣಿಗಳ ಪೈಕಿ ವಿಶೇಷವಾದ್ದು. ಇಲ್ಲಿನ ಸುಪ್ರಸಿದ್ದ ದೊಡ್ಡಸಂಪಿಗೆ ಮರ ಸೋಲಿಗರಿಗೆ ಪೂಜ್ಯವೆನಿಸಿದ್ದು, ಪ್ರೇಕ್ಷಣೀಯ ತಾಣವೂ ಆಗಿದೆ. ಪ್ರವಾಸಿಗರಿಗೆ ವಸತಿ ಸೌಕರ್ಯವಿದೆ..

ದಾಂಡೇಲಿ ನ್ಯಾಷನಲ್ ಪಾರ್ಕ್

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ.. 1956 ಮೇ ತಿಂಗಳಿನಲ್ಲಿ ಸ್ಥಾಪನೆಗೊಂಡಿತು. ಧಾರವಾಡದಿಂದ ದಾಂಡೇಲಿ ಪಟ್ಟಣ ಮಾರ್ಗವಾಗಿ 68ಕಿಮೀ ದೂರದಲ್ಲಿದೆ. ವಿಸ್ತೀರ್ಣ 204ಚಕಿಮೀ. ಈ ವನ್ಯಧಾಮ 1994ರ ಏಪ್ರಿಲ್‍ನಲ್ಲಿ ವಿಸ್ತಾರಗೊಂಡು ಪ್ರಸಕ್ತ 475ಚಕಿಮೀ ಅರಣ್ಯವನ್ನು ಒಳಗೊಂಡಿದೆ. ಆದ್ರ್ರಪರ್ಣಪಾತಿ ಮತ್ತು ಅರೆ ನಿತ್ಯಹಸುರಿನ ಅರಣ್ಯದಿಂದ ಕೂಡಿದೆ. ಬೀಟೆ, ಮತ್ತಿ, ತಾರೆ, ನಂದಿ, ಹೊನ್ನೆ, ಅರಿಷಿಣತೇಗ, ತಡಸಲು, ನಾಯಿಬೆಂಡೆ, ನವಿಲಾದಿ ಇಲ್ಲಿನ ಮುಖ್ಯ ವೃಕ್ಷಜಾತಿಗಳು. ಬಿದಿರು ಕೂಡ ಹೇರಳವಾಗಿದೆ. ಉಳಿದ ಪ್ರಮುಖ ವನ್ಯಧಾಮಗಳಲ್ಲಿ ಕಾಣಸಿಕ್ಕುವ ಪ್ರಾಣಿಗಳೇ ಇಲ್ಲೂ ಉಂಟು. 200 ಬಗೆಯ ಹಕ್ಕಿಗಳಿವೆ. ಪ್ರವಾಸಿಗರಿಗೆ ವಾಹನ, ವಸತಿ ಸೌಕರ್ಯಗಳಿವೆ. 10ಕಿಮೀ ದೂರದಲ್ಲಿ ಹರಿಯುವ ಕಾಳಿನದಿಯಲ್ಲಿ ದೋಣಿವಿಹಾರ ಮತ್ತು ಕೆಲವು ಸಾಹಸಮಯ ಕ್ರೀಡೆಗಳಿಗೆ ಅವಕಾಶವಿದೆ. ಸನಿಹದಲ್ಲೇ ಉಳವಿ ಕ್ಷೇತ್ರ, ಕವಲ ಗುಹೆಗಳು, ಸೈಕ್ಸ್ ಪಾಯಿಂಟ್, ನಾಗಝರಿ ಕಣಿವೆ ವೀಕ್ಷಣ ತಾಣ ಇವೆ.