ಗುಜರಾತ್ ಮತ್ತೆ ಹಿಮಾಚಲ ಪ್ರದೇಶದ ನಂತರ ಮೋದಿ ಅಲೆ ಕರ್ನಾಟಕಕ್ಕೂ ಅಪ್ಪಳಿಸುವುದೇ??

0
545

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಲೆ ಎಲ್ಲೆಡೆ ಇನ್ನು ಇದೆ ಎಂಬುದಕ್ಕೆ ಮತ್ತು ಮೋದಿಯವರ ಅಭಿವೃದ್ಧಿ ಕಾರ್ಯಗಳಿಗೆ ಜನ ಸಾತ್ ನೀಡುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿಗೆ ನಡೆದ ಗುಜುರಾತ್ ಮತ್ತು ಹಿಮಾಚಲ್-ಪ್ರದೇಶ್-ನಲ್ಲಿ ನಡೆದ ಚುನಾವಣೆಗಳೆ ಸಾಕ್ಷಿ, ಇಂದು ನಡೆದ ಮತ ಎಣಿಕೆಯಲ್ಲಿ ಬಿಜಿಪಿ ಎರಡು ರಾಜ್ಯಗಳಲ್ಲಿ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದೆ.

ಇದೆಲ್ಲದಕ್ಕೆ ಕಾರಣ ಬಿಜೆಪಿಯವರ ಅಬಿವೃದ್ಧಿ ಕಾರ್ಯಗಳು, ಚುನಾವಣೆ ಪ್ರಚಾರ ವೈಖರಿ, ಪ್ರಚಾರ ತಂತ್ರಗಳು ಎಂಬ ಮಾತು ಕೇಳಿಬರುತ್ತಿದೆ. ಈ ಮೊದಲು ನಡೆದ ಉತ್ತರ-ಪ್ರದೇಶ್, ರಾಜಸ್ತಾನ್, ಮಹಾರಾಷ್ಟ್ರ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿತ್ತು, UP ಯಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಅಬ್ಬರದ ಪ್ರಚಾರ, ರೋಡ್ ಶೋ ಮತ್ತು ಇನ್ನು ಅನೇಕ ಕಾರ್ಯಕ್ರಮಗಳನ್ನು ಮಾಡಿದರು ಸೋಲು ಅವರ ಬೆನ್ನುಬಿಡಲಿಲ್ಲ, ಅದೇ ರೀತಿ ಗುಜುರಾತ್ ಮತ್ತು ಹಿಮಾಚಲ್ ಪ್ರದೇಶದಲ್ಲಿಯೂ ನಡೆದಿದೆ.

ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಗುಜುರಾತ್ ಮತ್ತು ಹಿಮಾಚಲಪ್ರದೇಶದ ಚುನಾವಣೆ ಹೊಣೆಯನ್ನು ಅವರ ಮೇಲೆ ಹೊರಿಸಿತ್ತು, ಪ್ರಚಾರ ಕಾರ್ಯ ಕೂಡ ಚೆನ್ನಾಗಿಯೇ ಮಾಡಿದ್ದರು, ರೋಡ್ ಶೋ ಮತ್ತು ಇನ್ನಿತರ ಅನೇಕ ಪ್ರಚಾರಗಳನ್ನು ಮಾಡಿ ಯುವ ಮತದಾರರನ್ನು ಸೆಳೆಯುವ ಕಾರ್ಯವನ್ನು ಮಾಡಿದ್ದರು, ಆದರೆ 2014 ರಿಂದ ನಡೆದ ಚುನಾವಣೆಗಳನ್ನು ಗಮನಿಸುತ್ತ ಬಂದರೆ, ಚುನಾವಣೆ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ನಾಯಕರುಗಳು ಬಿಜೆಪಿಯ ಅಥವಾ ಪ್ರಧಾನಿಯವರ ವಿರುದ್ಧ ನೀಡುವ ವಿವಾದಾತ್ಮಕ ಹೇಳಿಕೆಗಳೆ ಪಕ್ಷಕ್ಕೆ ಮುಳುವಾಗುತ್ತಿವೆ ಹಾಗು ಇವೆ ಹೇಳಿಕೆಗಳು ಬಿಜೆಪಿಯವರಿಗೆ ಸಿಹಿ ಸಕ್ಕರೆಯಾಗಿ ಗೆಲುವಿನ ದಡವನ್ನು ಸೇರಲು ಅನುಕೂಲ ಮಾಡಿಕೊಡುತ್ತಿವೆ.

ಇನ್ನು ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ಅಂದರೆ 2014 ರ ನಂತರ ನಡೆದ ಚುನಾವಣೆಗಳಲ್ಲಿ ಬಿಜೆಪಿ ತುಂಬ ಸೋಲುಂಡದ್ದು ವಿರಳ, ಕೆಲ ರಾಜ್ಯಗಳನ್ನು ಹೊರತುಪಡಿಸಿ, ದೇಶದೆಲ್ಲೆಡೆ ಬಿಜೆಪಿ ಪಕ್ಷ ತನ್ನ ಆಡಳಿತವನ್ನು ನಡೆಸುತ್ತಿದೆ. ಇನ್ನು ನಮ್ಮ ಕರ್ನಾಟಕದ ವಿಷಯಕ್ಕೆ ಬರುವುದಾದರೆ, ಇಲ್ಲಿಯೂ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ನಾಯಕರುಗಳು ಅದರಲ್ಲೂ ವಿಶೇಷವಾಗಿ ದೇಶದೆಲ್ಲೆಡೆ ಚರ್ಚೆಯಾದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಸಾಲು-ಸಾಲು ವಿವಾದಾತ್ಮಕ ಹೇಳಿಕೆಗಳೆ ಬಿಜೆಪಿಯವರಿಗೆ ಗೆಲುವಿನ ಮಾರ್ಗ ತೋರಿಸಿದಂತಿವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಜನರಿಂದ ಒಂದಲ್ಲ ಒಂದು ರೀತಿ ಅಪಖ್ಯಾತಿಗೆ ಗುರಿಯಾಗಿದೆ. ಅದು ಹಿರಿಯ ಪೊಲೀಸ್ ಅಧಿಕಾರಿಗಳ ಅನುಮಾನಾಸ್ಪದ ಸಾವಿರಬಹುದು, ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಮತ್ತು ಅಮಾನತ್ತಿರಬಹುದು, ವೈದ್ಯರ ಮುಷ್ಕರ, ರೈತರ ಸಾಲ ಮನ್ನಾದಲ್ಲಿ ಖೋತ, ಪೋಲೀಸರ ಮುಷ್ಕರ, ಉ-ಕ ಮಹದಾಯಿ ವಿವಾದ, ಹೈ-ಕ IIT ವಿವಾದ, ಕಾವೇರಿ ನೀರು ಹಂಚಿಕೆ, ಪಡಿತರ ಯೋಜನೆಗಾಗಿ ಮೀಸಲಿದ್ದ ಭಾಗ್ಯ ಯೋಜನೆಗಳ ಹಗರಣ ಪ್ರಕರಣ ಇನ್ನು ಹೇಳುತ್ತಾ ಹೋದರೆ ಮುಗಿಯದ ವಿವಾದ, ಮುಷ್ಕರ ಮತ್ತು ಲೋಪಗಳೇ ಇವೆ, ಇವನ್ನೇ ಬಿಜೆಪಿಯವರು ಬಳಸಿಕೊಂಡು ಗೆಲುವಿನ ದಡಮುಟ್ಟಬಹುದೆಂಬ ಮಾತು ರಾಜ್ಯದೆಲ್ಲೆಡೆ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಮಾಡುತ್ತಿರುವ ಯಡವಟ್ಟುಗಳೆ ಅದರ ಹಾದಿಗೆ ಮುಳುವಾಗುತ್ತಿದೆ, ಇದೆ ಬಿಜೆಪಿಯವರಿಗೆ ವರವಾಗುತ್ತಿದೆ, ಇದೆ ನಮ್ಮ ರಾಜ್ಯದಲ್ಲಿಯೂ ಮರುಕಳಿಸುವುದ, ಕಾದು ನೋಡಬೇಕು…!