ಉತ್ತರ ಕರ್ನಾಟಕಕ್ಕೆ ದಶಕಗಳಿಂದ ಆಗುತ್ತಿರುವ ಅನ್ಯಾಯಕ್ಕೆ, ಕುಮಾರಸ್ವಾಮಿಯವರು ತಮ್ಮ ಬಜೆಟ್ ಮೂಲಕ ಬರೆ ಎಳೆದರೆ??

0
563

ಕುಮಾರಸ್ವಾಮಿ ಅಧಿಕಾರದಿಂದ ಸಾವಿರಾರು ವರ್ಷಗಳ ಇತಿಹಾಸಯಿರುವ ಕರ್ನಾಟಕಕ್ಕೆ ವಿಭಜನೆಯ ಭೀತಿ ರಾಜ್ಯದ ತುಂಬೆಲ್ಲ ಬಿರುಗಾಳಿಯೇಬಿಸಿದೆ. ಹೌದು, ಕರ್ನಾಟಕದ ರಚನೆ, ಮತ್ತು ಏಕೀಕರಣವಾಗಿ ಇಷ್ಟೊಂದು ಮುಂದುವರಿಯಲು ಉತ್ತರ ಕರ್ನಾಟಕದ ಕೊಡುಗೆ ಅಪಾರವಿದೆ. ಮೊದಲು ಕರ್ನಾಟಕವು ಕದಂಬರ ಪ್ರಥಮ ರಾಜ್ಯ ವಾಗಿತ್ತು, ಮಯೂರವರ್ಮ ರಾಜ್ಯವನ್ನು ಸ್ಥಾಪನೆ ಮಾಡಿ ಬನವಾಸಿಯನ್ನು ರಾಜ್ಯಧಾನಿ ಮಾಡಿ 20 ವರ್ಷಗಳ ಕಾಲ ಆಳ್ವಿಕೆ ಮಾಡಿದ. ಮಹಾವಂಶ ಎಂಬ ಬೌದ್ದ ಗ್ರಂಥ ತಿಳಿಸುವಹಾಗೆ ಅಶೋಕ ಚಕ್ರವರ್ತ್ರಿ ಬೌದ್ದ ಧರ್ಮ ಪ್ರಚಾರಕ್ಕಾಗಿ ಬನವಾಸಿಗೆ ಬೌದ್ದ ಭಿಕ್ಷು ರಖ್ಖಿತನು ಕಳುಹಿಸಿದ, ಸಿಂಹಳದ ಬೌದ್ದ ಭಿಕ್ಷುಗಳು ಧರ್ಮ ಪ್ರಸಾರಕ್ಕಾಗಿ ಕರ್ನಾಟಕದ ಬನವಾಸಿಗೆ ಬಂದಿರುವುದು ನಾಗಾರ್ಜುನಕೊಂಡದ ಒಂದು ಶಾಸನದಲ್ಲಿದೆ.

ಹೊಯ್ಸಳರ ಮತ್ತು ಸೇವುಣರ ನಡುವಿನ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾಯಿತು. ತುಂಗಭದ್ರಾ ನದಿಯ ಉತ್ತರಕ್ಕೆ ಸೇವುಣರು, ದಕ್ಷಿಣಕ್ಕೆ ಹೊಯ್ಸಳರು ಆಳಿದರು. 12ನೇ ಶತಮಾನದ ಆರಂಭದಲ್ಲಿ, ಬೇರೆಯಾದ ಕನ್ನಡಿಗರು ಆಡಳಿತಾತ್ಮಕವಾಗಿ ಒಂದಾದದ್ದು 1956 ರಲ್ಲಿ. ನಂತರ ಬ್ರಿಟಿಷರು ಮತ್ತು ಹೈದರಾಬಾದಿನ ನಿಜಾಮನ ನಡುವೆ ಆಗಿದ್ದ ಒಪ್ಪಂದದ ಪ್ರಕಾರ ಮೈಸೂರು ಸಂಸ್ಥಾನವು ಒಡೆಯರಿಗೆ ಉಳಿಯಿತು. ಬೆಳಗಾಂವಿ,ಬಿಜಾಪುರ, ಧಾರವಾಡ,ಉತ್ತರ ಕನ್ನಡ , ಬ್ರಿಟಿಷರ ಮುಂಬಯಿ ಆಧಿಪತ್ಯಕ್ಕೂ, ದಕ್ಷಿಣ ಕನ್ನಡ, ಬಳ್ಳಾರಿ ಬ್ರಿಟಿಷ ಮದ್ರಾಸಿಗೆ, ಬೀದರ್,ಗುಲಬರ್ಗ, ರಾಯಚೂರು ಹೈದರಾಬಾದ್ ಆಳ್ವಿಕೆಗೆ ಸೇರಿದವು. ಇಂದರಿಂದ ಭಾಷಾವಾರು ಗಲಭೆ ಶುರುವಾಗಿತ್ತು.

1905 ರಲ್ಲಿ ಆಲೂರು ವೆಂಕಟರಾಯರು, ಉತ್ತರ ಕರ್ನಾಟಕದ ನೂರಾರು ಜನರ ಜೊತೆಗೂಡಿ ಕರ್ನಾಟಕ ಏಕೀಕರಣದ ವಿರುದ್ದ ಹೋರಾಡಿ ಜಯಗಳಿಸಿದರು. ನಂತರ 1918 ರಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಸ್ಥಾಪನೆಯಾಯಿತು. ನಂತರ ಆಡಳಿತಾತ್ಮಕವಾಗಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ, ಎಂದು ಭಾಗ ಮಾಡಿದು ಒಂದು ಇತಿಹಾಸ ವಾಗಿತ್ತು. ಈ ಎಲ್ಲಾ ಭಾಗಗಳ ಪೈಕಿ ಸಧ್ಯದ ಸ್ಥಿತಿ ನೋಡಿದರೆ ಕರ್ನಾಟಕದಲ್ಲಿ ಹಿಂದುಳಿದ ಭಾಗ ಅಂದ್ರೆ ಈ ಉತ್ತರ ಕರ್ನಾಟಕ, ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಿದೆ. ಸರಿಯಾದ ಶಿಕ್ಷಣಯಿಲ್ಲದೆ ಸಾಕ್ಷರತೆಯು ತುಂಬಾ ಕಡಿಮೆ, ದೊಡ್ಡ ಪ್ರಮಾಣದಲ್ಲಿ ಉದೋಗ ನೀಡುವ ಕಂಪನಿಗಳು, ಖಾಸಗಿ ಸಂಸ್ಥೆ, ಮತ್ತು ಸರ್ಕಾರದ ಯಾವುದೇ ಯೋಜನೆವು ಇಲ್ಲದೆ ಈ ಭಾಗದ 13 ಜಿಲ್ಲೆಗಳು ಅತಂತ್ರದಲ್ಲಿವೆ.ಮತ್ತು ಇಲ್ಲಿನ ರೈತರ ಮಹದಾಯಿ ನೀರಾವರಿ ಯೋಜನೆಯ ಹೋರಾಟವೂ ಸಾವಿರಾರು ದಿನಕಳೆದರು ನ್ಯಾಯ ಸಿಗುತಿಲ್ಲಾ.

ಇದನೆಲ್ಲ ತಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಜೆಟ್ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಿ ಈಗಾಗಲೇ ಅಭಿವೃದಿ ಹೊಂದಿದ   ಜಿಲ್ಲೆಗಳಾದ. ಮಂಡ್ಯ ವೈದಕೀಯ ಕಾಲೇಜ್ಗೆ 20 ಕೊಟ್ಟಿ, ಕನಕಪುರ ವೈದಕೀಯ ಕಾಲೇಜ್ಗೆ 150 ಕೊಟ್ಟಿ ಬೆಂಗಳೂರು ಕಾರಿಡಾರ್ ಗೇ 15.825.ಕೋಟಿ, ಹಾಸನ, ಚಿಕ್ಕಮಂಗಳೂರು, ರಾಮನಗರ,ಮೈಸೂರು,ಈ ಜಿಲ್ಲೆಗಳಿಗೆ ಮಾತ್ರ ಸಾವಿರಾರು ಕೊಟ್ಟಿಯಲ್ಲಿ ಹಣ ನೀಡಿ, ಉತ್ತರ ಕರ್ನಾಟಕವನ್ನು ಕಡೆಗಣಿಸಿದು ಯಾಕೇ? ಅಲ್ಲಿನ ಜನ್ರು ‘ಜೆಡಿಎಸ್’ಗೆ ಮತ ಹಾಕ್ಕಿಲ್ಲ ಅಂತನ?ಇಲ್ಲಾ ಕುಮಾರಸ್ವಾಮಿಗೆ ಉತ್ತರ ಕರ್ನಾಟಕ ಬಿಟ್ಟು ಬೇರೆ ಜಿಲ್ಲೆ ಮೇಲೆನೆ ತುಂಬಾ ಪ್ರೀತಿನ?