ಚಳಿಗಾಲದಲ್ಲಿ ವಾಯುಮಾಲಿನ್ಯದ ಕಾರಣ ದೆಹಲಿಯಿಂದ ಸಂಸತ್ ಭವನವನ್ನು ದಕ್ಷಿಣ ಭಾರತಕ್ಕೆ ಶಿಫ್ಟ್ ಮಾಡುತ್ತಾರ?

0
438

ಮನುಷ್ಯರು ಬದುಕಲು ದೆಹಲಿ ಯೋಗ್ಯವಾದ ಸ್ಥಳವಲ್ಲ. ಸಂಸತ್ ಭವನವನ್ನು ದಕ್ಷಿಣ ಭಾರತಕ್ಕೆ ಶಿಫ್ಟ್ ಮಾಡಿ ಎಂದು ಎಐಎಡಿಎಂಕೆ ರಾಜ್ಯಸಭಾ ಸದಸ್ಯ ನವನೀತ್ ಕೃಷ್ಣನ್ ಹೇಳಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ದೆಹಲಿ ವಾಯು ಮಾಲಿನ್ಯದ ವಿಚಾರವಾಗಿ ಎಐಎಡಿಎಂಕೆ ರಾಜ್ಯಸಭಾ ಸದಸ್ಯ ನವನೀತ್ ಕೃಷ್ಣನ್ ಮಾತನಾಡಿ, ಸಂಸತ್ ಭವನವನ್ನು ಸ್ಥಳಾಂತರಿಸುವಂತೆ ಸಲಹೆ ನೀಡಿದರು. ಪ್ರತಿಯೊಬ್ಬರೂ ದೆಹಲಿಯಲ್ಲಿ ಭಯದಿಂದ ಜೀವಿಸುತ್ತಿದ್ದಾರೆ. ದೆಹಲಿ ಅನಿಲ ಕೋಣೆಯಾಗಿ ಮಾರ್ಪಟ್ಟಿದೆ ಮತ್ತು ಮಾನವನ ವಾಸಸ್ಥಳಕ್ಕೆ ಇನ್ನು ಮುಂದೆ ಸರಿ ಹೊಂದುವುದಿಲ್ಲ. ಪ್ರತಿಯೊಬ್ಬ ಜೀವಿಗೂ ಮಾಲಿನ್ಯ ರಹಿತ ಪ್ರದೇಶದಲ್ಲಿ ಬದುಕುವ ಹಕ್ಕಿದೆ ಎಂದರು.

ಸಂಸತ್ ಭವನವನ್ನು ನಾಗ್ಪುರ, ಹೈದರಾಬಾದ್, ಚೆನ್ನೈ, ಬೆಂಗಳೂರು, ಮುಂಬೈ ಈ ಯಾವುದಾದರೂ ನಗರಕ್ಕೆ ಶಿಫ್ಟ್ ಮಾಡಿ ಎಂದು ಸಲಹೆ ನೀಡಿದ್ದಾರೆ.. ಇನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ಅನ್ನು ಸಹ ಸ್ಥಾಳಂತರಿಸಬೇಕು. ಈ ಬಗ್ಗೆ ಬಹಳ ಹಿಂದೆಯೇ ಎಐಎಡಿಎಂಕೆ ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರು ಕೂಡ ಸುಪ್ರೀಂ ಕೋರ್ಟ್ ಸ್ಥಳಾಂತರಕ್ಕೆ ಒತ್ತಾಯಿಸಿದ್ದರು ಎಂದಿದ್ದಾರೆ. ನಾಗ್ಪುರ ಅಥವಾ ಭಾರತದ ಯಾವುದೇ ಇತರ ಕೇಂದ್ರ ಸ್ಥಳಕ್ಕೆ ಸುಪ್ರೀಂ ಕೋರ್ಟ್ ಬದಲಾಯಿಸುವುದಕ್ಕಾಗಿ ತೀವ್ರವಾಗಿ ವಾದಿಸಿದ್ದರು ಎಂದರು.