ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಬೇಸತ್ತು ಮಂಡ್ಯ ಕಾಂಗ್ರೆಸ್ ನಾಯಕರು ಸುಮಲತಾಗೆ ಬಹಿರಂಗ ಬೆಂಬಲ?? ನಿಖಿಲ್ ಗತಿ??

0
377

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ಪ್ರಚಾರ ಜೋರಾಗಿದೆ. ಈಗಾಗಲೇ ಸುಮಲತಾ ಪರ ಅಧಿಕೃತವಾಗಿ ಬೆಂಬಲಕ್ಕೆ ನಿಂತ ಬಿಜೆಪಿ ನಾಯಕರು ಪ್ರಚಾರದಲ್ಲಿ ಮೊಳಗಿದ್ದಾರೆ. ಇನ್ನೂ ಕಾಂಗ್ರೆಸ್ ಕಾರ್ಯಕರ್ತರು ಕೂಡ ಸುಮಲತಾ ಪರ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷದ ದ್ವಜವನ್ನು ಎತ್ತಿ ಹಿಡಿದು ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿ ಬಿಜೆಪಿ ಕಾಂಗ್ರೆಸ್ ಎರಡು ವಿರೋಧ ಪಕ್ಷಗಳು ಆದರು ಪಕ್ಷೇತರ ಅಭ್ಯರ್ಥಿಗಳ ಪರ ಒಂದಾಗಿ ಪ್ರಚಾರಕ್ಕೆ ಇಳಿದಿರುವುದು ಇತಿಹಾಸ ಎನ್ನುತ್ತಿದ್ದಾರೆ.

Also read: ಇತ್ತೀಚೆಗೆ ರೈಡ್-ಗಳಿಗೆ ಭಾರಿ ಸುದ್ದಿಯಾಗಿದ್ದ ಐ.ಟಿ. ಡಿಪಾರ್ಟ್-ಮೆಂಟ್ ಅಧಿಕಾರಿ ಲಂಚ ಸ್ವೀಕರಿಸುವಾಗ ಸಿಬಿಐ ಬಲೆಗೆ!!

ಹೌದು ಕಾಂಗ್ರೆಸ್ ನಾಯಕರು ಬಹಿರಂಗ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡೇ ನೀಡ್ತೀವಿ ಎಂದಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿದ್ದು, ಈ ಮೈತ್ರಿ ಬಗ್ಗೆ ಹಲವು ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನವಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಶ್ರೀರಂಗಪಟ್ಟಣ ಕಾಂಗ್ರೆಸ್ ನಾಯಕರು ಮೈತ್ರಿಯ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಕಷ್ಟ ಸುಖ‌ ಕೇಳಲು ಯಾವ ನಾಯಕರು ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮೊಮ್ಮಗನನ್ನು ಬೆಳೆಸಲು ಮಂಡ್ಯವನ್ನ ಜೆಡಿಎಸ್ ಆಯ್ಕೆ ಮಾಡಿಕೊಂಡಿದೆ. ಇದರಿಂದ ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ಅಂಬಿ ಅಣ್ಣನ ಋಣ ತೀರಿಸಲು ನಾವೂ ಸುಮಲತಾ ಬೆಂಬಲಿಸುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಹೈಕಮಾಂಡ್ ಗೆ ಕಿಮ್ಮತ್ತು ನೀಡುತ್ತಿಲ್ಲ ಕೈ ನಾಯಕರು?

Also read: ಇವು ಶೋಕಿ ಎತ್ತುಗಳು ಬಿಸಿಲಿಗೆ ಬಂದಿವೆ ಸ್ವಲ್ಪ ರೈತರ ಕಷ್ಟಗಳು ಅರ್ಥವಾಗಲಿ; ಎಂದ ಕುಮಾರಸ್ವಾಮಿಗೆ ಯಶ್ ಕೊಟ್ಟ ಉತ್ತರ ಏನು ಗೊತ್ತಾ??

ಮಂಡ್ಯ ಕ್ಷೇತ್ರವನ್ನು ದೋಸ್ತಿ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಜೆಡಿಎಸ್‌ನಿಂದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕಣಕ್ಕಿಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಅವರನ್ನು ಬೆಂಬಲಿಸಬೇಕೆಂಬ ಹೈಕಮಾಂಡ್ ಸೂಚನೆಗೆ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಯಾವುದೇ ಕಿಮ್ಮತ್ತು ನೀಡುತ್ತಿಲ್ಲ ಎಂಬುದು ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಜನಸ್ತೋಮದಿಂದ ಬಹಿರಂಗವಾಗಿತ್ತು. ಆ ದಿನವೇ ಬಹುತೇಕವಾಗಿ ಮೈತ್ರಿ ಸರ್ಕಾರಕ್ಕೆ ತಿಳಿದಿತ್ತು.

ಏಕೆಂದರೆ ಸುಮಲತಾ ನಾಮಪತ್ರ ಸಲ್ಲಿಕೆ ಬಳಿಕ ಉತ್ಸಾಹದಿಂದಲೇ ಹಲವು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಕೊಂಡರು. ವರಿಷ್ಠರ ಮಾತಿಗೆ ಕ್ಯಾರೇ ಅನ್ನದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಬ್ಲಾಕ್ ಮಟ್ಟದ ನಾಯಕರು ಸುಮಲತಾ ವೇದಿಕೆಗೆ ಬರುವ ಮುಂಚೆ ವೇದಿಕೆ ಮೇಲೆ ಹತ್ತಿ ಪ್ರಚಾರ ಭಾಷಣ ಮಾಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಎದೆಬಡಿತ ಶುರುವಾಗಿತ್ತು ಎಂದು ಸುಮಲತಾ ಬೆಂಬಲಿಗರು ಹೇಳಿದ್ದರು. ಈಗ ಮತ್ತೆ ಬಹಿರಂಗವಾಗಿ ಹೇಳಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರಕ್ಕೆ ಇಳಿದಿದ್ದಾರೆ.

ನೂರು ಬಾವುಟ ಹಿಡಿದು ಪ್ರಚಾರ ಮಾಡುತ್ತೇವೆ.

Also read: ಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ. ಮೈತ್ರಿ ಸರ್ಕಾರವೂ ಉರುಳಿ ಬೀಳಲಿದೆ ಬಿಜೆಪಿ ಮುಖಂಡ ಕೆ. ಎಸ್ ಈಶ್ವರಪ್ಪ..

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಪರ ಪ್ರಚಾರ ಮಾಡಬೇಡಿ ಎನ್ನುವ ಹಕ್ಕು ಯಾರಿಗೂ ಕೂಡ ಇಲ್ಲ. ಒಂದಲ್ಲ ನೂರು ಬಾವುಟ ಹಿಡಿದು ಪ್ರಚಾರ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಗಂಗಾಧರ್ ಅವ್ರನ್ನ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು ಅಂಬರೀಶ್. ಗಂಗಾಧರ್ ಅಂಬರೀಶ್ ಅವರ ಋಣ ತೀರಿಸಲು ನಮ್ಮೆಲ್ಲರಿಗಿಂತ ಮೊದಲು ಸುಮಲತಾ ಪರ ನಿಲ್ಲಬೇಕಿತ್ತು ಎಂದಿದ್ದಾರೆ. ಇನ್ನು ಹಾಲಿ ಎಂಪಿಗಳಿರುವ ಕ್ಷೇತ್ರಗಳನ್ನು ಆಯಾ ಪಕ್ಷಗಳಿಗೆ ಬಿಡುವುದಾಗಿ ಹೇಳಿಕೊಂಡು ತುಮಕೂರನ್ನ ಜೆಡಿಎಸ್ ಕಿತ್ತುಕೊಂಡಿದೆ. ಮಂಡ್ಯದಲ್ಲಿ ಮೊಮ್ಮಗನನ್ನ ಬೆಳೆಸಲು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಸಭೆಯಲ್ಲಿ ರಾಜ್ಯ ನಾಯಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.