ಗೆಲುವಿಗೆ ಇಲ್ಲುಂಟು ಎಂಟು ಸೂತ್ರ

0
708

ಜೀವನದಲ್ಲಿ ಗೆಲುವು ಒಡೆಯಲು ವಿದ್ಯಾರ್ಥಿ ಜೀವನ ಪ್ರಮುಖ ಮೆಟ್ಟಿಲು. ಬದುಕಿನಲ್ಲಿ ಯಶಸ್ಸು ಪಡೆಯಲು ಇಲ್ಲೊಂದಿಷ್ಟು ಸೂತ್ರಗಳನ್ನು ನೀಡಲಾಗಿದೆ. ದಿನನಿತ್ಯ ಇದು ನಿಮ್ಮಗಮನದಲ್ಲಿರಲಿ. ಯಶಸ್ಸು ನಿಮ್ಮದಾಗುತ್ತದೆ.

1)ಅಹಂಕಾರಿಯಾಗಬೇಡಿ; ನಿಮ್ಮಲ್ಲಿ ಅಹಂಕಾರ ಇದ್ದರೆ ಯಾರೂ ನಿಮ್ಮನ್ನು ಇಷ್ಟಪಡುವುದಿಲ್ಲ. ಜೀವನದಲ್ಲಿ ನಿಮ್ಮ ಸಾಧನೆಗೆ ಅಹಂ ಅಡ್ಡಿಯಾಗುತ್ತದೆ.

2)ಆತ್ಮಗೌರವ ಇರಲಿ: ಮೊದಲಿಗೆ ನಿಮ್ಮನ್ನು ನೀವು ಗೌರವಿಸುವುದನ್ನು ಕಲಿಯಿರಿ. ಆತ್ಮಗೌರವವೆನ್ನುವುದು ಯಶಸ್ಸಿಗೆ ಏಣಿಇದ್ದಂತೆ.

3)ಗುರಿಇರಬೇಕು:ವಿದ್ಯಾರ್ಥಿದೆಸೆಯಲಲ್ಲೇ ಮುಂದೆನಾಗುವೆ ಎಂಬ ಸ್ಪಷ್ಟ ಗುರಿ ಹಾಕಿಕೊಳ್ಳಿ. ಅದಕ್ಕೆ ಬೇಕಾದ ಪ್ರಯತ್ನವನ್ನು ಹಾಕಿ.

4)ವಿಳಂಬ ಮಾಡದಿರಿ: ಇಂದಿನ ಕೆಲಸ ಇಂದೇ ಮಾಡಿ. ಕಾಲ ಮಿಂಚಿ ಹೋದ ನಂತರ ಏನು ಮಾಡಲಾಗುವುದಿಲ್ಲ. ಸಮಯ ವ್ಯರ್ಥ ಮಾಡದಿರಿ.

5)ದೂರದೃಷ್ಟಿ ಇರಲಿ: ಜೀವನದಲ್ಲಿ ಯಶಸ್ಸು ಪಡೆಯಲು ತುಂಬಾ ಸಮಯ ಬೇಕಾಗುತ್ತದೆ. ಅದಕ್ಕಾಗಿ ನೀವು ದೂರದೃಷ್ಟಿಯನ್ನುಟ್ಟುಕೊಳ್ಳಬೇಕು.

6)ಎರಡು ದೋಣಿಗೆ ಕಾಲಿಡಬೇಡಿ: ಯಾವುದಾದರೂ ಒಂದು ಗುರಿ ಇಟ್ಟುಕೊಳ್ಳಿ, ಎರಡೆರಡು ಗುರಿ ಬೇಡ.

7)ತರಬೇತಿ ಪಡೆಯಿರಿ: ನೀವು ಮುಂದೇನಾಗಬೇಕೋ ಆ ಕುರಿತು ಈಗಲೇ ತರಬೇತಿ ಪಡೆಯಲು ಆರಂಭಿಸಬಹುದು.

8) ಪರಿಶ್ರಮ ಪಡಿ: ಈ ಜಗತ್ತಿನಲ್ಲಿ ಸಾಧಕರಿಗೆ ಯಶಸ್ಸು ಹಾಗೇ ಬಂದಿಲ್ಲ. ಅದಕ್ಕೆ ಅವರು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ.