ಯಾವುದೇ ದಾಖಲೆ ಇಲ್ಲದೆ ಮಂಡ್ಯ ಯೋಧ ಹುತಾತ್ಮ; ಕುಟುಂಬಕ್ಕೆ ವಿಮೆ ಹಣ ನೀಡಿ ಮಾನವೀಯತೆ ಮೆರೆದ LIC

0
626

ಪುಲ್ವಾಮದಲ್ಲಿ ಸಂಭವಿಸಿದ ಭೀಕರ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಅಷ್ಟೇ ಅಲ್ಲದೆ ಪ್ರತೀ ಭಾರತೀಯನ ಮನಸ್ಸಲ್ಲಿ ಕಿಚ್ಚು ಹೊತ್ತಿಸುತ್ತಿರುವ ಈ ದುರ್ಘಟನೆ ಕಲ್ಲು ಹೃದಯವನ್ನೂ ಕರಗುವಂತೆ ಮಾಡುತ್ತಿದೆ. ಈ ಎಲ್ಲ ಘಟನೆ ಭಾರತೀಯ ಸೈನ್ಯೆವನ್ನು ಮತ್ತಷ್ಟು ಎಚ್ಚರಗೊಳಿಸಿದೆ. ಇದನೆಲ್ಲ ನೋಡಿದ ಯುವಕರು ಸೈನ್ಯೆ ಸೇರಲು ಮತ್ತಷ್ಟು ಹುರಿದುಂಬಿಸಿದೇ ಪಾಪಿಗಳ ಮಟ್ಟಹಾಕಲು ಇಡಿ ದೇಶವೇ ಒಂದಾಗಿದೆ. ಅದರಲ್ಲಿ ಪುಲ್ವಾಮ ದುರ್ಘಟನೆಯಲ್ಲಿ ರಾಜ್ಯದ ಹೀರೋ ಆದ ಗುರು ಅವರಿಗೆ LIC ಮಂಡ್ಯ ಬ್ರಾಂಚ್​​​ನಿಂದ ನಾಮಿನಿ ಖಾತೆಗೆ 3,82,199 ರೂ ವಿಮೆ ಮರಣದಾವೆ ಮೊತ್ತವನ್ನು ನೀಡಿದೆ.

Also read: ನಿಮಗೂ ಹುತಾತ್ಮ ಸೈನಿಕರ ಕುಟುಂಬಗಳಿಗೆ ಧನ ಸಹಾಯ ಮಾಡುವ ಇಚ್ಛೆ ಇದ್ರೆ ಈ ಆ್ಯಪ್​ ಮೂಲಕ ಹುತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಿ..

ಹೌದು ವೀರಮರಣವಪ್ಪಿದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಭಾರತೀಯ ಜೀವ ವಿಮಾ ನಿಗಮ ತಕ್ಷಣ ವಿಮಾ ಮೊತ್ತವನ್ನು ತಲುಪಿಸಿದೆ. ಯಾವುದೇ ದಾಖಲೆ, ಮರಣ ಪ್ರಮಾಣ ಪತ್ರವನ್ನೂ ಕೇಳದೆ LIC ಮಂಡ್ಯ ಬ್ರಾಂಚ್ ನಿಂದ ನಾಮಿನಿ ಖಾತೆಗೆ 3,82,199 ರೂ ವಿಮೆ ಮರಣದಾವೆ ಮೊತ್ತವನ್ನು ನೀಡಿದೆ. ಯಾವುದೇ ದಾಖಲೆಯನ್ನೂ ಕೇಳದೆ LIC ಹಣ ನೀಡಿದೆ. ಪಾಲಿಸಿ ನಂ 725974544ನಲ್ಲಿ ಯೋಧ ಗುರು ವಿಮೆ ಮಾಡಿಸಿದ್ದು, ಅವರು ಹುತಾತ್ಮರಾಗಿದ್ದ ವಿಚಾರ ತಿಳಿಯುತ್ತಿದ್ದಂತೆ ನಾಮಿನಿ ಖಾತೆಗೆ ಹಣ ವರ್ಗಾವಣೆ ಮಾಡಿದೆ. ಯಾವುದೇ ರೀತಿ ದಾಖಲೆ ಪತ್ರಗಳಿಲ್ಲದೇ ಹಣ ನೀಡುವ ಮೂಲಕ ಯೋಧನ ವಿಚಾರದಲ್ಲಿ ಕಂಪನಿ ಮಾನವೀಯತೆ ಮೆರೆದಿದೆ. ವಿಮೆ ಕಂಪನಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಿಎಂ ಕುಮಾರಸ್ವಾಮಿ 25 ಲಕ್ಷ ಪರಿಹಾರ:

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಯೋಧ ಗುರು ಕುಟುಂಬಕ್ಕೆ ಸಿಎಂ ಕುಮಾರಸ್ವಾಮಿ 25 ಲಕ್ಷ ರೂ. ಪರಿಹಾರ ಘೋಷಿಸಿದ್ಧಾರೆ. ಅಷ್ಟೇ ಅಲ್ಲದೇ ಹುತಾತ್ಮ ಗುರು ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ಧಾರೆ. ಇಂದು ಸಂಜೆ 4 ಗಂಟೆಗೆ ಮದ್ದೂರಿನ ಗುಡಿಗೆರೆಗೆ ತೆರಳಿ ಗುರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಇಂದು ಸಂಜೆ ಗುಡಿಗೆರೆಗೆ ತೆರಳುವುದಾಗಿ ತಿಳಿಸಿದರು. ಪಾರ್ಥಿವ ಶರೀರ ರವಾನೆ ಮಾಡಲು ಸೇನಾ ಹೆಲಿಕಾಪ್ಟರ್​ ಕೇಳಿದ್ದೆ. ಇಲ್ಲಿ ಪ್ರತ್ಯೇಕವಾಗಿ ಸೇನಾ ಹೆಲಿಕಾಪ್ಟರ್ ವ್ಯವಸ್ಥೆ ಕಷ್ಟ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ರಸ್ತೆ ಮಾರ್ಗದ ಮೂಲಕವೇ ಎಲ್ಲಾ ಕಡೆ ವಾಹನದಲ್ಲೇ ಪಾರ್ಥಿವ ಶರೀರ ಕಳಿಸಿದ್ದೇವೆ ಎಂದರು.

ಗುರು ಕುಟುಂಬಕ್ಕೆ ಬಿಬಿಎಂಪಿಯಿಂದ 14 ಲಕ್ಷ

ಮಂಡ್ಯದ ವೀರಯೋಧನ ಗುರು ಕುಟುಂಬಕ್ಕೆ ಬಿಬಿಎಂಪಿಯು 14 ಲಕ್ಷ ರೂ ಸಹಾಯ ಧನ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 42 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಅದರಲ್ಲಿ ಮಂಡ್ಯ ಮೂಲದ ಗುರು ಕೂಡ ಒಬ್ಬರು.

ಪಂಜಾಬ್‌ ಸರ್ಕಾರದಿಂದ ಪ್ರತಿ ಹುತಾತ್ಮ ಯೋಧರ ಕುಟುಂಬಕ್ಕೆ 12 ಲಕ್ಷ:

ಪಂಜಾಬ್ ಸರ್ಕಾರವು ಪುಲ್ವಾಮಾ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ರಾಜ್ಯದ ನಾಲ್ಕು ಸೈನಿಕರ ಕುಟುಂಬಕ್ಕೆ 12 ಲಕ್ಷ ರೂ ಪರಿಹಾರವನ್ನು ಘೋಷಿಸಿದೆ. ಮತ್ತು ಒಡಿಶಾ ಸರ್ಕಾರದಿಂದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ಒಡಿಶಾದ ಜವಾನರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರವನ್ನು ಘೋಷಿಸಿದೆ.

ಹುತಾತ್ಮ ಯೋಧ ಗುರು ಅವರ ಪಾರ್ಥಿವ ಶರೀರ ಹೆಚ್ ಎ ಎಲ್ ನಿಲ್ದಾಣದಿಂದ ಟ್ರಿನಿಟಿ, ಎಂ.ಜಿ ರೋಡ್, ಟೌನ್ ಹಾನ್, ಬಿಜಿಎಸ್ ಫ್ಲೈ ಓವರ್, ನಾಯಂಡಹಳ್ಳಿ ರಿಂಗ್ ರೋಡ್, ನೈಸ್ ರೋಡ್ ಎಂಟ್ರಿ, ನೈಸ್ ರೋಡ್ ಮುಖಾಂತರ, ಕೆಂಗೇರಿ ಮೈಸೂರು ರಸ್ತೆ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮದ್ದೂರಿನಿಂದ ಗುಡಿಗೆರೆ ಕಾಲೋನಿಗೆ ತಲುಪಲಿದೆ.

Also read: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ವೀರಮರಣ ಹೊಂದಿದ ‘ಮಂಡ್ಯದ ಗುರು’ ತಮ್ಮ ತಾಯಿಗೆ ಹೇಳಿದ ಕೊನೆಯ ಮಾತೇನು??