ಸ್ವಂತ ಮಗುವಿನ ಆಸೆಗೆ 6 ವರ್ಷದ ಮಗುವನ್ನು ಕತ್ತು ಹಿಸುಕಿ ಟೆರೇಸ್‌ನಿಂದ ಎಸೆದು ಕೊಲೆ ಮಾಡಿದ ಮಲತಾಯಿ.!

0
355

ಮಲತಾಯಿ ಒಬ್ಬಳು 6 ವರ್ಷದ ಮಗುವನ್ನು ಕತ್ತು ಹಿಸುಕಿ ಮನೆಯ ಟೆರೇಸ್‌ನಿಂದ ಎಸೆದ ಘಟನೆ ಚನೈ ಸೆಲೈಯೂರ್‌ ನಲ್ಲಿ ನಡೆದಿದ್ದು, ಘಟನೆಯಲ್ಲಿ ಮಗು ಮೃತಪಟ್ಟಿದ್ದು, 28 ವರ್ಷದ ಮಲತಾಯಿಯನ್ನು ಬಂಧಿಸಲಾಗಿದೆ. ಕೊಲೆ ಮಾಡಿದ ಪಾಪಿ ತಾಯಿ ಮಗು ನಾಪತ್ತೆಯಾಗಿದೇ ಎಂದು ಗಂಡನ ಜೊತೆಗೆ ಏನು ತಿಳಿಯದಂತೆ ಮಗು ಹುಡುಕುತ್ತಾ ನಾಟಕ ಮಾಡಿದ್ದಾಳೆ, ಗಂಡ ಕೆಲಸಕ್ಕೆ ಹೋಗಿರುವಾಗ ಈ ಕೃತ್ಯವನ್ನು ಎಸಗಿದ್ದಾಳೆ, ಇದಕ್ಕೆ ಕಾರಣವನ್ನು ತಿಳಿಸಿದ ಪೊಲೀಸರು ಎರಡು ರೀತಿಯಲ್ಲಿ ಕೊಲೆಯಾಗಿದೆ ಎಂದು ತಿಳಿಸಿದ್ದಾರೆ.

Also read: ಕ್ಷುಲ್ಲಕ ವಿಚಾರಕ್ಕೆ ಗಂಡ-ಹೆಂಡತಿಯ ಕಿತ್ತಾಟ; ಹುಚ್ಚು ಗುದ್ದಾಟದಲ್ಲಿ 5 ತಿಂಗಳ ಮಗುವನ್ನೇ ಕೊಂದರು.!

ಹೌದು ತಾಯಿ ಇಲ್ಲದ ಮಕ್ಕಳಿಗೆ ಮಲತಾಯಿ ಹೇಗೆ ನೋಡಿಕೊಳ್ಳುತ್ತಾಳೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ, ಆದರೆ ಕೊಲೆ ಮಾಡುವಷ್ಟು ಕೆಟ್ಟ ಮನಸ್ಥಿತಿ ಹೆಣ್ಣಿಗೆ ಇರುವುದು ಅಮಾನವಿತೆ ಎನ್ನಲಾಗಿದೆ. ಈ ಪ್ರಕರಣ ಕುರಿತಂತೆ ಪೊಲೀಸ್ ಮೂಲಗಳ ಪ್ರಕಾರ, ಮೃತ ಮಗು ರಾಘವಿ, ಪಾರ್ಥಿಬನ್ ಮತ್ತು ಅವರ ಮೊದಲ ಪತ್ನಿ ಶರಣ್ಯ ದಂಪತಿಗೆ ಜನಿಸಿದಳು, ಆದರೆ ಶರಣ್ಯ ಶರಣ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಮಗು ಇನ್ನೂ ಚಿಕ್ಕದು ಇದ್ದರಿಂದ ಒಂದೇ ವರ್ಷದಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಪಡೆದ ಸೂರ್ಯಕಾಳ ಎನ್ನುವ ಯುವತಿಯನ್ನು ಮದುವೆ ಮಾಡಿಕೊಂಡಿದ್ದ, ಇವರಿಗೆ ಒಂದು ಮಗು ಕೂಡ ಆಗಿತ್ತು.

Also read: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಸಿಟ್ಟಿಗೆದ್ದು ಪತ್ನಿಯ ತಲೆಯನ್ನೇ ಬೋಳಿಸಿದ ಭೂಪ; ಕೊನೆಗೆ ಏನಾಯಿತು ನೋಡಿ.!

ಇವರ ನಡುವೆ ಜಗಳ ಕೂಡ ಶುರುವಾಗಿ ಮತ್ತೊಂದು ಮಗು ಬೇಕು ಎಂದು ಸುರ್ಯಕಲಾ ತಿಳಿಸಿದಳು ಆದರೆ ಗಂಡ ಈಗಾಗಲೇ ಎರಡು ಮಕ್ಕಳು ಇದ್ದಾರೆ ಮತ್ತೊಂದು ಮಗುವೇಕೆ ಎಂದು ನಿರಾಕರಿಸಿದರು ಇದಕ್ಕೆ ಕೊಪಿತಗೊಂಡು ಈ ಕೃತ್ಯವನ್ನು ಮಾಡಿದ್ದು, ಗಂಡ ಪಾರ್ಥಿಬನ್ ಕೆಲಸಕ್ಕೆ ತೆರಳಿದಾಗ, ಸೂರ್ಯಕಲಾ ಅವರು ರಾಘವಿಯನ್ನು ಕತ್ತು ಹಿಸುಕಿ ಕೊಂದು ನಂತರ ಅವರ ಮೂರು ಅಂತಸ್ತಿನ ಕಟ್ಟಡದ ಟೆರೇಸ್‌ನಿಂದ ಕೆಳಕ್ಕೆ ಎಸೆದಳು, ಮಗುವನ್ನು ಕೊಲೆ ಮಾಡಿದ ನಂತರ ಸೂರ್ಯಕಲಾ ತನ್ನ ಗಂಡನನ್ನು ಕರೆದು ರಾಘವಿ ಕಾಣೆಯಾಗಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ. ನಂತರ ಅವಳು ಮಗುವಿಗೆ ತಮ್ಮ ನಿವಾಸದ ಸುತ್ತಲೂ ಹುಡುಕುವಂತೆ ನಟಿಸಿದ್ದಾಳೆ, ಕೊನೆಗೆ ಅವಳು ಪೊದೆಗಳ ನಡುವೆ ಸಿಲುಕಿ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದರು. ನಂತರ ಹೆಚ್ಚಿನ ವಿಚಾರಣೆಗಾಗಿ ಸುರ್ಯಕಲಾನ್ನು ಕರೆದು ವಿಚಾರಣೆ ನಡೆಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

Also read: ಪ್ರೀತಿಸಿ ಕೈಕೊಡಲು ಯತ್ನಿಸಿದ ಯುವಕನ ಮುಖಕ್ಕೆ ಪ್ರಿಯತಮೆಯಿಂದಲೇ ಆ್ಯಸಿಡ್ ದಾಳಿ..

ಏಕೆಂದರೆ ತನ್ನದಲ್ಲದ ಮೊದಲನೆಯ ಮಗು ಇಲ್ಲವಾದರೆ ಇನ್ನೊಂದು ಮಗುವನು ಮಾಡಿಕೊಳ್ಳಬಹುದು ಎನ್ನುವುದು ಅವಳ ಇಚ್ಛೆಯಾಗಿತ್ತು, ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಘಟನೆಗೆ ಮತ್ತೊಂದು ಕಾರಣವನ್ನು ತಿಳಿಸಿದ ಪೊಲೀಸರು “ನಿಜವಾದ ಸಮಸ್ಯೆ ಏನೆಂದರೆ, ಶರಣ್ಯಾ ಅವರ ತಾಯಿ ವಲಮತಿ ದಂಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ವಲಮತಿ ಅವರು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು ಸೂರ್ಯಕಲಾ ಈ ಬಗ್ಗೆ ಅಸಮಾಧಾನ ಹೊಂದಿದ್ದರು” ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಇದೇ ಕಾರಣಕ್ಕೆ ರಾಘವಿ ಅಜ್ಜಿ ವಲರ್ಮತಿ ತಮ್ಮ ಊರಿಗೆ ಹೋಗಿದ್ದಾಗ ಹಿಂತಿರುಗದಂತೆ ತಡೆಯಲು ಮಗುವನ್ನು ಕೊಲೆ ಮಾಡಿದಳು” ಎಂದು ತಿಳಿಸಿದ್ದಾರೆ.

ಮಗು ಮೃತವಾದ ಸ್ಥಿತಿ ನೋಡಿದರೆ ಮೊದಲೇ ಅನುಮಾನ ಮೂಡಿತ್ತು ಮಗು ಮೇಲಿನಿಂದ ಬೀಳಲು ಟೆರೇಸ್ ಗೋಡೆಗಳು ತುಂಬಾ ಎತ್ತರದಲ್ಲಿದವೂ ಆದರೆ ಮಗು ಹೇಗೆ ಬಿಳ್ಳಲು ಸಾಧ್ಯವೆಂದು ಅನುಮಾನದ ಮೇಲೆ ಸೂರ್ಯಕಲಾಳಿಗೆ ವಿಚಾರಣೆ ನಡೆಸಿದ್ದಾಗ ನಿಜವಾದ ಸತ್ಯ ಬೆಳಕಿಗೆ ಬಂದಿದೆ.