ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ; ಭಿಕ್ಷುಕಿಯ ಚೆಕ್ ನೋಡಿದ ಬ್ಯಾಂಕ್​ ಅಧಿಕಾರಿಗಳಿಗೆ ಶಾಕ್.!

0
397

ಈಗಿನ ಕಾಲದಲ್ಲಿ ಪ್ರತಿನಿತ್ಯವೂ ದುಡಿದರು ಜೀವನ ಪೂರ್ತಿ ಸಾಲ ಮಾಡಿಕೊಂಡು ಚಿಂತೆಯಲ್ಲೇ ಸಾಯಿವ ಪರಿಸ್ಥಿತಿ ಇದೆ. ಆದರೆ ಭಿಕ್ಷೆಕರು ಮಾತ್ರ ಯಾವುದೇ ಕೆಲಸ ಮಾಡದೆ ಕೋಟ್ಯಾಂತರ ಹಣ ಗಳಿಸುತ್ತಿರುವುದು ಜನರಲ್ಲಿ ಹಲವು ಯೋಚನೆಯನ್ನು ಹುಟ್ಟುಹಾಕಿದೆ, ಏಕೆಂದರೆ ಒಂದು ರೂಪಾಯಿಗಾಗಿ ಭಿಕ್ಷೆ ಬೇಡುವ ಜನರು ಹೇಗೆಲ್ಲ ಕೋಟಿ- ಕೋಟಿ ಹಣ ಗಳಿಸುತ್ತಿದ್ದಾರೆ ಎನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ. ಅದಕ್ಕೆ ಸಾಕ್ಷಿಯಾಗಿ ಇಲ್ಲೊಬ್ಬಳು ಭಿಕ್ಷುಕಿಯ ಬ್ಯಾಂಕ್ ಖಾತೆ ನೋಡಿದರೆ ದಂಗಾಗುವುದು ಗ್ಯಾರಂಟಿ.

Also read: ಮೃತಪಟ್ಟ ಬಿಕ್ಷುಕನ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ; ಭಿಕ್ಷುಕ ಸಂಗ್ರಹಿಸಿಟ್ಟಿ ಹಣ ಎಣಿಸುವಷ್ಟರಲ್ಲಿ ಪೊಲೀಸರೇ ಸುಸ್ತು.!

ಹೌದು ಎರಡು ದಿನಗಳ ಹಿಂದೆ ಮುಂಬೈನಲ್ಲಿ ರೈಲ್ವೆ ಹಳಿ ದಾಟುವಾಗ ಸಾವನ್ನಪ್ಪಿದ ಭಿಕ್ಷುಕನ ಮನೆಯಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಹಣ ಪತ್ತೆಯಾದ ಬೆನ್ನಲ್ಲೇ ಅದೇ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅರಬ್ ದೇಶವಾದ ಲೆಬನನ್​ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಭಿಕ್ಷುಕಿಯೊಬ್ಬಳ ಖಾತೆಯಲ್ಲಿ ಬರೋಬ್ಬರಿ 5.62 ಕೋಟಿ ರೂ. ಪತ್ತೆಯಾಗಿದೆ. ಲೆಬನನ್​ನ ಜಮ್ಮಲ್ ಟ್ರಸ್ಟ್​ ಬ್ಯಾಂಕ್​ (ಜೆಟಿಬಿ)ನಲ್ಲಿ ಹಣವಿಟ್ಟಿದ್ದ ವಾಫಾ ಮಹಮ್ಮದ್ ಎಂಬ ಭಿಕ್ಷುಕಿ ಈಗ ಕೋಟ್ಯಧಿಪತಿ. ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿಷಯ ಆ ಭಿಕ್ಷುಕಿಗೇ ಗೊತ್ತಿರಲಿಲ್ಲ ಎಂಬುದು ಇನ್ನೊಂದು ವಿಶೇಷ. ಈ ಹಿನ್ನೆಲೆಯಲ್ಲಿ ಜೆಟಿಬಿ ಬ್ಯಾಂಕ್​ನ ಅಧಿಕಾರಿಗಳು ತಮ್ಮ ಬ್ಯಾಂಕ್​ನ ಗ್ರಾಹಕರ ಹಣ ಸುರಕ್ಷಿತವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡಿದ್ದಾರೆ.

Also read: ಬಡ ಮಹಿಳೆ ರೈಲ್ವೆ ಸ್ಟೇಷನ್ ನಲ್ಲಿ ಹಾಡಿದ ಒಂದೇ ಹಾಡಿನಿಂದ ರಿಯಾಲಿಟಿ ಶೋಗೆ ಎಂಟ್ರಿ; ಬೇರೆ ಬೇರೆ ಭಾಷೆಯ ರಿಯಾಲಿಟಿ ಶೋಗಳಿಂದ ಬರುತ್ತಿವೆ ಆಪರ್..

ವಾಫಾ ಮಹಮದ್ ಅವಾದ್​ ಎಂಬ ಮಹಿಳೆಯ ಹೆಸರಿನಲ್ಲಿ ಬ್ಯಾಂಕ್​ಗೆ ಚೆಕ್​ ಬಂದಾಗ ಪರಿಶೀಲಿಸಿದ ಸಿಬ್ಬಂದಿಗೆ ಆಕೆಯ ಖಾತೆಯಲ್ಲಿ ಸುಮಾರು 6 ಕೋಟಿ ರೂ. ಇರುವ ವಿಷಯ ತಿಳಿದು ಶಾಕ್ ಆಗಿದ್ದಾರೆ. ಆಸ್ಪತ್ರೆಯ ಮುಂದೆ ದಿನವಿಡೀ ಭಿಕ್ಷೆ ಬೇಡುತ್ತಿರುವ ವಾಫಾ ಅಲ್ಲಿನ ಸಿಬ್ಬಂದಿಗೆಲ್ಲ ಬಹಳ ಪರಿಚಿತಳು. ಸುಮಾರು 10 ವರ್ಷಗಳಿಂದ ಆಕೆ ಅಲ್ಲೇ ಭಿಕ್ಷೆ ಬೇಡುತ್ತಿರುವುದು ವಿಶೇಷ. ತನ್ನ ಹೆಸರಿನಲ್ಲಿದ್ದ ಹಣವನ್ನು ಬೇರೆ ಖಾತೆಗೆ ಡ್ರಾನ್ಸ್​ಫರ್ ಮಾಡಲು ವಾಫಾ ಚೆಕ್ ನೀಡಿದ್ದಳು. ಆಗ ಬ್ಯಾಂಕ್​ ಸಿಬ್ಬಂದಿಗೆ ಆಕೆ ಕೋಟ್ಯಧಿಪತಿ ಎಂಬ ವಿಷಯ ಗೊತ್ತಾಗಿದೆ. ಸೆಪ್ಟೆಂಬರ್ 30 ದಿನದಂದು ಆಕೆ ಬ್ಯಾಂಕ್​ಗೆ ನೀಡಿರುವ ಚೆಕ್​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Also read: ಕಸಕ್ಕೂ ಬಂತೂ ಭಾರಿ ಬೇಡಿಕೆ; ಕಸ ತಂದುಕೊಟ್ರೆ ಊಟ, ತಿಂಡಿ ಫ್ರೀ! ಅರ್ಧ ಕೆಜಿ ಕಸಕ್ಕೆ ಟಿಫನ್, ಒಂದು ಕೆಜಿ ಕಸಕ್ಕೆ ಊಟ..

ಕಳೆದ ವರ್ಷವೂ ಕೂಡ ಇಂತಹದೆ ಪ್ರಕರಣ ಬೆಳಕಿಗೆ ಬಂದಿತ್ತು, ಪಟನಾ ರೈಲ್ವೇ ನಿಲ್ದಾಣದಲ್ಲಿ ಪ್ರತಿನಿತ್ಯ ಭಿಕ್ಷೆ ಬೇಡಿ ಹಣ ಸಂಪಾದಿಸಿ 1.25 ಕೋಟಿ ರೂ. ಆಸ್ತಿಯ ಒಡೆಯನಾಗಿದ್ದ ಕುಮಾರ್ ಎನ್ನುವ ಯುವಕ ವ್ಯಾಪಾರಿಗಳಿಗೆ 10 ಲಕ್ಷ ರೂ. ಸಾಲವನ್ನು ನೀಡಿದ್ದಾನೆ. ಅಲ್ಲದೇ ಆತನ ಬ್ಯಾಂಕ್‌ ಖಾತೆಗಳಲ್ಲಿ ಠೇವಣಿ ಕೂಡ ಇತ್ತು. ಅಷ್ಟೇ ಅಲ್ಲದೆ 200 ಎಕರೆ ಭೂಮಿಯ ಒಡೆಯನಾಗಿದ್ದಾನೆ. ಈ ವಿಷಯ ರೈಲ್ವೆ ಸುರಕ್ಷಾ ಪಡೆ ಭಿಕ್ಷುಕರ ನಿರ್ಮೂಲನೆ ಅಭಿಯಾನ ಕೈಗೊಂಡಿತ್ತು. ಈ ಸಂದರ್ಭ ಭಿಕ್ಷುಕ ಕುಮಾರ್‌ ಬಳಿ ಕೋಟಿಗಟ್ಟಲೆ ಹಣ ಇರುವ ವಿಷಯ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಕುಮಾರ್‌ನಿಗೆ ಚಿಕಿತ್ಸೆ ಪಡೆದುಕೊಂಡು ಎಲ್ಲರಂತೆ ಜೀವನ ನಡೆಸುವಂತೆ ಸಲಹೆ ನೀಡಿದ್ದರು. ಆದರೆ ಅದಕ್ಕೊಪ್ಪದ ಕುಮಾರ್ ತಾನು ಗುಣಮುಖನಾದರೆ ತನಗೆ ಭಿಕ್ಷೆ ಯಾರು ನೀಡುತ್ತಾರೆ ಎನ್ನುತ್ತಿದ್ದ ಭಿಕ್ಷೆಯಿಂದಲೇ ನಾನು ಕೋಟ್ಯಾಧಿಪತಿಯಾಗಿದ್ದಾನೆ ಎಂದು ತಿಳಿಸಿದ್ದ. ಇದೆಲ್ಲ ನೋಡಿದರೆ ಬಿಕ್ಷೆಯಲ್ಲಿ ಇಷ್ಟೊಂದು ಇನ್ಕಮ್ ಇದಿಯಾ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.