ವಿಚಿತ್ರವಾದ ಅನೈತಿಕ ಸಂಬಂಧವನ್ನು ಖಂಡಿಸಿದ ತಾಯಿಯನ್ನೇ ಕೊಂದ ಮಗಳು, ಮನಕಲುಕುವ ಘಟನೆ.. ಮನುಷ್ಯತ್ವ ಎಲ್ಲಿಗೆ ಹೋಯಿತು?

0
480

Kannada News | Karnataka News

ಉತ್ತರಪ್ರದೇಶದ ಲಕ್ನೋನಲ್ಲಿ ಒಂದು ಮನಕಲುಕುವ ಘಟನೆ ನಡೆದಿದೆ. ಇದು ಮಾನವ ಕುಲಕ್ಕೆ ಕಪ್ಪು ಮಸಿ ಬಳೆಯುವಂತಹ ಪ್ರಕರಣವಾಗಿದೆ. ಹೆತ್ತ ಮಗಳೇ ತಾಯಿ ಅಂತಾನೂ ನೋಡದೆ ಕಬ್ಬಿಣದ ರಾಡ್‍ನಿಂದ ಸಾಯುವ ತನಕ ಹೊಡೆದ್ದಿದ್ದಾಳೆ. ಈಕೆ ಹೊಡೆದ ಕಾರಣ ಇನ್ನು ವಿಚಿತ್ರವಾಗಿದೆ.

ಇಂತಹ ಪ್ರಕರಣಗಳು ನಮ್ಮ ದೇಶದಲ್ಲಿ ಬಲು ಅಪರೂಪದಲ್ಲಿ ಅಪರೂಪ, ನೀವು ಹಿಂದೆಂದೂ ಕೇಳಿರಲಿಕ್ಕಿಲ್ಲ. ನಡೆದ ಘಟನೆ ಇದು, 18 ವರ್ಷದ ಯುವತಿಯೊಬ್ಬಳು ತನ್ನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯನ್ನೇ ಪ್ರೀತಿಸಿದ್ದಾಳೆ. ಇದನ್ನು ತಿಳಿದ ಮನೆಯವರು ಶಾಲೆಯನ್ನೇ ಬಿಡಿಸಿದ್ದಾರೆ.

ಹೌದು, ವಿಚಿತ್ರವೆನಿಸಿದರೂ ಇದೆ ಸತ್ಯ. ಈ ಹುಡುಗಿ ಎರಡು ತಿಂಗಳ ಹಿಂದೆಯಷ್ಟೆ ಆಕೆ ಶಿಕ್ಷಕಿಯ ಜೊತೆ ಓಡಿ ಹೋಗಿದ್ದಳು. ಆಗ ಪೊಲೀಸರ ನೆರವಿನಿಂದ ಅವಳನ್ನು ಹುಡುಕಿ ಮನೆಗೆ ಕರೆತಂದ್ದಿದರು. ಗಂಡನನ್ನು ಬಿಟ್ಟ 35 ವರ್ಷದ ಶಾಲಾ ಶಿಕ್ಷಕಿಯ ಜೊತೆ ಪ್ರೇಮದ ಬಲೆಯಲ್ಲಿ ಬಿದ್ದಿದಳು ಎಂದು ತಿಳಿದುಬಂದಿದೆ.

ಮಗಳು ಶಿಕ್ಷಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿರುವುದು ತಿಳಿದ ಬಳಿಕ ಆಕೆಯನ್ನು 11ನೇ ತರಗತಿಯಿಂದ ಬಿಡಿಸಲಾಗಿತ್ತು. ಅದೇ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದಳು, ಈಗ ತಾಯಿಯನ್ನು ಕೊಂದು ಪರಾರಿಯಾಗಿದ್ದು ಮತ್ತದೇ ಶಿಕ್ಷಕಿಯ ಬಳಿಗೇ ಹೋಗಿರಬಹುದು ಎಂದು ತಂದೆ ಅನುಮಾನಿಸಿದ್ದಾರೆ.

18 ವರ್ಷದ ಯುವತಿ 35 ವರ್ಷದ ಶಿಕ್ಷಕಿ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಇದಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಮನೆಯಲ್ಲಿದ್ದ ಕಬ್ಬಿಣದ ರಾಡಿನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದು, ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಶಾಲೆಯಿಂದ ಬಂದ ಕಿರಿಯ ಮಗಳು ರಕ್ತ ಸೋರುತ್ತ ಬಿದ್ದಿದ ತಾಯಿಯನ್ನು ಕಂಡು ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ವಿಷಯ ತಿಳಿದ ತಕ್ಷಣ ಮನೆಗೆ ಬಂದ ಪತಿ ತನ್ನ ಹೆಂಡತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಹೆಚ್ಚು ರಕ್ತಸ್ರಾವವಾಗಿದ್ದರಿಂದ ಅಲ್ಲಿಂದ ದೆಹಲಿಯ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ತೀವ್ರವಾದ ಗಾಯಗಳಿಂದ ಆಕೆ ಕೊನೆಯುಸಿರೆಳೆದ್ದಿದಾರೆ.

Also Read: ಕೋಟ್ಯಾಂತರ ಜನರಿಗೆ ಆಧಾರವಾಗಿರುವ ಗಂಗಾ ನದಿಯ ಮೂಲ ಗಂಗೋತ್ರಿ ಚಿಂತಾಜನಕ!!!