ಮಕ್ಕಳಂತೆ ಜಿಂಕೆಮರಿಗೆ ಮಹಿಳೆಯೋಬ್ಬಳು ಸ್ತನ್ಯಪಾನ ಮಾಡಿಸಿದ ಫೋಟೋಗೆ ಭಾರಿ ಮೆಚ್ಚುಗೆ; ಮಹಿಳೆ ಜಿಂಕೆಗೆ ಎದೆ ಹಾಲನ್ನು ನೀಡಿದ್ದು ಯಾಕೆ ಗೊತ್ತಾ??

0
374

ಈ ಜನರು ಪ್ರಾಣಿಗಳನ್ನು ಮಕ್ಕಳಂತೆ ಕಾಣುತ್ತಾರೆ ಎನ್ನುವ ಸುದ್ದಿ ಭಾರಿ ವೈರಲ್ ಆಗಿದೆ, ಈ ವಿಷಯಕ್ಕೆ ಹಲವರು ಹೇಳುವ ಪ್ರಕಾರ ನಾವು ಮನೆಯಲ್ಲಿ ನಾಯಿಗಳನ್ನು ತುಂಬಾ ಪ್ರೀತಿಯಿಂದ ಸಾಕಿದ್ದೇವೆ ಇವರು ಕೂಡ ಹೀಗೆ ಸಾಕಿರಬೇಕು ಎಂದು ತಿಳಿದುಕೊಂಡಿದ್ದಾರೆ. ಹಾಗೇನಾದರೂ ನಿಮಗೂ ಅನಿಸಿದರೆ ಅದು ಶುದ್ದ ತಪ್ಪು, ಏಕೆಂದರೆ ಇಲ್ಲಿನ ಜನರು ಕಾಡು ಪ್ರಾಣಿಗಳನ್ನು ಹೇಗೆ ಸಾಕುತ್ತಾರೆ ಎಂದರೆ ತಮ್ಮ ಎದೆಹಾಲನ್ನೇ ನೀಡಿ ಸಾಕುತ್ತಾರೆ. ಒಂದು ವೇಳೆ ಸ್ವಂತ ಮಕ್ಕಳಿಗೂ ಆರೈಕೆ ಕಡಿಮೆಯಾದರೂ ಪ್ರಾಣಿಗಳಿಗೆ ಮಾತ್ರ ಆರೈಕೆ ಕಡಿಮೆಯಾಗುವುದಿಲ್ಲ. ಇದಕ್ಕೆ ಸಾಕ್ಷಿಯಾಗಿ ಮಹಿಳೆಯೊಬ್ಬರು ಜಿಂಕೆ ಮರಿಗೆ ಸ್ತನ್ಯಪಾನ ಮಾಡಿಸಿದ ಫೋಟೋವೊಂದು ವೈರಲ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ.

ಜಿಂಕೆ ಮರಿಗೆ ಸ್ತನ್ಯಪಾನ?

ಹೌದು ಇದೆಲ್ಲ ಕೇಳಲು ಆಶ್ಚರ್ಯವಾದರೂ ಅಸಲಿಗೆ ಸತ್ಯವಾಗಿದೆ. ಏಕೆಂದರೆ ಈಗಿನ ಜನರು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದು ಹೆಚ್ಚಾಗಿದೆ. ಈ ಪದ್ಧತಿ ಕಾಡಿನಲ್ಲಿರುವ ಪ್ರಾಣಿಗಳಿಗೆ ಮಾತ್ರ ಮಾರಕವಾಗಿಲ್ಲ, ಪ್ರಾಣಿ ಸಂಗ್ರಾಹಾಲಯದಲ್ಲಿರುವ ಜಿಂಕೆ ಕಾಡು ಹಂದಿಯಂತ ಪ್ರಾಣಿಗಳಿಗೆ ಮಾರಕವಾಗಿದೆ. ಏಕೆಂದರೆ ಜೂ ನಲ್ಲಿ ಜಿಂಕೆಗಳು ರಾತ್ರೋರಾತ್ರಿ ಮಾಯವಾಗುತ್ತಿವೆ. ರಾಜಕೀಯ ವ್ಯಕ್ತಿಗಳ ಪಾರ್ಟಿಗೆ ಮಸಾಲೆ ಅರಿಯುತ್ತಿವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾದರೆ. ಐಎಫ್‍ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಮಹಿಳೆ ಜಿಂಕೆಮರಿಗೆ ಸ್ತನ್ಯಪಾನ ಮಾಡಿಸುವ ಫೋಟೋ ಹಾಕಿದ್ದಾರೆ. “ಬಿಷ್ಣೋಯಿ ಸಮುದಾಯ ಈ ರೀತಿ ಪ್ರಾಣಿಗಳನ್ನು ನೋಡಿಕೊಳ್ಳುತ್ತೆ. ಈ ಪ್ರಾಣಿಗಳು ಅವರಿಗೆ ತಮ್ಮ ಮಕ್ಕಳಿಗಿಂತ ಕಡಿಮೆ ಇಲ್ಲ. ಮಹಿಳೆ ಜಿಂಕೆಗೆ ಹಾಲು ಉಣಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ ಪ್ರವೀಣ್ ಕಾಸ್ವಾನ್ ಅವರು ಈ ಫೋಟೋವನ್ನು ಟ್ವೀಟ್ ಮಾಡುತ್ತಿದ್ದಂತೆ ಮೆಚ್ಚುಗೆ ಪಡೆದುಕೊಂಡಿದೆ. ಇದಕ್ಕೆ ಹಲವು ಕಾಮೆಂಟ್ಸ್ ಮಾಡಿ “ಇದು ನಿಜವಾಗಿಯೂ ಸುಂದರವಾಗಿದೆ. ಆ ಮಹಿಳೆಗೆ ನಾವು ಪ್ರಶಂಸೆ ನೀಡಬೇಕು. ಗ್ರೇಟ್ ಮದರ್” ಎಂದಿದ್ದಾರೆ.

Also read: ಅತಿಯಾಸೆ ಮತ್ತು ಜೋತಿಷ್ಯರ ಮಾತು ವ್ಯಕ್ತಿಯನ್ನು ಎಲ್ಲಿಗೆ ತರುತ್ತದೆ, ಎನ್ನುವುದಕ್ಕೆ ಶರವಣ ಭವನದ ದೋಸೆ ರಾಜನಿಗೆ ಬಂದ ಪರಿಸ್ಥಿತಿ ನೋಡಿದರೆ ತಿಳಿಯುತ್ತೆ..

ಯಾರಿವರೂ ಬಿಷ್ನೋಯಿ ಸಮುದಾಯದವರು?

ಬಾಲಿವುಡ್ ನಟ ಸಲ್ಮಾನ್ ಖಾನ್ ಜೈಲಿಗೆ ಹೋಗುತ್ತಿರುವ ಸಂಗತಿ ಖಾನ್ ಅಭಿಮಾನಿಗಳಿಗೆ ಬೇಸರ ತಂದಿರಬಹುದು, ಆದರೆ ಸಲ್ಮಾನ ಖಾನ್ ಮೇಲೆ ಕೃಷ್ಣ ಮೃಗ ಬೇಟೆಯ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿ ಅವರನ್ನು ಸೆರೆಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದ ರಾಜಸ್ತಾನದ ಬಿಷ್ನೋಯಿ ಸಮುದಾಯದ ಇತಿಹಾಸ ಕೇಳಿದರೆ ನಿಮಗೆ ಖಂಡಿತಾ ಅಚ್ಚರಿಯಾಗುತ್ತದೆ. ಹೌದು… ಕೃಷ್ಣಮೃಗಗಳಲ್ಲಿ ಪೂಜ್ಯ ಭಾವ ಕಾಣುವ, ಅವುಗಳನ್ನು ಸ್ವಂತ ಮಕ್ಕಳಂತೆ ಅಕ್ಕರೆಯಿಂದ ಪೋಷಿಸುವ ಬಿಷ್ನೋಯಿ ಸಮುದಾಯದ ಇತಿಹಾಸವನ್ನು ತಿಳಿದುಕೊಂಡರೆ ನಿಜಕ್ಕೂ ಹೆಮ್ಮೆ ಅನಿಸುತ್ತೆ. ಈ ಸಮುದಾಯದವರಿಗೆ ಕೃಷ್ಣ ಮೃಗ ಎಂದರೆ ಇವರಿಗೆ ದೇವರಿದ್ದಂತೆ.

Also read: ದೇವಸ್ಥಾನಕ್ಕೆ ಯಾವ ಕಾರಣಕ್ಕೆ ಹೋಗಬೇಕು?? ನಿಮ್ಮ ಮಕ್ಕಳಿಗೂ ಈ ರೀತಿಯ ಗೊಂದಲ ಇದ್ದರೆ, ಈ ಸ್ಟೋರಿಯ ನೀತಿ ಓದಿ!!

ಅಷ್ಟೇ ಅಲ್ಲದೆ ಮೂಲತಃ ಪ್ರಕೃತಿಯ ಆರಾಧಕರಾಗಿರುವ ಬಿಷ್ನೋಯಿಗಳು ಪ್ರಾಣಿಗಳಲ್ಲಿಯೂ ದೇವರನ್ನು ಕಾಣುತ್ತಾರೆ. ಅದರಲ್ಲಿ ಕೃಷ್ಣಮೃಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದಾರೆ, ಈ ಸಮುದಾಯದ ಜನರ ನಂಬಿಕೆಯ ಪ್ರಕಾರ ಕೃಷ್ಣಮೃಗ ಅವರ ಮನೆಯ ಸ್ವಂತ ಮಗನಂತೆ. ಹಾಗಾಗಿ ಈ ಸಮುದಾಯದ ಮಹಿಳೆಯರು ತಮ್ಮ ಮಗುವಿಗೆ ಕುಡಿಸುವ ಎದೆ ಹಾಲನ್ನು ನೀಡುತ್ತಾರೆ. ಇಂತಹ ಚಿತ್ರವನ್ನು ಐಎಫ್‍ಎಸ್ ಅಧಿಕಾರಿ ಟ್ವೀಟ್ ಮಾಡುತ್ತಿದ್ದಂತೆ ಹಲವು ವಿಚಾರಗಳು ದೇಶದ ಜನರು ಅರಿತುಕೊಂಡಿದ್ದಾರೆ.