ಸಣ್ಣ ವಿಚಾರಕ್ಕೆ ಜಗಳವಾಡಿ ಗಂಡನ ಮನೆ ಬಿಟ್ಟು ಬಂದಿದ್ದ ಹೆಂಡತಿಯನ್ನು ಸಂಸಾರ ಮಾಡಲು ಕರೆದಿದ್ದಕ್ಕೆ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಹೆಂಡತಿ.!

0
235

ಸುಖದಿಂದ ಇದ್ದ ಸಂಸಾರದಲ್ಲಿ ಸ್ವಲ್ಪ ಜಗಳ ಬಂದರೆ ಗಂಡ ಹೆಂಡತಿಯ ಸಂಬಂಧವೇ ಮುರಿದು ಬಿಳ್ಳುವುದರಲ್ಲಿ ಅನುಮಾನವಿಲ್ಲ. ಇಂತಹ ಘಟನೆಗಳು ಅಂತು ಇತ್ತೀಚಿಗೆ ತುಂಬಾ ನಡೆಯುತ್ತಿವೆ. ಸಣ್ಣ ವಿಷಯಕ್ಕೆ ಶುರುವಾದ ಜಗಳ ಕೋರ್ಟ್-ನಲ್ಲಿ ಡ್ರೈವರ್ಸ್ ವರೆಗೂ ಬರುತ್ತಿವೆ. ಇನ್ನೂ ಕೆಲವು ಜಗಳಗಳು ಕೊಲೆಯ ಹಂತಕ್ಕೆ ತಲುಪುತ್ತಿವೆ. ಗಂಡ ಹೆಂಡತಿಯ ನಡುವೆ ಹುಟ್ಟಿದ ಮಕ್ಕಳಂತೂ ಅದ್ಯಾವ ಪಾಪ ಮಾಡಿ ಹುಟ್ತಿರುತ್ತಾರೋ ಎನ್ನುವುದು ಒಂದು ಬೇಸರದ ಸಂಗತಿ. ಅದರಲ್ಲಿ ಕೆಲವರು ಮಕ್ಕಳ ಭವಿಷ್ಯ ನೋಡಿ ಏನೇ ಸಮಸ್ಯೆ ಇದ್ದರು ಸುಮ್ನೆ ಸಂಸಾರ ಮಾಡಿದರೆ ಇನ್ನೂ ಕೆಲವರು ಡೈವರ್ಸ್ ಅಷ್ಟೇ ಅಲ್ಲದೆ ಏನೇನು ಮಾಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾದ ಘಟನೆ ಇಲ್ಲಿದೆ ನೋಡಿ.

Also read: ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಅತಿಯಾಗಿ ಪ್ರೀತಿಸುವ ಗಂಡನಿಂದ ಡೈವರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ..

ಗಂಡನ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ?

ಹೌದು ಗಂಡ ಹೆಂಡತಿಯ ಜಗಳದಲ್ಲಿ ಏನೇನು ನಡೆಯುತ್ತಿದೆ ಎನ್ನುವುದಕ್ಕೆ ಇದೊಂದು ಸರಿಯಾದ ಸಾಕ್ಷಿಯಾಗಿದ್ದು, ಸಂಸಾರ ಮುರಿದುಕೊಳ್ಳುವ ಮೊದಲು ಬಹಳಷ್ಟು ಯೋಚನೆ ಮಾಡಿಕೊಳ್ಳುವುದು ಒಳ್ಳೆಯದು ಏಕೆಂದರೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮನೆಬಿಟ್ಟು ಹೋದ ಹೆಂಡತಿಯನ್ನು ಗಂಡ ಜಗಳ ಬಿಟ್ಟು ಸರಿಯಾದ ಸಂಸಾರ ನಡೆಸೋಣ ಬಾ ಎಂದಿದ್ದಕ್ಕೆ ಪತಿಯ ಮರ್ಮಾಂಗವನ್ನು ಪತ್ನಿ ಕತ್ತರಿಸಿರುವ ಅಮಾನವೀಯ ಘಟನೆ ನಡೆದಿದೆ. ಯೂನುಸ್ ಮತ್ತು ಹಸೀನಾ ಎನ್ನುವ ದಂಪತಿಗಳು ಸಣ್ಣ ಜಗಳಕ್ಕೆ ದೂರವಾಗಿದರು. ಇವರ ಮದುವೆ ಎರಡು ವರ್ಷಗಳ ಹಿಂದೆಯಷ್ಟೇ ಆಗಿತ್ತು.

Also read: ಈ ಸುಂದರಿ ಬರೋಬರಿ 250 ಕ್ಕೊ ಹೆಚ್ಚು ಯುವಕರ ಜೊತೆಗೆ ಡೇಟಿಂಗ್ ಮಾಡಿ ಕೊನೆಗೆ ನಾಯಿಯನ್ನು ಮದುವೆಯಾದ ಮಾಡೆಲ್..

ಪತಿ ಮನೆ ಬಿಟ್ಟು ಬಂದಿದ್ದ ಹಸೀನಾ ತವರು ಮನೆ ಸೇರಿದ್ದಳು. ಇಂದಲ್ಲ ನಾಳೆ ಪತ್ನಿ ಬರುತ್ತಾಳೆ ಅಂತ ಯೂನಸ್ ಎರಡು ವರ್ಷಗಳಿಂದ ಕಾಯುತ್ತಲೇ ಇದ್ದ. ಆದರೆ ಹಸೀನಾ ಮಾತ್ರ ತವರು ಮನೆಯಲ್ಲಿಯೇ ಉಳಿದಿದ್ದಳು. ಇದನ್ನು ಕಂಡ ಪತಿ ಸಣ್ಣ ಜಗಳವನ್ನು ಮುಂದುವರಿಸಿದರೆ ಸರಿ ಇರೋದಿಲ್ಲ ಎಂದು ಯೂನುಸ್ ಎರಡು ವರ್ಷಗಳ ಬಳಿಕ ಸೋಮಾಪುರಂನಲ್ಲಿರುವ ಅತ್ತೆಯ ಮನೆಗೆ ತೆರಳಿ ಪತ್ನಿ ಹಸೀನಾಳನ್ನು ಸಂಸಾರ ಮಾಡೋಣ ಬಾ ಎಂದು ಕರೆದಿದ್ದಾನೆ. ಇಷ್ಟು ದಿನ ಬಿಟ್ಟು ಈಗ ಪತ್ನಿಯನ್ನು ಕರೆಯಲು ಬಂದಿದ್ದಾನೆ ಎಂದು ಹಸೀನಾ ಮನೆಯವರು ಜಗಳಕ್ಕೆ ನಿಂತಿದ್ದಾರೆ. ಈ ನಡುವೆ ಇಬ್ಬರು ನಡೆವೆ ಜಗಳ ಶುರುವಾಗಿದೆ.

Also read: ನಿಮ್ಮ ಸಂಗಾತಿಯಲ್ಲಿ ಧಿಡೀರನೆ ಈ ರೀತಿಯ ಬದಲಾವಣೆಗಳನ್ನು ಕಂಡರೆ, ಎಚ್ಚರ ಅವರು ಬೇರೆಯವರೊಂದಿಗೆ ಸಂಬಂಧ ಬೆಳೆಸಿರಬಹುದು!!

ಪತಿಯ ಮಾತು ಕೇಳಿದ ಹಸೀನಾ ಕೋಪಗೊಂಡಿದ್ದಾಳೆ. ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿದ್ದಾರೆ. ಕುಟುಂಬಸ್ಥರ ಜೊತೆ ಸೇರಿ ಹಸೀನಾ ಪತಿ ಯೂನುಸ್‍ನನ್ನು ಕಂಬಕ್ಕೆ ಕಟ್ಟಿ ಹಾಕಿ ಮನ ಬಂದಂತೆ ಥಳಿಸಿದ್ದಾಳೆ. ಇಷ್ಟಕ್ಕೆ ಬಿಡದ ಪಾಪಿಗಳು ಅಮಾಯಕ ಗಂಡನ ಮರ್ಮಾಗವನ್ನು ಕತ್ತರಿಸಲು ಹಸಿನಾಳಿಗೆ ಹೇಳಿದ್ದಾರೆ. ಇದನ್ನು ಕೇಳಿದ ಮಹಿಳೆ ಹಸೀನಾ ಪತಿಯ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ. ಗಂಭೀರವಾಗಿ ಗಾಯಗೊಂಡ ಯೂನುಸ್ ಕಾಪಾಡುವಂತೆ ಕೂಗಿ ಅಳುತ್ತಿದ್ದ ಧ್ವನಿಯನ್ನು ಕೇಳಿದ ಸ್ಥಳೀಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ತಕ್ಷಣವೇ ಯೂನುಸ್‍ನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯೂನುಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಯಾಗಿದೆ. ಜಗಳ ಎಷ್ಟೇ ಇದ್ದರೂ ಇಂತಹ ಕೃತ್ಯವನ್ನು ಸ್ವತಹ ಪತ್ನಿಯೇ ಮಾಡುವುದು ಒಳ್ಳೆಯದಲ್ಲ. ಎಂದು ಸ್ಥಳಿಯರು ಅಭಿಪ್ರಾಯ ತಿಳಿಸಿದ್ದಾರೆ.