ಟಿಕ್‍ಟಾಕ್ ಹುಚ್ಚಿಗೆ ಗೃಹಿಣಿ ಬಲಿ; ವಿಷ ಕುಡಿಯುವುದನ್ನೂ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ..

0
292

ಕೇವಲ ಮನರಂಜನೆಗೆ ಬರುವ ಮೊಬೈಲ್ app ಗಳನ್ನು ಎಷ್ಟಕ್ಕೆ ಬೇಕು ಅಷ್ಟು ಬಳಕೆಗೆ ತೆಗೆದುಕೊಳ್ಳದೆ ಅತಿಯಾಗಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಪಬ್ಜಿ ಅಂತ ಕೆಲವು ಗೇಮ್-ಗಳಿಗೆ ಮಗ್ನರಾಗಿ ಸಾಯಿತ್ತಿರುವ ಸುದ್ದಿ ಕೇಳಿಬರುತ್ತಿತ್ತು, ಈಗ ಟಿಕ್​ಟಾಕ್ ಬಲಿ ಕಾರ್ಯಕ್ರಮ ಶುರುವಾಗಿದ್ದು ಎಲ್ಲಿಗೆ ಬಂದು ನಿಲ್ಲುತ್ತೆ ಗೊತ್ತಿಲ್ಲ. ಸದ್ಯ ಒಂದು ಗೃಹಿಣಿಯನ್ನು ಬಲಿ ತೆಗೆದುಕೊಂಡಿದ್ದು, ಮಹಿಳೆ ಈ app ಗೆ ಎಷ್ಟು ಮಗ್ನಳಾಗಿದ್ದಳು ಎನ್ನುವುದಕ್ಕೆ ವಿಷಕುಡಿಯಿವುದ್ದನ್ನು ಕೂಡ ಟಿಕ್​ಟಾಕ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Also read: ತನ್ನ ಜೀವನವನ್ನೇ ತ್ಯಾಗ ಮಾಡಿ ಮಗನ ಭವಿಷ್ಯಕ್ಕಾಗಿ ಶ್ರಮಿಸಿದ ಅಮ್ಮನಿಗೆ ಪುನರ್ ವಿವಾಹ ಮಾಡಿಸಿದ ಮಗ; ತಾಯಿಗೆ ಶುಭಾಶಯ ತಿಳಿಸಿದ್ದು ಹೀಗೆ..

ಹೌದು ಟಿಕ್​ಟಾಕ್​ ವಿಡಿಯೋ ಆ್ಯಪ್​ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಪತ್ನಿಯನ್ನು ಬೈದಿದ್ದಕ್ಕೆ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್​ನಲ್ಲಿ ನಡೆದಿದ್ದು. ತಾನು ವಿಷ ಸೇವಿಸುವುದನ್ನೂ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ಆಕೆ ಸಾವಿಗೆ ಶರಣಾಗಿದ್ದಾಳೆ. ಮೃತ ದುರ್ದೈವಿಯನ್ನು ಅನಿತಾ(26) ಎಂದು ಗುರುತಿಸಲಾಗಿದೆ. ಅನಿತಾ ಪಝನಿವೆಲ್ ಜೊತೆ ಮದುವೆಯಾಗಿದ್ದಳು. ಪತಿ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದು ದಂಪತಿಗೆ 7 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇದೀಗ ಅವರು ಆತ್ಮಹತ್ಯೆಗೆ ಶರಣಾಗಿದ್ದು ಮಕ್ಕಳು ಬೀದಿ ಪಾಲಾಗುವಂತಾಗಿದೆ.

ಏನಿದು ಟಿಕ್​ಟಾಕ್ ಸಾವು?

ಅನಿತಾ ಗಂಡನ ಹೆಸರು ಪಳನಿವೇಲ್. ಸಣ್ಣ ಪ್ರಮಾಣದ ರೈತನಾದ ಈತ ಸಾಲದ ಕಾರಣಕ್ಕೆ ಕಳೆದ ವರ್ಷ ಕೆಲಸಕ್ಕಾಗಿ ಸಿಂಗಾಪೂರ್​ಗೆ ತೆರಳಿದ್ದ. ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅನಿತಾ ಮಕ್ಕಳು ಶಾಲೆಗೆ ತೆರಳಿದ ನಂತರ ಒಂಟಿಯಾಗಿರುತ್ತಿದ್ದರು. ಇವರ ಏಕಾಂತಕ್ಕೆ ಟಿಕ್​ಟಾಕ್​ ಮದ್ದಾಗಿತ್ತು. ಒಂಟಿಯಾಗಿರುವಾಗ ಅನಿತಾ ಪ್ರತಿದಿನ ವಿವಿಧ ಸಂಭಾಷಣೆ ಹಾಗೂ ಹಾಡುಗಳಿಗೆ ಟಿಕ್​ಟಾಕ್ ಮಾಡಿ ಆ ವಿಡಿಯೋ ತಮ್ಮ ಗೆಳೆಯರ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ, ಹೆಂಡತಿಯ ಇಂತಹ ವರ್ತನೆಯಿಂದ ಗಂಡನಿಗೆ ಅನುಮಾನ ಶುರುವಾಗಿದೆ. ಅಲ್ಲದೆ ಕಳೆದ ವಾರ ಫೋನ್​ ಕರೆ ಮಾಡಿದ್ದಾಗ ತನ್ನ ಹೆಂಡತಿಯ ನಡತೆಯನ್ನು ಪ್ರಶ್ನೆ ಮಾಡಿದ್ದ ಆತ ಮತ್ತೆ ಟಿಕ್​ಟಾಕ್ ಮಾಡದಂತೆ ತಾಕೀತು ಮಾಡಿದ್ದ.

Also read: ಹೆಚ್ಐವಿ ಪೀಡಿತ ಮಕ್ಕಳ ತಂದೆ ಎಂದು ಹೆಸರುವಾಸಿಯಾದ ಈ ವ್ಯಕ್ತಿ, 47 ಏಡ್ಸ್ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವ ರಿಯಲ್ ಹೀರೋ ಯಾರು ಗೊತ್ತಾ??

ಅಷ್ಟೇ ಅಲ್ಲದೆ ಆ್ಯಪ್​ ಗೀಳಿಗೆ ಒಳಗಾಗಿ ತನ್ನ ಕುಟುಂಬ ಮತ್ತು ಮಕ್ಕಳನ್ನು ಆಲಕ್ಷಿಸಿದ್ದಳು ಎಂದು ಅನಿತಾ ಪಾಲಕರು ಆರೋಪಿಸಿದ್ದಾರೆ. ಆ್ಯಪ್​ ಬಳಸುತ್ತಾ ಅತಿರೇಕಕ್ಕೆ ಹೋಗಿದ್ದ ಆಕೆಯ ಬಗ್ಗೆ ಪಾಲಕರು ಪತಿಗೆ ತಿಳಿಸಿದಾಗ, ಕರೆ ಮಾಡಿ ಅದರಿಂದ ದೂರವಿರುವಂತೆ ಆಕೆ ಹೇಳಿದ್ದನಂತೆ. ಆದರೆ, ಅದನ್ನು ನಿರ್ಲಕ್ಷಿಸಿ ಆಕೆ ಆ್ಯಪ್​ ಮುಂದುವರಿಸಿದ್ದಳು ಎನ್ನಲಾಗಿದೆ. ಹೀಗೆ ಒಮ್ಮೆ ಅನಿತಾ, ಆ್ಯಪ್​ನಲ್ಲಿ ಬಿಜಿಯಾಗಿರುವಾಗ ಆಟವಾಡುತ್ತಿದ್ದ ತನ್ನ ಮಗಳಿಗೆ ಗಾಯವಾದರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅದರಲ್ಲೇ ಮುಳುಗಿದ್ದಳಂತೆ. ಈ ಬಗ್ಗೆ ಪಾಲಕರು ಮತ್ತೊಮ್ಮೆ ಆಕೆಯ ಪತಿಗೆ ಕರೆ ಮಾಡಿ ಬುದ್ಧಿ ಹೇಳಲು ತಿಳಿಸಿದಾಗ, ಇದರಿಂದ ಮನನೊಂದ ಅನಿತಾ ಕಳೆದ 9ರಂದು ಸಂಜೆ ತಮ್ಮ ಕೃಷಿ ಭೂಮಿಗೆಂದು ತಂದಿದ್ದ ಕ್ರಿಮಿನಾಶಕವನ್ನು ಕುಡಿದಿದ್ದಾಳೆ. ಅಲ್ಲದೆ ಅದನ್ನೂ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ತನ್ನ ಗಂಡ ಹಾಗೂ ಕುಟುಂಬಸ್ಥರಿಗೆ ವಾಟ್ಸಾಪ್​ ಮೂಲಕ ಕಳಿಸಿದ್ದಾಳೆ. ವಿಷಯ ತಿಳಿದ ತಕ್ಷಣ ಮನೆಗೆ ದೌಡಾಯಿಸಿದ್ದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಅನಿತಾ ಮೃತಪಟ್ಟಿದ್ದಾಳೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರುಮಾಡಿದ್ದಾರೆ. ಆದರೆ ತಾಯಿಯ ಹುಚ್ಚುತನಕ್ಕೆ ಮಕ್ಕಳು ಅನಾಥರಾಗಿದ್ದಾರೆ.