ಪ್ರಪಂಚದಲ್ಲಿಯೇ ವಿಚಿತ್ರ ಪ್ರೀತಿ; ವಿಮಾನವನ್ನೇ ಪ್ರೀತಿಸುತ್ತಿರುವ ಮಹಿಳೆ, ಅದರ ಜೊತೆಗೆ ದೈಹಿಕ ಸಂಪರ್ಕವನ್ನು ಹೊಂದಿದ್ದಾಳಂತೆ.!

0
212

ಪ್ರಪಂಚದಲ್ಲಿ ಹೇಗೆಲ್ಲ ಪ್ರೀತಿ ಹುಟ್ಟುತ್ತೆ, ಯಾರ ಮೇಲೆ ಪ್ರೀತಿ ಹುಟ್ಟುತ್ತೆ ಎನ್ನುವುದು ಯಾರ ಅಳತೆಗೂ ಸಿಗುತ್ತಿಲ್ಲ, ಏಕೆಂದರೆ ಇಷ್ಟು ದಿನ ಗಂಡು ಮತ್ತು ಹೆಣ್ಣು ಪ್ರೀತಿಸುವುದು ಸಾಮಾನ್ಯವಾಗಿತ್ತು, ನಂತರ ಹೆಣ್ಣು ಮತ್ತು ಹೆಣ್ಣು, ಗಂಡು ಮತ್ತು ಗಂಡು ಪ್ರೀತಿಸುವುದು ಸಾಮಾನ್ಯವಾಗಿತ್ತು, ಆದಾದ ನಂತರ ಪ್ರಾಣಿಗಳ ಮೇಲೆ ಪ್ರೀತಿಯಾಗಿ ಪ್ರಾಣಿಯನ್ನೇ ಮದುವೆಯಾದ ಪ್ರಸಂಗ ನಡೆದಿತ್ತು, ಈಗೊಂದು ಪ್ರೇಮ ಪ್ರಕರಣ ಕೇಳಿ ಬಂದಿದ್ದು, 30 ವರ್ಷದ ಯುವತಿಗೆ ವಿಮಾನದ ಮೇಲೆ ಪ್ರಿತಿಯಾಗಿದೆ ಅಂತೆ, ಅಷ್ಟೇ ಅಲ್ಲದೆ ವಿಮಾನದ ಜೊತೆಗೆ ದೈಹಿಕ ಸಂಪರ್ಕ ಕೂಡ ಇದೆ ಅಂತೆ.

Also read: ಮದುವೆ ಪಿಕ್ಸ್ ಆದ ಬಳಿಕ ಮದುಮಗ ಶೌಚಾಲಯದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರೆ ವಧುಗೆ ಸಿಗುತ್ತೆ ರೂ.51 ಸಾವಿರ.!

ವಿಮಾನದ ಜೊತೆಗೆ ದೈಹಿಕ ಸಂಪರ್ಕ?

ಹೌದು ಜರ್ಮನಿಯ ಬರ್ಲಿನ್‍ನ 30 ವರ್ಷದ ಮಿಷೆಲ್ ಕೋಬ್ಕೆ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದು ಸುಮಾರು ಐದು ವರ್ಷಗಳಿಂದ ಇತರ ದಂಪತಿಗಳ ರೀತಿ ತಾನು ವಿಮಾನದೊಂದಿಗೆ ಪ್ರಣಯ ಸಂಪರ್ಕ ಹೊಂದಿದ್ದೇನೆ ಇದು ಬರಿ ಭಾವನೆಯಲ್ಲ, ಬದಲಿಗೆ ದೈಹಕವಾದದ್ದು ಸಹ ಎಂದು ಮಿಷೆಲ್ ಹೆಮ್ಮಯಿಂದ ಹೇಳಿದ್ದಾರೆ. ಇದನ್ನು ಕೇಳಿದರೆ ಇದೇನಿದು ನಿರ್ಜೀವ ವಸ್ತುಗಳ ಮೇಲೆ ಪ್ರೀತಿಯಾಗಿದ್ದು ಅನಿಸುತ್ತೆ. ಹುಡುಗಿಗೆ ಪ್ರೀತಿ ಹುಟ್ಟಿಸುವಷ್ಟು ಚೆಂದದ ವಿಮಾನ ಎಂದರೆ ಬೋಯಿಂಗ್ 737-800ನ್ನು ‘ಷಾಟ್ಜ್’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಈ ವಿಮಾನವು ಸೊಗಸಾಗಿ ಹಾಗೂ ಅತ್ಯಂತ ಆಕರ್ಷಕವಾಗಿದೆ. 737-800 ನನಗೆ ತುಂಬಾ ಇಷ್ಟ ಆಕರ್ಷಕ ಹಾಗೂ ಮಾದಕವಾಗಿದೆ.
ಅವನನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಇದು ಅತ್ಯಂತ ಸೊಗಸಾದ ಹಾಗೂ ಆಕರ್ಷಕ ವಿಮಾನ ಎಂದು ಮಿಷೆಲ್ ವಿಮಾನವನ್ನು ಹಾಡಿ ಹೊಗಳಿದ್ದಾರೆ. ಆದರೆ ಇತರ ಯಾವುದೇ ಸಂಬಂಧಗಳಂತೆ ಬೋಯಿಂಗ್ ವಿಮಾನದೊಂದಿಗೆ ಖಾಸಗಿ ಸಮಯವನ್ನು ಕಳೆಯುವುದು ಮಿಷೆಲ್‍ಗೆ ಕಷ್ಟಕರವಾಗಿದೆ. ನಾನು ಅವನೊಂದಿಗೆ ಹಾರಾಟ ನಡೆಸಿದಾಗ ಅಥವಾ ಹ್ಯಾಂಗರ್ ಬಳಿಗೆ ಬಂದಾಗ ಮಾತ್ರ ಅವನ ಹತ್ತಿರ ಹೋಗಿದ್ದೇನೆ. ಅದು ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸಿದೆ ಈಗ ಮಿಷೆಲ್ ತನ್ನ ಪ್ರೀತಿಗೆ ಹತ್ತಿರವಾಗಲು ಇನ್ನೊಂದು ಮಾರ್ಗವನ್ನು ಕಂಡುಕೊಂಡಿದ್ದು, ಇದೀಗ ಬೋಯಿಂಗ್ 737-800ರ ಫೈಬರ್‍ನ ದೊಡ್ಡ ಮಾದರಿಯನ್ನು ಖರೀದಿಸಿದ್ದೇನೆ ಇದನ್ನು ಫೈಬರ್‍ನಲ್ಲಿ ತಯಾರಿಸಲಾಗಿದೆ.

Also read: ಕ್ಷುಲ್ಲಕ ವಿಚಾರಕ್ಕೆ ಗಂಡ-ಹೆಂಡತಿಯ ಕಿತ್ತಾಟ; ಹುಚ್ಚು ಗುದ್ದಾಟದಲ್ಲಿ 5 ತಿಂಗಳ ಮಗುವನ್ನೇ ಕೊಂದರು.!

ಮಿಷೆಲ್ ಫೈಬರ್‍ನಿಂದ ತಯಾರಿಸಿದ ವಿಮಾನದ ಮಾದರಿಯನ್ನು ಯಾವಾಗಲೂ ತನ್ನ ಹತ್ತಿರ ಇಟ್ಟುಕೊಂಡಿರುತ್ತಾರೆ. ನಿದ್ದೆ ಮಾಡುವ ಸಂದರ್ಭದಲ್ಲಿ ಈ ಫೈಬರ್‍ನ ಬೋಯಿಂಗ್‍ನ್ನು ತಬ್ಬಿಕೊಂಡು ಮಲಗುತ್ತಾರೆ. ಈಗ ನಾನು ಫೈಬರ್ ಗ್ಲಾಸ್ ನಿಂದ ತಯಾರಿಸಿದ ದೊಡ್ಡ ಮಾದರಿಯನ್ನು ಹೊಂದಿದ್ದೇನೆ. ಹೀಗಾಗಿ ನನ್ನ ಪ್ರೀತಿಯನ್ನು ಸ್ವಲ್ಪ ಮಟ್ಟಿಗೆ ನಿರ್ವಹಿಸುತ್ತೇನೆ. ಮಾರ್ಚ್ 2013ರಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಹಾರಾಟ ನಡೆಸಿದ ನಂತರ ವಿಮಾನಗಳ ಮೇಲೆ ಪ್ರೀತಿ ಅರಳಿತು. ಆದರೆ ಮೇ 2019ರಲ್ಲಿ ಬೋಯಿಂಗ್ 737-800 ಹತ್ತಿದ ನಂತರ ಇವನು ನನ್ನವನೇ ಎಂದುಕೊಂಡು ಪ್ರೀತಿ ಮಾಡಲು ಪ್ರಾರಂಭಿಸಿದೆ.

Also read: ಈ ಸುಂದರಿ ಬರೋಬರಿ 250 ಕ್ಕೊ ಹೆಚ್ಚು ಯುವಕರ ಜೊತೆಗೆ ಡೇಟಿಂಗ್ ಮಾಡಿ ಕೊನೆಗೆ ನಾಯಿಯನ್ನು ಮದುವೆಯಾದ ಮಾಡೆಲ್.. .

ನಾವು ನಿಜವಾಗಿಯೂ ಮೊದಲ ಬಾರಿಗೆ ಭೇಟಿಯಾಗಿದ್ದು ಮೇ 1, 2019ರಂದು. ನಾನು ಅವನೊಂದಿಗೆ ಕಳೆದ ಪ್ರತಿ ಮಿಲಿಸೆಕೆಂಡ್‍ನ್ನು ಸಹ ಆನಂದಿಸಿದ್ದೇನೆ. ಅವನನ್ನು ನೋಡಿ ನಕ್ಕು ಸುಸ್ತಾಗಿ ನನ್ನ ಕೆನ್ನೆಗಳು ನೋಯುತ್ತವೆ. ಪ್ರಪಂಚದಲ್ಲೇ ಅತ್ಯಂತ ಸಂತೋಷ ಹೊಂದಿದ ಮಹಿಳೆ ನಾನು. ಅವನೊಂದಿಗೆ ಇರುವಾಗ ಸರ್ವಸ್ವವೂ ಇದ್ದಂತೆ ಎಂದು ಎಂದು ಮಿಷೆಲ್ ತಮ್ಮ ಪ್ರೀತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.