ಹತ್ತನೇ ಮದುವೆಯಾಗಬೇಕೆಂದಿದ್ದವಳು ಕೊಲೆಯಾದಳು: ಈಕೆಯ ಹಿನ್ನಲೆ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ..!

0
290

ಪರಪುರುಷನ ಜೊತೆ ಹೆಂಡತಿಯಾದವಳು ಸಲುಗೆಯಿಂದ ಇದ್ದು, ತನ್ನನ್ನು ನಿರ್ಲಕ್ಷ್ಯ ಮಾಡಿ ದೂರ ಮಾಡೋಕೆ ಮುಂದಾದ್ರೆ ಯಾವ ಗಂಡ ತಾನೇ ಸಹಿಸ್ತಾನೆ ಹೇಳಿ..? ಹೌದು.. ಪರ ಪುರುಷರೊಂದಿಗೆ ಸಖ್ಯ ಬೆಳೆಸಿರುವುದು ಹಾಗೂ ಅವರೊಂದಿಗೆ ತುಂಬಾ ಸಲುಗೆಯಿಂದಿರುವುದನ್ನ ಸಹಿಸದ ಗಂಡ ಹೆಂಡತಿಯನ್ನ ಕುತ್ತಿಗೆ ಹಿಸುಕಿ ಸಾಯಿಸಿ ಕೊನೆಗೆ ತಾನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ, ಹೈದರಾಬಾದಿನ ಪಹದಿ ಶರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸತ್ತ ಹೆಂಡತಿಯ ಹಿನ್ನಲೆ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ.

ಮೃತ ಮಹಿಳೆ ಹೆಸರು ವರಲಕ್ಷ್ಮೀ (30), ಈಕೆ ಹೆಸರಿಗೆ ತಕ್ಕಂತೆ ಮಹಾಲಕ್ಷ್ಮೀ ಅನ್ನಬೇಕೋ ಗೊತ್ತಿಲ್ಲ ಯಾಕಂದ್ರೆ ಇವಳಿಗೆ ಈಗಾಗಲೇ ಬರೋಬ್ಬರಿ 8 ಮದುವೆ ಆಗಿದೆ. ಇಷ್ಟೆಲ್ಲಾ ಆದ ಮೇಲೆ ವರಲಕ್ಷ್ಮೀ ಕಾಟೆದನ್ ಏರಿಯಾದ ಪೆಟ್ರೋಲ್ ಬಂಕ್ ಒಂದರಲ್ಲಿ ತನ್ನ ಒಬ್ಬ ಮಗನಿಗಾಗಿ ಕೆಲಸ ಮಾಡುತ್ತಿದ್ದಳು. ಅಲ್ಲೇ ಪಕ್ಕದಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜಲ್ಲಪಲ್ಲಿ ಮುನ್ಸಿಪಲ್ ಏರಿಯಾದ ಶ್ರೀರಾಮ ಕಾಲನಿಯಲ್ಲಿ ಕಳೆದ 3 ವರ್ಷಗಳಿಂದ ವಾಸವಿದ್ದ. ವೃತ್ತಿಯಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ನಾಗರಾಜುವಿಗೆ ಸ್ಥಳೀಯ ನಿವಾಸಿ ವರಲಕ್ಷ್ಮೀ ಪರಿಚಯವಾಗಿದೆ, ಈ ಪರಿಚಯ ಸ್ನೇಹಕ್ಕೆ, ಆಮೇಲೆ ಪ್ರೀತಿಗೆ ಮತ್ತೆ ಮದುವೆ ತನಕ ಬಂದಿದೆ.

9ನೇ ಮದುವೆಯಾಗಿ ತನ್ನ ವೈವಾಹಿಕ ಜೀವನದಲ್ಲಿ ಖುಷಿಯಾಗಿದ್ದ ವರಲಕ್ಷ್ಮೀ, ಇದ್ದಕ್ಕಿದ್ದ ಹಾಗೆ, ತನ್ನ ಗಂಡನ ಜೊತೆ ಜಗಳವಾಡಿದ್ದಾಳೆ. ವರಲಕ್ಷ್ಮೀ ಪರ ಪುರುಷರೊಂದಿಗೆ ಸಖ್ಯ ಬೆಳೆಸಿರುವುದು ಹಾಗೂ ಅವರೊಂದಿಗೆ ತುಂಬಾ ಸಲುಗೆಯಿಂದಿರುವುದನ್ನ ಗಮನಿಸಿದ ನಾಗರಾಜ್, ಆಕೆಯನ್ನ ಪ್ರಶ್ನಿಸಿದ್ದಾನೆ.

ಗಂಡನ ಪ್ರಶ್ನೆಯಿಂದ ಕೋಪಗೊಂಡ ವರಲಕ್ಷ್ಮೀ ಆತನನ್ನೂ ತೊರೆದು, 10ನೇ ಅವನನ್ನ ಮದುವೆಯಾಗಲು ತಯಾರಾಗಿದ್ದಳು. ಇದೇ ಕಾರಣಕ್ಕೆ ಪದೇಪದೆ ಜಗಳ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಹೀಗೆ ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಿರುವಾಗ ಮಂಗಳವಾರ ಬೆಳಗ್ಗೆ ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡ ನಾಗರಾಜು, ವರಲಕ್ಷ್ಮೀ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಾನೇ ಪಹದಿ ಶರೀಫ್ ಪೊಲೀಸ್ ಠಾಣೆಗೆ ಬಂದು ಶರಣಾದನು ಎಂದು ಸಬ್ಇನ್ಸ್ಪೆಕ್ಟರ್ ಕುಮಾರಸ್ವಾಮಿ ತಿಳಿಸಿದರು.