ಪ್ರೀತಿ ಪ್ರೇಮದ ನಾಟಕವಾಡಿ ಬರೋಬ್ಬರಿ 14 ಯುವಕರಿಗೆ ಚಳ್ಳೆಹಣ್ಣು ತಿನಿಸಿ ಲಕ್ಷಾಂತರ ಹಣ ಸುಲಿಗೆ ಮಾಡಿದ ಲೇಡಿ ವಕೀಲೆ.!

0
244

ಇತ್ತೀಚಿನ ದಿನಗಳಲ್ಲಿ ಯುವತಿಯರಿಗಿಂತ ಯುವಕರೇ ಮೋಸ ಹೋಗುತಿರುವುದು ಹೆಚ್ಚಾಗಿದ್ದು, ಹನಿಟ್ರ್ಯಾಪ್ ಸೇರಿದಂತೆ ಹಲವು ಮೋಸದ ಪ್ರೀತಿಗೆ ಬಲಿಯಾಗಿ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಯುವತಿಯರಂತೂ ದಿನಕ್ಕೊಂದು ಹುಡುಗರನ್ನು ಬಲೆಗೆ ಬಿಳಿಸಿಕೊಂಡು ಹಣ ಸುಲಿಗೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಕೆಲವು ಪ್ರಕರಣಗಳಲ್ಲಿ ಆಶ್ಚರ್ಯಿ ಏನೆಂದರೆ ಸಮಾಜವನ್ನು ಕಾಯಬೇಕಾದ ಕೆಲಸದಲ್ಲಿದವರೆ ಇಂತಹ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾದ ಪ್ರಕರಣ ಬೆಳಕಿಗೆ ಬಂದಿದ್ದು, ವಕೀಲೆಯೊಬ್ಬಳು ಪ್ರೀತಿ ಮಾಡುವುದಾಗಿ 14 ಯುವಕರಿಗೆ ಚಳ್ಳೆಹಣ್ಣು ತಿನಿಸಿ ಲಕ್ಷಾಂತರ ಹಣ ಲೂಟಿ ಮಾಡಿದ್ದಾಳೆ.

Also read: ಒಂದೇ ಪ್ರೀತಿಗೆ ಮೂರು ಹೆಣ; ಓದುವುದು ಬಿಟ್ಟು ಲವ್ ಅಂತ ತಿರುಗುವ ಯುವಕ- ಯುವತಿಯರೇ ಎಚ್ಚರ.!

ಹೌದು ಪ್ರೀತಿ, ಪ್ರೇಮದ ಹೆಸರಿನಲ್ಲಿ ಮದುವೆಯಾಗದ ಯುವಕರನ್ನೇ ಟಾರ್ಗೆಟ್ ಮಾಡಿ ಸಲಿಗೆಯಿಂದ ಇದ್ದು ವಿಡಿಯೋ ಫೋಟೋ ಮಾಡಿಕೊಂಡು ಬಳಿಕ ಹಣಕ್ಕಾಗಿ ಕಿರುಕುಳ ನೀಡಿ ಮೋಸ ಮಾಡುತ್ತಿದ್ದ ಯುವತಿಯನ್ನು ಹೈದರಾಬಾದ್‍ನ ಅಂಬಿಟ್ಸ್ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. 27 ವರ್ಷದ ವಕೀಲೆ ಹೈದರಾಬಾದ್‍ನ ಮಲಕಪೇಟ್ ಪ್ರದೇಶಕ್ಕೆ ಸೇರಿದ ಷಾದನ್ ಸುಲ್ತಾನ ಎಂದು ತಿಳಿದಿದ್ದು ಇವಳು ಎಲ್‍ಎಲ್‍ಬಿ ಪದವಿ ಪಡೆದಿದ್ದು, ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಳು. 2015ರಲ್ಲಿ ಆಕೆಗೆ ಅಂಬಿಡ್ಸ್ ನ ಅಲ್ಪ ಸಂಖ್ಯಾತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಹೀಂ ಎಂಬಾತನೊಂದಿಗೆ ಪರಿಚಯವಾಗಿತ್ತು. ಆ ಬಳಿಕ ಇಬ್ಬರು ಫೋನ್ ಮೂಲಕ ಮಾತನಾಡಲು ಆರಂಭಿಸಿದ್ದರು.

Also read: ಈ ಊರಲಿ ಉಚಿತವಾಗಿ ಮದ್ಯ ಕೊಟ್ಟರು ಯಾರು ಕುಡಿಯೋದಿಲ್ಲವಂತೆ, ಏಕೆಂದರೆ ಕುಡಿದು ಸಿಕ್ಕಿಬಿದ್ರೆ ಊರಿಗೆಲ್ಲಾ ಮಟನ್ ಪಾರ್ಟಿ ಕೊಡಬೇಕಂತೆ.!

ಈ ನಡುವೆ ಇಬ್ಬರು ಸಲುಗೆಯಿಂದ ಸುತ್ತಾಟ ಕೂಡ ನಡೆಸಿದ್ದರು. ನಂತರ ಪೂರ್ತಿಯಾಗಿ ರಹೀಂನನ್ನು ನಿಯಂತ್ರಿಸಲು ಆರಂಭಿಸಿದ್ದ ಷಾದನ್ ಸುಲ್ತಾನ 6 ತಿಂಗಳ ಹಿಂದೆ 3 ಲಕ್ಷ ರೂ.ಗಳನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಳು. ಅಲ್ಲದೇ ಮತ್ತೆ 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ, ನಿರಾಕರಿಸಿದರೆ ಇಬ್ಬರು ಸಲಿಗೆಯಿಂದಿರುವ ವಿಚಾರವನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಸುಲ್ತಾನ ಬೆದರಿಕೆಗಳಿಂದ ನೊಂದ ರಹೀಂ ಕಳೆದ ತಿಂಗಳ 19 ರಂದು ತನ್ನ ಕಚೇರಿಯ ಸಮೀಪ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಪೊಲೀಸರಿಗೆ ರಹೀಂ, ಷಾದನ್ ಸುಲ್ತಾನ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಷಾದನ್‍ನನ್ನು ಬಂಧಿಸಿದ್ದರು.

Also read: http://kannada.thenewsism.com/if-a-man-has-these-7-qualities-never-let-him-go/

ಈ ವೇಳೆ ಒಂದೇ ಪ್ರಕರಣದಲ್ಲಿ ಯುವತಿ ಬಾಗಿಯಾಗಿದ್ದಾಳೆ ಎನ್ನುವುದನ್ನು ತಿಳಿದಿದ್ದ ಪೊಲೀಸರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು, ಷಾದನ್ ಸುಲ್ತಾನ ನಿಜಾಮಿಯಾ 2014ರಿಂದಲೇ ಪ್ರೇಮ ನಾಟಕ ಮಾಡುತ್ತಿದ್ದ ಸಂಗತಿ ತಿಳಿದು ಬಂದಿದೆ. 2014 ರಲ್ಲೇ ಪ್ರೇಮ ಹೆಸರಿನಲ್ಲಿ ಮೋಸ ಮಾಡುವ ಕೃತ್ಯವನ್ನು ಷಾದನ್ ಆರಂಭಿಸಿದ್ದಳು. 2014-18ರ ಅವಧಿಯಲ್ಲಿ ಸುಲ್ತಾನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ಸೈಫಾಬಾದ್‍ನ ಪಿಎಸ್ ಠಾಣೆಯಲ್ಲಿ 3, ಚದರ್ ಛದೇರಿಘಾಟ್ 5, ಎಲ್‍ಬಿ ನಗರ 3, ಅಂಬರ್ ಪೇಟ್ 2, ಅಂಬಿಟ್ಸ್ 2, ಮೀರ್ ಚೌಕ್ 4, ನಾರಾಯಣ ಗೂಡ, ಮಲಕ್ ಪೇಟ್, ನಲ್ಲಕುಂಟ, ಉಪ್ಪಲ್ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ವಿಶೇಷ ಎಂದರೆ ಷಾದನ್ ಮೋಸ ಮಾಡಿದ ಯುವಕರಲ್ಲಿ ವಕೀಲರೊಬ್ಬರು ಇರುವುದು ತಿಳಿದು ಬಂದಿದೆ. ಅದಕ್ಕಾಗಿ ಪ್ರೀತಿ-ಪ್ರೇಮವೆಂದು ಹಿಂದೆ ಬಿಳ್ಳುವ ಮುನ್ನ ಎಚ್ಚರದಿಂದ ಇರುವುದು ಒಳ್ಳೆಯದು.