ಸ್ಪರ್ಧಾತ್ಮಕ ಪರೀಕ್ಷೆಯ ಆಸಕ್ತಿಯಿಂದ ಪತ್ನಿಯನ್ನೇ ಕಳೆದುಕೊಂಡ ಪತಿರಾಯ.!

0
159

ಕೆಲವೊಬ್ಬರಿಗೆ ಏನಾದರು ಸಾಧಿಸಬೇಕು, ಅಥವಾ ಗುರಿಯಂತೆ ಅಂದುಕೊಂಡ ನೌಕರಿ ಹಿಡಿಯಬೇಕು ಎನ್ನುವುದ್ದನ್ನು ಬಿಟ್ಟರೆ ಯಾವುದರಲ್ಲಿ ಆಸಕ್ತಿ ಇರುವುದಿಲ್ಲ, ಒಂದು ವೇಳೆ ಗುರಿಮುಟ್ಟುವ ನಡುವೆಯೇ ಮದುವೆಯಾದರು ಪತ್ನಿಯ ಮೇಲೆ ಆಸಕ್ತಿಯೇ ಇರುವುದಿಲ್ಲ. ಇದರಿಂದ ಸಂಸಾರದಲ್ಲಿ ಗೊಂದಲಗಳು ಏಳುವುದು ಸಾಮಾನ್ಯವಾಗುತ್ತೆ. ಇಂತಹದೆ ಒಂದು ಘಟನೆ ನಡೆದಿದ್ದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಆಸಕ್ತಿಯಿಂದ ಹೆಂಡತಿಯನ್ನು ಕಳೆದುಕೊಳ್ಳುವ ಹಂತಕ್ಕೆ ವ್ಯಕ್ತಿ ಬಂದಿದ್ದಾನೆ.

ಏನಿದು ಘಟನೆ?

ಮಧ್ಯಪ್ರದೇಶದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(ಡಿಎಲ್‍ಎಸ್‍ಎ)ದ ಸಲಹೆಗಾರರ ಮಾಹಿತಿ ಪ್ರಕಾರ, ಯುಪಿಎಸ್‍ಸಿ ಹಾಗೂ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ತಯಾರಿ ನಡೆಸುತ್ತಿಸುವ ವ್ಯಕ್ತಿ ತನ್ನ ಪತ್ನಿಯ ಜೊತೆಗೆ ಅನ್ಯುನ್ಯತೆಯಿಂದ ಇಲ್ಲ ಎನ್ನುವ ಕಾರಣಕ್ಕೆ ಹೆಂಡತಿ ಡೈವರ್ಸ್-ಗಾಗಿ ಕೋರ್ಟ್ ಮೆಟ್ಟಿಲೇರಿದ್ದು. ಪತಿ ತಮ್ಮನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸೀಮಿತಗೊಳಿಸಿಕೊಂಡಿದ್ದಾರೆ. ಮದುವೆಯಾದಗಿಂದ ಪತಿಯಿಂದ ನಾನು ನಿರ್ಲಕ್ಷಿಸಲ್ಪಟ್ಟ ರೀತಿ ಸಂಸಾರಕ್ಕೆ ಮಾಡುತ್ತಿಲ್ಲ, ಮತ್ತೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಬೇರೆ ವಿಷಯಗಳತ್ತ ಪತಿ ಗಮನ ನೀಡಲ್ಲ ಎಂದು ಹೇಳಿದ್ದಾಳೆ.

ಅಷ್ಟೇ ಅಲ್ಲದೆ ನಾನು ಪತಿಯ ಹತ್ತಿರ ತೆರಳಿದಾಗಲೆಲ್ಲ ನಿರ್ಲಕ್ಷ್ಯ ವಹಿಸುತ್ತಿದ್ದರು ಎಂದು ಕೌನ್ಸಿಲಿಂಗ್ ಸಮಯದಲ್ಲಿ ಮಹಿಳೆ ತಿಳಿಸಿದ್ದಾಳೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಲಹೆಗಾರ್ತಿ ನೂರನ್ನಿಸಾ ಖಾನ್ ತಿಳಿಸಿದ್ದಾರೆ. ಆಕೆಯ ಪತಿಯು ಈಗಾಗಲೇ ಪಿಎಚ್‍ಡಿ ಪಡೆದಿದ್ದು, ಅವರ ತಂದೆ, ತಾಯಿಗೆ ಇವರೊಬ್ಬರೇ ಮಗ. ಹೆತ್ತವರಲ್ಲಿ ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಪೋಷಕರ ಒತ್ತಾಯದ ಮೇರೆಗೆ ಆತ ಮದುವೆ ಆಗಿದ್ದನು ಎಂದು ನೂರನ್ನಿಸಾ ತಿಳಿಸಿದ್ದಾರೆ. ಇದೀಗ ಪತಿ ವಿಚ್ಛೇದನದ ಅರ್ಜಿ ಸಲ್ಲಿಸಿದ್ದು, ಪತ್ನಿಯು ತನ್ನನ್ನು ತೊರೆದು ತವರು ಮನೆಗೆ ತೆರಳಿದಾಗಿನಿಂದ ನನ್ನೊಂದಿಗೆ ಸಂಪರ್ಕ ಹೊಂದಿಲ್ಲ.

ಮರಳಿ ಬರುವಂತೆ ಹಲವು ಬಾರಿ ಕರೆದರೂ ಸಹ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಂಬಂಧಿಕರು ಹಾಗೂ ಇತರರು ಮಧ್ಯಸ್ಥಿಕೆ ವಹಿಸುವ ಪ್ರಯತ್ನಗಳು ಸಹ ವಿಫಲವಾಗಿವೆ. ಹೀಗಾಗಿ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಅಲ್ಲಿಂದ ಕೌನ್ಸಿಲಿಂಗ್‍ಗಾಗಿ ಉಲ್ಲೇಖಿಸಲಾಗಿದೆ ಎಂದು ನೂರನ್ನಿಸಾ ಖಾನ್ ಮಾಹಿತಿ ನೀಡಿದ್ದಾರೆ. ನ್ಯಾಯಾಲಯವು ಪ್ರಕರಣದ ವಿಚಾರಣೆ ಪ್ರಾರಂಭಿಸುವುದಕ್ಕೂ ಮುನ್ನ ಇಬ್ಬರ ನಡುವೆ ಇನ್ನೂ ನಾಲ್ಕು ಸುತ್ತು ಸಮಾಲೋಚನೆ ನಡೆಯಬೇಕಿದೆ. ಅವರ ಮದುವೆಯ ಬಂಧವನ್ನು ಉಳಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಖಾನ್ ತಿಳಿಸಿದ್ದಾರೆ. ಆದರೆ ಪತಿಗೆ ಸ್ಪರ್ಧಾತ್ಮಕ ಆಸಕ್ತಿ ಇದ್ದರೆ, ಪತ್ನಿಗೆ ಸಂಸಾರದ ಆಸಕ್ತಿ ಇರುವುದರಿಂದ ಏನಾಗುತ್ತೋ ಎನ್ನುವುದು ಕುಟುಂಬದವರ ನೋವಾಗಿದೆ ಎಂದು ತಿಳಿಸಿದ್ದಾರೆ.