ಅಯೋಧ್ಯೆ ತೀರ್ಪು ಮದ್ಯ ಮಾರಾಟ ನಿಷೇಧ; ಪಾರ್ಟಿ ಮಾಡಲು ಎಣ್ಣೆ ಬೇಕೆಂದು ಆನ್ಲೈನ್-ನಲ್ಲಿ ಬುಕ್ ಮಾಡಲು ಹೋಗಿ 51 ಸಾವಿರ ಕಳೆದುಕೊಂಡ ಮಹಿಳಾ ಟೆಕ್ಕಿ.!

0
200

ಒಂದೆರೆಡು ದಿನ ಮದ್ಯ ಇಲ್ಲದಿದ್ದರೆ ಜನರು ಏನೆಲ್ಲಾ ಪಜೀತಿ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾದ ಘಟನೆಯೊಂದು ನಡೆದಿದ್ದು, ಮದ್ಯ ಬಿಟ್ಟು ಜನರು ಬದುಕಲು ಸಾಧ್ಯವೇ ಇಲ್ಲ ಎನ್ನುವಂತಿದ್ದರೆ ದೇಶದ ಆದಾಯ ಕೂಡ ಮದ್ಯ ಮಾರಾಟ ಬಿಟ್ಟಿಲ್ಲ ಎನ್ನುವಂತಿದೆ. ಏಕೆಂದರೆ ಎಲ್ಲ ಸಂತೋಷವನ್ನು ಒಂದರಲ್ಲೇ ಇರುವ ವಸ್ತು ಈ ಮದ್ಯವಾಗಿದ್ದು. ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶನಿವಾರದಿಂದ ದೇಶದ ತುಂಬೆಲ್ಲ ಮದ್ಯ ಮಾರಾಟ ನಿಲ್ಲಿಸಲಾಗಿತ್ತು, ಅದಕ್ಕಾಗಿ ಮಹಿಳಾ ಟೆಕ್ಕಿಯೊಬ್ಬರು ಮದ್ಯವನ್ನು ಆನ್ ಲೈನ್‍ನಲ್ಲಿ ಆರ್ಡರ್ ಮಾಡಿ ಸುಮಾರು 51 ಸಾವಿರ ರೂ. ಕಳೆದುಕೊಂಡಿದ್ದಾರೆ.

Also read: ಸರ್ಕಾರಿ ಖಜಾನೆಗೆ ಕನ್ನಾ; ರೈತರು ಪಡೆದ ಸಾಲ 50 ಸಾವಿರವಾದರೂ ರೈತರ ಹೆಸರಲ್ಲಿ ಸೊಸೈಟಿಗಳು ಮಾಹಿತಿ ನೀಡಿದ್ದು 1 ಲಕ್ಷ ರೂ. ವಂತೆ.!

ಹೌದು ದೇಶದಲ್ಲಿ ಕಳೆದ ಮೂರು ದಿನದಿಂದ ಮದ್ಯ ಮಾರಾಟ ವಿಲ್ಲದ ಕಾರಣ ಎಲ್ಲಿವೂ ಒಂದು ಬಾಟಲ್ ಮದ್ಯ ಸಿಗದಂತಾಗಿದೆ. ಅದಕ್ಕಾಗಿ ಕೋಲ್ಕತ್ತಾದ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ 32 ವರ್ಷದ ಮಹಿಳೆ 50,778 ರೂ. ಮೌಲ್ಯದ ಮದ್ಯವನ್ನು ಆರ್ಡರ್ ಮಾಡಿದ್ದರು. ಆ ದಿನ ಮಾಮೂಲಿ ದಿನಕ್ಕಿಂತ ಸ್ವಲ್ಪ ಹೆಚ್ಚಿಗೆ ಹಣ ಇದ್ದರೂ ಮಹಿಳೆ ಆರ್ಡರ್ ಮಾಡಿಯೇ ಬಿಟ್ಟಿದ್ದಾರೆ. ಸುಮಾರು 4 ದಿನಗಳ ಹಿಂದೆ ಟೆಕ್ಕಿ ಕೋಲ್ಕತ್ತಾದಿಂದ ಪುಣೆಗೆ ಬಂದಿದ್ದರು. ಈ ವೇಳೆ ಗೆಳೆಯ-ಗೆಳತಿಯನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ವೀಕೆಂಡ್ ಇದೆ ಪಾರ್ಟಿ ಮಾಡೋಣವೆಂದು ನಿರ್ಧಾರ ಮಾಡಿದರು. ಆದರೆ ಆಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪುಣೆಯ ಜಿಲ್ಲಾಧಿಕಾರಿ ಶನಿವಾರ ಹಾಗೂ ಭಾನುವಾರ ಮದ್ಯ ಮಾರಾಟಕ್ಕೆ ನಿಷೇಧವಿತ್ತು.

ಆದರೆ ಸ್ನೇಹಿತರು ಕೂಡಿದ ಪಾರ್ಟಿಗೆ ಎಣ್ಣೆಯೇ ಇಲ್ಲವೆಂದರೆ ಹೇಗೆ ಎನ್ನುವ ಪ್ರಶ್ನೆ ಮೂಡಿತ್ತು, ಇದರಿಂದ ಏನು ಮಾಡುವುದೆಂದು ಯೋಚನೆ ಮಾಡಿದ ಟೆಕ್ಕಿ ಮಹಿಳೆ ಆನ್ ಲೈನ್-ನಲ್ಲಿ ಆರ್ಡರ್ ಮಾಡಲು ಯೋಚಸಿ ಕೂಡಲೇ ಹಲವು ಮದ್ಯದಂಗಡಿಗಳಿಗೆ ಕರೆ ಮಾಡಿದ್ದಾರೆ. ಆದರೆ ಯಾರೊಬ್ಬರು ಟೆಕ್ಕಿಗೆ ಮದ್ಯ ನೀಡಲು ಒಪ್ಪದಾಗ ಇದರಿಂದ ಟೆಕ್ಕಿ ನಿರಾಸೇಗೊಂಡಿದ್ದಾಳೆ. ಇದೇ ವೇಳೆ ಮಹಿಳಾ ಟೆಕ್ಕಿಗೆ ಇಂಟರ್ನೆಟ್ ನಲ್ಲಿ ಒಂದು ಫೋನ್ ನಂಬರ್ ಸಿಕ್ಕಿದೆ. ಕೂಡಲೇ ಆಕೆ ಆ ನಂಬರಿಗೆ ಕರೆ ಮಾಡಿದ್ದಾರೆ. ಆಗ ವ್ಯಕ್ತಿಯೊಬ್ಬರು ಕರೆ ಸ್ವೀಕರಿಸಿ, ಮನೆಗೆ ಮದ್ಯ ತಂದು ಕೊಡಲು ಒಪ್ಪಿಕೊಂಡಿದ್ದಾನೆ.

Also read: ಬೊಗಳುವ ನಾಯಿಗೆ ಗುಂಡು ಹಾರಿಸಿದ ವ್ಯಕ್ತಿ; ಜೀವ ಉಳಿಸಲು ಶಸ್ತ್ರಚಿಕಿತ್ಸೆ, ನಾಯಿ ನೋಡಲು ಆಸ್ಪತ್ರೆ ಬೇಟಿ ನೀಡಿದ ಶಾಸಕಿ ಸೌಮ್ಯ ರೆಡ್ಡಿ.!

ಇದರಿಂದ ಕುಷಿಯಾದ ಮಹಿಳೆ ಆರ್ಡರ್ ಮಾಡಲು ಮುಂದಾಗಿದ್ದಾರೆ. ಅಂತೆಯೇ ವ್ಯಕ್ತಿಯು ಟೆಕ್ಕಿ ಬಳಿ ಓಟಿಪಿ ಕಳುಹಿಸುವಂತೆ ಹೇಳಿದ್ದಾನೆ. ಟೆಕ್ಕಿಯೂ ಆತನನ್ನು ನಂಬಿ ತನಗೆ ಬಂದ ಒಟಿಪಿ ನಂಬರ್ ಕಳುಹಿಸಿದ್ದಾರೆ. ಇದಾದ ಕೆಲಸ ನಿಮಿಷಗಳಲ್ಲಿ ಮಹಿಳೆಯ ಬ್ಯಾಂಕ್ ಅಕೌಂಟಿನಿಂದ 31,777 ರೂ. ವಿಥ್‍ಡ್ರಾ ಆಗಿದೆ. ಇದರಿಂದ ಗಾಬರಿಗೊಂಡ ಟೆಕ್ಕಿ, ಕೂಡಲೇ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆಗ ಆತ ಗಾಬರಿಯಾಗಬೇಡಿ ನಿಮ್ಮ ಹಣ ಮತ್ತೆ ನಿಮಗೆ ಕ್ರೆಡಿಟ್ ಆಗುತ್ತೆ. ಅದಕ್ಕಾಗಿ ನೀವು ಮತ್ತೊಮ್ಮೆ ಓಟಿಪಿ ನಂಬರ್ ಕಳುಹಿಸಿ ಎಂದಿದ್ದಾನೆ. ಟೆಕ್ಕಿ ಮತ್ತೆ ಓಟಿಪಿ ನಂಬರ್ ಕಳುಹಿಸಿದ್ದಾರೆ. ಈ ವೇಳೆ ಟೆಕ್ಕಿ ಮತ್ತೆ ತನ್ನ ಅಕೌಂಟಿನಿಂದ 19,001 ರೂ. ಕಳೆದುಕೊಂಡರು. ಇದರಿಂದ ಮತ್ತೆ ಗಾಬರಿಗೊಂಡ ಟೆಕ್ಕಿ, ವ್ಯಕ್ತಿಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆ ಆತನನ್ನು ಸಂಪರ್ಕಿಸಲು ಟೆಕ್ಕಿಗೆ ಸಾಧ್ಯವಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಮಹಿಳಾ ಟೆಕ್ಕಿ ಕೂಡಲೇ ಹಿಂಜೇವಾಡಿ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಅದಕ್ಕಾಗಿ ಇಲ್ಲದ ಸುಖವನ್ನು ಹುಡುಕಲು ಹೋಗಿ ಪಜೀತಿಗೆ ಜಾರುವ ಮುನ್ನ ಎಚ್ಚರದಿಂದ ಇರುವುದು ಒಳ್ಳೆಯದು ಅನಿಸುತ್ತೆ.