ಓಎಲ್‌ಎಕ್ಸ್‌ನಲ್ಲಿ ಮೊಬೈಲ್ ಮಾರಲು ಸ್ವಿಗ್ಗಿ ಗೋ ಆ್ಯಪ್ ಸಹಾಯ ಪಡೆದು 95 ಸಾವಿರ ಕಳೆದುಕೊಂಡ ಮಹಿಳೆ..!

0
334

ಜನರು ಆನ್ಲೈನ್ ಗೆ ವಾಲಿದಷ್ಟು ಮೋಸಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವಿರಾರು ರೂ. ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರಾಗಲಿ, ಸರ್ಕಾರವಾಗಲಿ ಸಾಕಷ್ಟು ಭದ್ರತೆವಹಿಸಿದರು ಕೂಡ ವಂಚಕರು ನಾನಾ ರೀತಿಯ ಹೊಂಚ್ಚುಹಾಕಿ ಜನರ ಕಣ್ಣಿಗೆ ಮಣ್ಣೇರೆಚುತ್ತಿದ್ದಾರೆ. ಇಂತಹ ಒಂದು ಪ್ರಕರಣದಲ್ಲಿ ಮಹಿಳೆ 95 ಸಾವಿರ ರುಪಾಯಿ ಕಳೆದುಕೊಂಡಿದ್ದಾಳೆ. ಇದರಲ್ಲಿ ಎರಡು ಆನ್ಲೈನ್ ಸೇವೆಗಳಿಂದ ವಂಚನೆಗೆ ನಡೆದಿದೆ ಎನ್ನುವುದು ಬೆಳಕಿಗೆ ಬಂದಿದೆ.

Also read: ರೈತರು, ಕೂಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಹೊಸ ಯೋಜನೆ; ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಹಲವು ಸರ್ಕಾರಿ ಸೇವೆಗಳು.!

ಹೌದು Olx ನಲ್ಲಿ ಸೆಕೆಂಡ್ ವಸ್ತುವನ್ನು ಮಾರಾಟ ಮಾಡುವುದು ಎಲ್ಲರಿಗೂ ತಿಳಿದಿರುವ ವಿಚಾರ, ಈ App ಮೂಲಕವೇ ತಮ್ಮ ಮೊಬೈಲ್ ಅನ್ನು ಮಾರಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 95 ಸಾವಿರ ರುಪಾಯಿಯನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, 47 ವರ್ಷದ ಅಪರ್ಣಾ ಥಕ್ಕರ್ ಸುರಿ ಎಂಬುವರು ತಮ್ಮ ಮೊಬೈಲ್ ಅನ್ನು Olx ಮೂಲಕ ಮಾರಲು ಮುಂದಾಗಿದ್ದರು. ಇನ್ನು ಈ ಮೊಬೈಲ್ ಅನ್ನು ತೆಗೆದುಕೊಳ್ಳುವುದಾಗಿ ಮೊಹಮ್ಮದ್ ಬಿಲಾಲ್ ಎಂಬಾತ ಅರ್ಪಣಾ ಅವರಿಗೆ ಕರೆ ಮಾಡಿದ್ದ. ನಂತರ ಅಪರ್ಣಾ ಆನ್ ಲೈನ್ ಆ್ಯಪ್ ಸ್ವಿಗ್ಗಿ ಗೋ ಆ್ಯಪ್ ನಲ್ಲಿ ಬಿಲಾಲ್ ಗೆ ಮೊಬೈಲ್ ತಲುಪಿಸಲು ಮುಂದಾಗಿದ್ದಾರೆ.

ಸ್ವಿಗ್ಗಿ ಗೋ ಆ್ಯಪ್ ಎಂದರೆ ಯಾವುದೇ ಮೂಲೆಗೂ ಪ್ಯಾಕೇಜ್‍ಗಳನ್ನು ತಲುಪಿಸುವಂಥ ತಕ್ಷಣ ಪಿಕಪ್ ಮತ್ತು ಡ್ರಾಪ್ ಸೇವೆ ಆಗಿದೆ. ಸ್ವಿಗ್ಗಿ ಸ್ಟೋರ್‌ಗಳಂತೆ ಸ್ವಿಗ್ಗಿ ಗೋ ಎನ್ನುವುದು ಕೂಡ ಸ್ವಿಗ್ಗಿ ಅಪ್ಲಿಕೇಷನ್‍ನ ಭಾಗವೇ ಆಗಿದೆ. ಇದರಲ್ಲಿ ಮೊಬೈಲ್ ಕೇಳಿದ ಬಿಲಾಲ್ ಎನ್ನುವ ವ್ಯಕ್ತಿಗೆ ಮೊಬೈಲ್ ಕಳುಹಿಸಿದ್ದಾರೆ. ಅದರಂತೆ ಸ್ವಿಗ್ಗಿ ಗೋ ಆ್ಯಪ್ ಡೆಲಿವರಿ ಬಾಯ್ ಮೊಬೈಲ್ ಅನ್ನು ಅರ್ಪಣಾರಿಂದ ಪಡೆದುಕೊಂಡಿದ್ದಾನೆ. ನಂತರ 11 ಗಂಟೆ ಸುಮಾರಿಗೆ ಬಿಲಾಲ್ ಮಹಿಳೆಗೆ ಕರೆ ಮಾಡಿ ನಿಮ್ಮ ಆರ್ಡರ್ ಕ್ಯಾನ್ಸಲ್ ಆಗಿದೆಯಂತೆ ಹೀಗಾಗಿ ಮೊಬೈಲ್ ಡೆಲಿವರಿ ಕೊಡುವುದಿಲ್ಲ ಡೆಲಿವರಿ ಬಾಯ್ ಹೇಳಿದ್ದಾಗಿ ಅಪರ್ಣಾಗೆ ತಿಳಿಸಿದ್ದಾನೆ.

Also read: ಸಂಚಾರಿ ನಿಯಮದ ನೇಪದಲ್ಲಿ ಟ್ರಾಫಿಕ್ ಪೋಲೀಸರ ದುರ್ವರ್ತನೆಗೆ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ; ಇದಕ್ಕೆ ಯಾರು ಹೊಣೆ??

ಇದನ್ನು ಕೇಳಿ ಆಘಾತಕ್ಕೆ ಒಳಗಾದ ಮಹಿಳೆ ಡೆಲಿವರಿ ಬಾಯ್ ಗೆ ಕರೆ ಮಾಡಿದಾಗ ಆತ ಸಹ ಇದನ್ನೇ ಹೇಳಿದ್ದು ನೀವು ಸ್ವಿಗ್ಗಿ ಕಸ್ಟಮರ್ ಕೇರ್ ಗೆ ಕರೆ ಮಾಡುವಂತೆ ತಿಳಿಸಿದ್ದಾನೆ. ನಂತರ ಆತುರದಲ್ಲಿ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿಯೋರ್ವ ನಿಮ್ಮ ಮೊಬೈಲ್ ಹಿಂಪಡೆಯಬೇಕು ಅಂದರೆ ಸ್ವಿಗ್ಗಿ ಖಾತೆಗೆ 3 ರುಪಾಯಿ ಕಳುಹಿಸುವಂತೆ ತಿಳಿಸಿದ್ದಾನೆ. ಆತ ಹೇಳಿದಂತೆ ಹಣವನ್ನು ಹಾಕುವ ಕೆಲಸವನ್ನು ಅರ್ಪಣಾ ಮಾಡಿದ್ದಾರೆ. ಇದಾದ ಕೆಲವೇ ನಿಮಿಷದಲ್ಲಿ ಅರ್ಪಣಾ ಅವರಿಗೆ ಸಂದೇಶವೊಂದು ಬಂದಿದೆ. ಅದರಲ್ಲಿ ನಿಮ್ಮ ಖಾತೆಯಿಂದ 95 ಸಾವಿರ ರುಪಾಯಿಯನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ಬಗ್ಗೆ ತಿಳಿಸಿದೆ. ಅದರಂತೆ ವಂಚಕರು ಮಹಿಳೆ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.

ಹೀಗೆ ದಿನನಿತ್ಯ ನೂರಾರು ಸೈಬರ್ ಕ್ರೈಂ ಕೇಸ್-ಗಳು ಕೇಳಿ ಬರುತ್ತಿದ್ದು, ಯಾವುದೇ ಆನ್ಲೈನ್-ನಲ್ಲಿ ವ್ಯವಹಾರ ನಡೆಸುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಅದರಲ್ಲಿ Olx App ಬಳಕೆಯಲ್ಲಿ ಹಿಂದಿ ಮಾತನಾಡುವ ವಂಚಕರು ಆರ್ಮಿ ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದಾರೆ. ಯಾವುದೇ ವಸ್ತುವನ್ನು ಕೊಳ್ಳುವುದು ಆಗಲಿ ಮಾರುವುದು ಅಗಲಿ ಅದಕ್ಕೆ ಬೇಗನೆ ಒಪ್ಪಿ ಒಂದು ಸ್ಥಳಕ್ಕೆ ಕರಿಸಿ ಹಲ್ಲೆ ಮಾಡಿ ವಸ್ತುಗಳ ಜೊತೆಗೆ ಹಣವನ್ನು ಕಿತ್ತುಕೊಳ್ಳುತ್ತಿದ್ದಾರೆ. ಆದಕಾರಣ ಆದಷ್ಟು ಎಚ್ಚರದಿಂದ ಆನ್ಲೈನ್ App ಬಳಸುವುದು ಒಳ್ಳೆಯದು.