ಅತ್ತೆ-ಮಾವ, ನಾದಿನಿ ಕಿರುಕುಳ ತಡೆಯಲಾರದೇ ನಗ್ನವಾಗಿ ಠಾಣೆಗೆ ಬಂದ ಸೊಸೆ; ಎಲ್ಲಿಗೆ ಬಂತು ಭಾರತೀಯ ಸಂಸ್ಕೃತಿ??

0
333

ಸಂಪ್ರದಾಯಕ್ಕೆ ಹೆಸರುವಾಸಿಯಾಗಿರುವ ಭಾರತದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದು ಯಾರಿಗೂ ನಿಲುಕುತ್ತಿಲ್ಲ, ಮೊದಲು ಹೆಣ್ಣನ್ನು ದೇವರು ಎಂದು ಪೂಜಿಸುತ್ತಿದ್ದರು ಆದರೆ ಜನರು ವಿದ್ಯಾವಂತರಾದಂತೆ, ಕಾಲ ಬೆಳೆದಂತೆ ನಮ್ಮ ಸಂಸ್ಕೃತಿಗಳು ಬೀದಿಗೆ ಬಂದಿವೆ ಎನ್ನುವುದಕ್ಕೆ ರಾಜಸ್ಥಾನದಲ್ಲಿ ನಡೆದ ಒಂದು ಘಟನೆ ಇಡಿ ದೇಶವೇ ನಾಚುವಂತೆ ಮಾಡಿದ್ದು ಮಹಿಳೆಯೊಬ್ಬಳು ಅತ್ತೆ- ಮಾವ ನಾದಿನಿಯ ಕಿರುಕುಳ ಒಳಗಾಗಿ ಬೇಸತ್ತು ಬೆತ್ತಲೆಯಾಗಿಯೇ ಪೊಲೀಸ್​​ ಠಾಣೆ ಮೆಟ್ಟಿಲೇರಿದ ಮನಕುಲುಕುವ ಘಟನೆಯೊಂದು ನಡೆದಿದೆ.

ಹೌದು ಸಂಸಾರ ಎಂದ ಮೇಲೆ ಜಗಳಗಳು ತಿಕ್ಕಾಟಗಳು ಇದೆ ಇರುತ್ತದೆ. ಇಂತಹ ಕಲಾಪದಲ್ಲಿ ಹೆಚ್ಚು ನೋವು ಅನುಭವಿಸುವುದು ಮಹಿಳೆಯರು ಎನ್ನುವುದು ಗೊತ್ತೇ ಇದೆ. ಅದರಂತೆ ಅತ್ತೆ-ಸೊಸೆ ಜಗಳ ಸಾಮಾನ್ಯವಾಗಿದೆ. ಎಲ್ಲೋ 100 ರಲ್ಲಿ 10 ರಷ್ಟು ಕುಟುಂಬಗಳಲ್ಲಿ ಮಾತ್ರ ಅತ್ತೆ-ಸೊಸೆ, ಅಮ್ಮ-ಮಗಳಂತೆ ಅನ್ಯೋನ್ಯವಾಗಿರುತ್ತಾರೆ. ಈ ಅತ್ತೆ-ಸೊಸೆ ಜಗಳ ತಾರಕ್ಕೇರಿ ಆತ್ಮಹತ್ಯೆ, ಕೊಲೆಯಂತಹ ಪ್ರಕರಣಗಳು ನಡೆಯುತ್ತವೆ. ಅತ್ತೆ-ಮಾವನ ಕಿರುಕುಳ ತಾಳಲಾರದೇ ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದನೆಲ್ಲ ನೋಡಿದ ಜನರು ಅದೇ ರೀತಿಯಲ್ಲಿ ತಮ್ಮ ಮನೆಯಲ್ಲಿ ಸೊಸೆಯಂದಿರ ಮೇಲೆ ಹಲ್ಲೆ ವರದಕ್ಷಿಣಿ ಕಿರಿಕುಳ ನೀಡುತ್ತಾರೆ. ಇಂತಹದೆ ಒಂದು ಘಟನೆ ಏನೆಲ್ಲಾ ಮಾಡಿದೆ ನೋಡಿ.

ಏನಿದು ಘಟನೆ?

ರಾಜಸ್ಥಾನದ ಚುರು ಜಿಲ್ಲೆಯ ಬಿದಸರ್ ಪ್ರದೇಶದಲ್ಲಿ ನಡೆದಿದ್ದು. ಮಹಿಳೆ ಮಹಾರಾಷ್ಟ್ರದ ಅಕೋಲ ನಿವಾಸಿಯಾಗಿದ್ದು, ಮದುವೆಯ ಬಳಿಕ ಚುರುವಿನಲ್ಲಿ ಪತಿ ಜೊತೆ ನೆಲೆಸಿದ್ದರು. ಪತಿ ಅಸ್ಸಾಮಿನಲ್ಲಿ ಕಾರ್ಮಿಕರಾಗಿದ್ದಾರೆ. ಸದ್ಯ ಸಂತ್ರಸ್ತೆ ನೀಡಿದ ದೂರಿನಂತೆ ಎಫ್‍ಐಆರ್ ದಾಖಲಾಗಿದ್ದು, ಸಂಬಂಧಿಕರನ್ನು ಬಂಧಿಸಲಾಗಿದೆ. ಪತಿ ಮನೆಯಲ್ಲಿ ಇಲ್ಲದಾಗ
ಸಂತ್ರಸ್ತೆಗೆ ಅತ್ತೆ, ಸೊಸೆ ಕಿರುಕುಳ ನೀಡುತ್ತಿದ್ದರು. ಇದೇ ವೇಳೆ ಅಲ್ಲಿದ್ದ ಇತರರು ಸಂತ್ರಸ್ತೆಗೆ ಸಹಾಯ ಮಾಡಲು ಬದಲು ತಮ್ಮ ಮೊಬೈಲ್ ನಲ್ಲಿ ಆಕೆಯ ಫೋಟೋ ಮತ್ತು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗುತ್ತಿದ್ದರು.

ಅತ್ತೆ ಹಾಗೂ ನಾದಿನಿ ಮಹಿಳೆ ಜೊತೆ ಕ್ಲುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಗಲಾಟೆ ತಾರಕಕ್ಕೇರಿ ಇಬ್ಬರು ಸೇರಿ ಸಂತ್ರಸ್ತೆಯ ಬಟ್ಟೆ ಬಿಚ್ಚಿದ್ದಾರೆ. ಇದರಿಂದ ನೊಂದ ಸಂತ್ರಸ್ತೆ ನಗ್ನವಾಗಿಯೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಮಹಿಳೆಯನ್ನು ಕಂಡ ಪೊಲೀಸರು ಗಾಬರಿಯಾಗಿದ್ದು, ಆಕೆಗೆ ರಕ್ಷಣೆ ನೀಡಿ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈಕೆ ನಗ್ನವಾಗಿ ಪೊಲೀಸ್ ಠಾಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಸಿಕ್ಕವರು ತಮ್ಮ ಮೊಬೈಲ್ ನಲ್ಲಿ ಮಹಿಳೆಯ ಫೋಟೋ ಹಾಗೂ ವಿಡಿಯೋ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಎಸ್‍ಪಿ ಸೀತಾರಾಮ್ ತಿಳಿಸಿದ್ದಾರೆ.

ಸಂತ್ರಸ್ತೆಯ ಮಾಹಿತಿ ಪಡೆದ ಪೊಲೀಸರು ಗಂಡ ಮನೆಯಲ್ಲಿ ಇಲ್ಲದ ವೇಳೆ ಆಕೆಯ ಅತ್ತೆ-ಮಾವ ಪ್ರತಿದಿನ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಭಾನುವಾರ ಅತ್ತೆ-ಮಾವನ ಜೊತೆಗೆ ನಾದಿನಿಯೂ ಸೇರಿ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ. ಈ ವೇಳೆ ಸಂತ್ರಸ್ತೆಯ ಗಂಡ ಮನೆಯಲ್ಲಿ ಇಲ್ಲದ ಕಾರಣ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ಬಟ್ಟೆಯನ್ನು ಹರಿದು ಬೆತ್ತಲೆ ಮಾಡಿದ್ದಾರೆ’ ಎಂದು ಮಹಿಳೆ ವಿವರಿಸಿದ್ದಾಳೆ ಎಂದು ಎಎನ್​ಐ ವರದಿ ಮಾಡಿದೆ.

ಅದರಂತೆ ಸಿಸಿಟಿವಿಯಲ್ಲಿ ಸೆರೆಯಾದ ಸಂತ್ರಸ್ತೆಯ ದೃಶ್ಯವನ್ನು ಡಿಲೀಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಿಕ್ಕಿ ಹರಿದಾಡಬಾರದೆಂಬ ಉದ್ದೇಶದಿಂದ ಅದನ್ನು ಡಿಲೀಟ್ ಮಾಡಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದವರ ಹಾಗೂ ಆಕೆಯ ಫೋಟೋ ಹಾಗೂ ವಿಡಿಯೋ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‍ಪಿ ಎಚ್ಚರಿಕೆ ನೀಡಿದ್ದಾರೆ.