ಬಡ ಮಹಿಳೆ ರೈಲ್ವೆ ಸ್ಟೇಷನ್ ನಲ್ಲಿ ಹಾಡಿದ ಒಂದೇ ಹಾಡಿನಿಂದ ರಿಯಾಲಿಟಿ ಶೋಗೆ ಎಂಟ್ರಿ; ಬೇರೆ ಬೇರೆ ಭಾಷೆಯ ರಿಯಾಲಿಟಿ ಶೋಗಳಿಂದ ಬರುತ್ತಿವೆ ಆಪರ್..

0
576

ಜೀವನದಲ್ಲಿ ಸ್ಟಾರ್ ಎನ್ನುವುದು ಎಲ್ಲರಿಗೂ ಬಂದೆ ಬರುತ್ತದೆ. ಅದು ಬಂದಾಗ ಮಾತ್ರ ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು, ಇಂತಹ ಸ್ಟಾರ್-ಗಳನ್ನೂ ಈಗ ಸಾಮಾಜಿಕ ಜಾಲತಾಣಗಳು ವದಗಿಸಿಕೊಡುತ್ತಿವೆ ಎಂದರೆ ತಪ್ಪಾಗಲಾರದು. ಇದಕ್ಕೆ ಸಾಕ್ಷಿ ಎಂದರೆ ಬಡ ಮಹಿಳೆ ರೈಲ್ವೆ ನಿಲ್ದಾಣದಲ್ಲಿ ಬೇಸರ ಟೈಮ್ ಪಾಸ್ ಮಾಡಿಕೊಳ್ಳಲು ಹಾಡಿದ ಹಾಡು ಇಂದು ಭಾರಿ ವೈರಲ್ ಆಗಿತ್ತು ದೊಡ್ಡ ಗಾಯಕಿಯ ದ್ವನಿಯಲ್ಲಿ ಹೇಳಿದ ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು, ಮಹಿಳೆ ನೋಡಿದರೆ ಬಡತನದಲ್ಲಿ ಸರಿಯಾದ ಜೀವನವನ್ನು ಮಾಡಿಕೊಳ್ಳಲು ಸಾಧ್ಯವಾಗದೆ ರೈಲ್ವೆ ನಿಲ್ದಾಣದಲ್ಲಿ ಜೀವನ ಮಾಡುತ್ತಿದ್ದಾಳೆ, ಆದರೆ ಅವಳಲ್ಲಿರುವ ಪ್ರತಿಬೆ ಇಂದು ಹೊರಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ಮಹಿಳೆ ಈಗ ತನ್ನ ಜೀವನವನ್ನೇ ಬದಲಾಯಿಸಿಕೊಂಡು ರಿಯಾಲಿಟಿ ಶೋ ನಲ್ಲಿ ಮಿಂಚುತ್ತಿದ್ದಾಳೆ.

ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಬಡ ಮಹಿಳೆ

ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ ‘ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಮೊಂಡಲ್ ಅವರ ಈ ವಿಡಿಯೋವನ್ನು ‘ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಈಗ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿದೆ. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ.

ಮೊಂಡಲ್ ಅವರ ಈ ವಿಡಿಯೋವನ್ನು ‘ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್
ಅವರಿಗೆ ಈಗ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿದೆ. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ರಿಯಾಲಿಟಿ ಶೋಗಾಗಿ ಮೊಂಡಲ್ ಬ್ಯೂಟಿಪಾರ್ಲರ್ ನಲ್ಲಿ ರೆಡಿಯಾಗುತ್ತಿರೋ ಫೋಟೋಗಳು ಈಗ ಸಾಮಾಜಿಕ‌ ಜಾಲತಾಣದಲ್ಲಿ ಶೇರ್ ಆಗಿದ್ದು ಫೋಟೋಗಳು ಸಹ ಸಖತ್ ವೈರಲ್ ಆಗುತ್ತಿದೆ.

ಇನ್ನು ಮೊಂಡಲ್‌ ಅವರಿಗೆ ಮುಂಬೈ ಮಾತ್ರವಲ್ಲದೇ ದೇಶದ ಬೇರೆ ಬೇರೆ ಭಾಷೆಯ ರಿಯಾಲಿಟಿ ಶೋಗಳಲ್ಲು ಭಾಗವಹಿಸುವಂತೆ ಕರೆಕೂಡ ಬಂದಿದೆಯಂತೆ,
ಈ ಹಿಂದೆ ಮೊಂಡಲ್ ಹಾಡಿದ್ದ ಹಾಡು ಸೋಶಿಯಲ್ ಮೀಡಿಯಾದಲ್ಲಿ 40ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು 60ಸಾವಿರ ಲೈಕ್ಸ್ ಕೂಡ ಪಡೆದಿದೆ ಅಲ್ಲದೇ ಸಾವಿರಕ್ಕೂ ಅಧಿಕ ಕಾಮೆಂಟ್ ಕೂಡ ಆ ವಿಡಿಯೋಗೆ ಲಭಿಸಿದೆ. ಒಟ್ಟಿನಲ್ಲಿ ಅದೃಷ್ಟ ಅನ್ನೋದು ಎಲ್ಲಿ ಯಾವಾಗ ಬೇಕಾದರೂ ಯಾವ ರೂಪದಲ್ಲಿ ಯಾದರೂ ಬರಬಹುದು ಅನ್ನೋದಕ್ಕೆ ಮೊಂಡಲ್ ಸಾಕ್ಷಿಯಾಗಿರುವ ಮಹಿಳೆಗೆ ಮುಂಬೈ ಅಲ್ಲದೆ ಕೇರಳ, ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಂತೆ ಮೊಂಡಲ್ ಅವರಿಗೆ ಮನವಿ ಮಾಡಲಾಗುತ್ತಿದೆ. ಅಲ್ಲದೆ ತನ್ನದೆ ಸ್ವಂತ ಮ್ಯೂಸಿಕ್ ಆಲ್ಬಂ ಶುರು ಮಾಡುವಂತೆ ಮೊಂಡಲ್ ಅವರಿಗೆ ಅವಕಾಶ ಬರುತ್ತಿದೆ.