ಇನ್ಮುಂದೆ ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ನೈಟ್ ಶಿಫ್ಟ್; ಸಂಜೆ 7ರಿಂದ ಬೆಳಗ್ಗೆ 6ರ ಅವಧಿಯಲ್ಲಿ ಕೆಲಸಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರ.!

0
92

ಸರ್ಕಾರಿ ಸೇರಿದಂತೆ ಖಾಸಗಿ ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ಸರಿಯಾದ ಮಿಸಲಾತಿ, ವೇತನ ಸಿಗುತ್ತಿದ್ದು ಈಗ ಮಹಿಳೆಯರಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು ಸರ್ಕಾರೀ ಸ್ವಾಮ್ಯದ ಎಲ್ಲಾ ಕಾರ್ಖಾನೆಗಳಲ್ಲೂ ನೈಟ್ ಶಿಫ್ಟ್ ಡ್ಯೂಟಿ ಮಾಡಲು ಅವಕಾಶ ನೀಡಲಾಗಿದೆ ಆದರೆ ಇದರಿಂದ ಮಹಿಳೆಯರಿಗೆ ಎಷ್ಟೊಂದು ಅನುಕೂಲವಾಗುತ್ತೆ ಇದರಲ್ಲಿ ಮಹಿಳೆಯರಿಗೆ ಭದ್ರತೆ ಸಿಗುತ್ತಾ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಈ ಸಂಬಂಧ ಇಂದು ಅಧಿಸೂಚನೆ ಹೊರಡಿಸಿದೆ. ಕಾರ್ಖಾನೆಗಳಲ್ಲಿ ನೈಟ್ ಶಿಫ್ಟ್ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಯನ್ನು ಕಲ್ಪಿಸಲು 24 ಅಂಶಗಳನ್ನು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ.

Also read: ಬೆಂಗಳೂರಿನಲ್ಲಿ ಜೋರಾಗಿ ತಲೆಯೆತ್ತಿದೆ ಡ್ರಗ್ ಮಾಫಿಯಾ? ಬರ್ತ್ ಡೇ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿ ಇಬ್ಬರು ಸಾವು!!

ಮಹಿಳೆಯರಿಗೆ ನೈಟ್ ಶಿಫ್ಟ್?

ಹೌದು ಮದ್ರಾಸ್ ಹೈಕೋರ್ಟ್ ಆದೇಶದಂತೆ ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮಹಿಳೆಯರೂ ಕೂಡ ಕೆಲಸ ಮಾಡಬಹುದು. ಹೈಕೋರ್ಟ್ ಆದೇಶದ ಪ್ರಕಾರ ಮಹಿಳೆಯರ ರಾತ್ರಿ ಪಾಳಿಗೆ ನಿರ್ಬಂಧ ಹೇರಿದ್ದ ಕಾರ್ಖಾನೆ ಕಾಯ್ದೆ ಸೆಕ್ಷನ್ 66(1) ರದ್ದುಪಡಿಸಲಾಗಿದೆ. ಹೀಗಾಗಿ ಮಹಿಳೆಯರ ರಾತ್ರಿ ಪಾಳಿಗಿದ್ದ ನಿರ್ಬಂಧ ತೆರವಾದಂತಾಗಿದೆ.ಆದರೆ ರಾತ್ರಿ ಪಾಳಿಗೆ ಸರ್ಕಾರ ಹಾಗೂ ಕಂಪನಿಗಳು ಇನ್ನಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ನಿಯಮಗಳಂತೆ ಸೂಕ್ತ ಭದ್ರತೆಗಳನ್ನು ತೆಗೆದುಕೊಳ್ಳುಕೊಳ್ಳುವುದು ಅನಿವಾರ್ಯವಾಗಲಿದೆ. ರಾತ್ರಿ ಪಾಳಿಯ ಪೂರಕವಾದ ವಾತಾವರಣವನ್ನು ಕಾರ್ಖಾನೆಗಳು ಸೃಷ್ಟಿಸಬೇಕಿದೆ.

Also read: ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡ ಆರೋಪ, ನಿತ್ಯಾನಂದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದಂಪತಿಗಳು.!

ಸುಮಾರು ಹತ್ತು ವರ್ಷಗಳ ಹಿಂದೆ ಐಟಿ ಹಾಗೂ ಐಟಿ ಆಧಾರಿತ ಸೇವಾ ವಲಯಗಳಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶವಾಗುವಂತೆ ಈ ಕಾನೂನುಗಳಿಗೆ ಕರ್ನಾಟಕ ಸರ್ಕಾರ ತಿದ್ದುಪಡಿ ತಂದಿತ್ತು. ರಾಜ್ಯ ಸರ್ಕಾರದ ಈ ಆದೇಶವು ಐಟಿ ವಲಯದಲ್ಲಿನ ಕಾರ್ಯನಿರ್ವಹಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ರಾಜಸ್ಥಾನ ಹಾಗೂ ಮಹಾರಾಷ್ಟ್ರ ಸರ್ಕಾರಗಳೂ ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟಿವೆ. ಇದೇ ಕ್ರಮವನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ.

ಅಧಿಸೂಚನೆಯಲ್ಲಿ ಏನಿದೆ?

ಕಾರ್ಮಿಕ ಇಲಾಖೆ ಹೊರಡಿಸಿರುವ 24 ಅಂಶಗಳ ಅಧಿಸೂಚನೆಯಲ್ಲಿ ಯಾವುದೇ ಮಹಿಳಾ ಕಾರ್ಮಿಕರನ್ನು ನೈಟ್ ಶಿಫ್ಟ್​​ನಲ್ಲಿ ಕೆಲಸ ಮಾಡಬೇಕೆಂದು ಕಡ್ಡಾಯಗೊಳಿಸಬಾರದು.
ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಮಹಿಳೆಯರಿಂದ ಲಿಖಿತ ಸಮ್ಮತಿ ಪಡೆದುಕೊಳ್ಳಬೇಕು.

Also read: ದೇಶದಾದ್ಯಂತ ಎನ್.ಆರ್.ಸಿ. ಜಾರಿಯಾಗುತ್ತೆ: ಅಮಿತ್ ಶಾ; ಕರ್ನಾಟಕದಲ್ಲೂ ಬಾಂಗ್ಲಾ ವಲಸಿಗರು ಇದ್ದಾರೆ ಅನ್ನೋ ಮಾತಿದೆ, ಇದು ಒಳ್ಳೆಯ ಬೆಳವಣಿಗೆ ಅಂತ ಹೇಳಬಹುದಾ?

ನೈಟ್ ಶಿಫ್ಟ್​ನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗದಂತೆ ಭದ್ರತಾ ವ್ಯವಸ್ಥೆ ರೂಪಿಸಬೇಕು.

ಮಹಿಳೆಗೆ ಅಭದ್ರತೆ ಕಾಡುವಂತಹ ವಾತಾವರಣ ಇರಬಾರದು.

ಕಾರ್ಖಾನೆಗಳಲ್ಲಿ ಮಹಿಳಾ ಉದ್ಯೋಗಿಗಳ ದೂರುಗಳನ್ನ ನಿರ್ವಹಿಸುವ ಸಮಿತಿ ರಚನೆಯಾಗಬೇಕು.

ಕಾರ್ಖಾನೆ ಹಾಗೂ ಸುತ್ತಮುತ್ತ ಸರಿಯಾದ ಬೆಳಕಿನ ವ್ಯವಸ್ಥೆ ಮತ್ತು ಕಣ್ಗಾವಲು ಇರಬೇಕು.

ನೈಟ್​ಶಿಫ್ಟ್​ನಲ್ಲಿ ಕನಿಷ್ಠ 10 ಜನರಿರಬೇಕು, ಮಹಿಳೆಯರ ಪ್ರಮಾಣ ಮುಕ್ಕಾಲು ಭಾಗ ಇರಬೇಕು.

ಇಬ್ಬರು ಮಹಿಳಾ ವಾರ್ಡನ್ಸ್, ಪ್ರತ್ಯೇಕ ಕ್ಯಾಂಟೀನ್ ಸೌಲಭ್ಯ ಹೀಗೆ ವಿವಿಧ 24 ಅಂಶಗಳು ಈ ಅಧಿಸೂಚನೆಯಲ್ಲಿವೆ.