ಈ ಗ್ರಾಮದ ಹೆಣ್ಣುಮಕ್ಕಳು ಇಡೀ ದೇಶಕ್ಕೆ ಮಾದರಿ, ಅಕ್ರಮ ಹೆಂಡದ ಮಾರಾಟವನ್ನು ತಡೆಯುವುದಕ್ಕೂ ಏನು ಮಾಡಿದ್ರು ಗೊತ್ತಾ??

0
830

ಈ ಊರಿನ ಮಹಿಳೆಯರಂತೆ ಎಲ್ಲ ಊರಿನ ಮಹಿಳೆಯರೂ ಇದ್ದರೆ, ಮಹಾತ್ಮಾ ಗಾಂಧಿ ಕಂಡ ಸರಾಯಿ ಮುಕ್ತ ಗ್ರಾಮ ನಿರ್ಮಾಣ ಸಾಕಾರ ಗೊಳ್ಳುತ್ತದೆ. ಗದಗ ತಾಲೂಕಿನ ಹಾತಲಗೇರಿ ಗ್ರಾಮ ಮಹಿಳೆಯರು ಮದ್ಯದಿಂದ ತಮ್ಮ ಕುಟುಂಬ ಹಾಗೂ ಗ್ರಾಮವನ್ನು ಕಾಯಲು ಟೊಂಕ ಕಟ್ಟಿ ನಿಂತಿದ್ದಾರೆ.

Credit: publictv.in

ಈ ಗ್ರಾಮದಲ್ಲಿ ಸೂರ್ಯ ಭೂಮಿಗೆ ಅಪ್ಪಳಿಸುವ ಮುನ್ನವೇ ಪುರುಷರ, ಕಾರ್ಯಪ್ರವೃತ್ತ ರಾಗುತ್ತಿದ್ದರು. ಆದರೆ ಇವರು ನೀಟಾಗಿ ಹೊಲಕ್ಕೆ ಆಗಲಿ ತಮ್ಮ ಕೆಲಸಗಳಿಗೆ ಹೋಗುತ್ತಿರಲಿಲ್ಲ. ಬದಲಿಗೆ ಸರಾಯಿ ಅಂಗಡಿ ಮುಂದೆ ಕ್ಯೂ ನಿಲ್ತಿದ್ದರು. ಈ ದೃಶ್ಯವನ್ನು ದಿನಂಪ್ರತಿ ನೋಡಿ ನೋಡಿ ಬೇಸತ್ತಿದ್ದ ಹೆಂಗಳೆಯರು ಇತ್ತೀಚಿಗೆ ಹೊಸ ಪ್ಲಾನ್​ ಮಾಡಿದ್ರು. ಮಹಿಳೆಯರು ಮಾಡಿದ ಪ್ಲಾನ್​ನಂತೆ ಮದ್ಯದ ಅಂಗಡಿಯ ಮಾಲೀಕನ ಮನೆ ಎದುರು ಪ್ರತಿಭಟನೆ ಮಾಡಿದ್ರು. ಅಲ್ಲದೆ ಮನೆಗೆ ನುಗ್ಗಿ ಅಕ್ರಮ ಮದ್ಯವನ್ನು ಚರಂಡಿಗೆ ಸುರಿದು ಬಾಟಲ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಹಾತಲಗೇರಿ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಮನೆಗೆ ನುಗ್ಗಿದ ವೇಳೆ ಅಕ್ರಮ ಮದ್ಯ ಮಾರಾಟಗಾರನನ್ನು ಎಳೆದಾಡಿ ಗಲಾಟೆ ಮಾಡಿದ್ರು. ಈ ವೇಳೆ ಮನೆಯವರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪ್ರತಿಭಟನಾ ನಿರತ ಮಹಿಳೆಯರು ಅಕ್ರಮ ಮದ್ಯ ಮಾರಾಟ ನಿಲ್ಲದೆ ಇದಲ್ಲಿ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ರು. ಇನ್ನು ಈ ಅಕ್ರಮ ಮದ್ಯ ಮಾರಾಟದ ಬಗ್ಗೆ ಎಲ್ಲ ಗೊತ್ತಿದ್ರೂ, ಅಧಿಕಾರಿಗಳು ಮಾತ್ರ ತುಟಿ ಪಿಟಿಕ್ ಅನುತ್ತಿಲ್ಲ. ಏಕೆಂದ್ರೆ ಅಧಿಕಾರಿಗಳಿಗೆ ಸೇರಬೇಕಾದ ಕಮೀಷನ್ ಸೇರುತ್ತಿತ್ತು.

Credit: publictv.in

ಇಂತಹ ದಿಟ್ಟ ಗಿತ್ತಿ ಹೆಣ್ಣು ಮಕ್ಕಳು ನಮ್ಮ ಊರಿನಲ್ಲೂ ಇದ್ದಿದ್ರೇ ಎಷ್ಟು ಚೆನ್ನ ಎಂದು ಪಕ್ಕದ ಊರಿನ ಹಿರಿಯರು ಬಾಯಿ ಮೇಲೆ ಬೆಟ್ಟು ಇಡುವಂತೆ ಮಾಡಿದ್ದಾರೆ.