ಮೊದಲ ಬಾರಿಗೆ ನಡೆಯುತ್ತಿರುವ ಮಹಿಳಾ ಯೋಧರ ರ‍್ಯಾಲಿಯಲ್ಲಿ ಸಾವಿರಾರು ಯುವತಿಯರು; ಮಹಿಳೆಯರ ದೇಶಾಭಿಮಾನಕ್ಕೆ ಭಾರಿ ಮೆಚ್ಚುಗೆ…

0
302

ಇತ್ತೀಚಿಗೆ ಮಹಿಳೆಯರು ದೇಶದ ಎಲ್ಲ ಉದ್ಯೋಗ ಕ್ಷೇತ್ರ ಬೆರೆತು ಸೇವೆಸಲ್ಲಿಸುತ್ತಿದ್ದಾರೆ. ಅದರಂತೆ ದೇಶ ಸೇವೆ ಮಾಡಲು ಕೂಡ ಮುಂದೆ ಬಂದಿರುವ ಯುವತಿಯರು ಭಾರತೀಯ ಸೇನೆಯನ್ನು ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ ಪ್ರತ್ಯಕೆ ಸಾಕ್ಷಿ ಎಂದರೆ ಬೆಳಗಾವಿಯಲ್ಲಿ ಮಹಿಳಾ ಯೋಧರ ನೇಮಕ ರ್ಯಾಲಿ ಅಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಾರು ಯುವತಿಯರು ನೇಮಕಾತಿಯಲ್ಲಿ ಸೇರಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಸೇರುವ ನಿರೀಕ್ಷೆಯನ್ನು ಯಾರು ಮಾಡಿರಲಿಲ್ಲ, ಆದರೆ ದೇಶ ಸೇವೆಗೆ ಮುಂದಾದ ಈ ಯುವತಿರನ್ನು ಕಂಡು ಸೇನಾಧಿಕಾರಿಗಳೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Also read: ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ..

ಹೌದು ದೇಶದಲ್ಲಿ ಅತೀ ರಿಸ್ಕ್ ನೌಕರಿ ಎಂದರೆ ಸೇನೆಯ ಕೆಲಸವಾಗಿದ್ದು, ಇದರಲ್ಲಿ ಮಹಿಳೆಯರು ಆಸಕ್ತಿವಹಿಸುತ್ತಾರೆ ಎನುವುದು ಸಾಕಷ್ಟ ಅನುಮಾನ ಹುಟ್ಟುಹಾಕಿತ್ತು, ಆದರೆ ನಮಗೂ ದೇಶ ಸೇವೆ ಮಾಡುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಹಿಳೆಯರು ಬೆಳಗಾವಿಗೆ ದಾವಿಸಿದ್ದಾರೆ. ಇದು ದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸೇನಾ ಭರ್ತಿ ರ್‍ಯಾಲಿ ನಡೆಯುತ್ತಿರುವುದು ಆಗಿದ್ದು, ಗುರುವಾರ ಮರಾಠಾ ಲಘು ಪದಾತಿ ದಳ ಶಿವಾಜಿ ಕ್ರೀಡಾಂಗಣದಲ್ಲಿ ರ್‍ಯಾಲಿ ಆರಂಭವಾಗಿದೆ. ಸೈನ್ಯಕ್ಕೆ ಸೇರಬೇಕೆಂಬ ಆಸೆಯೊಂದಿಗೆ ಸಾವಿರಾರು ಯುವತಿಯರು ಕುಂದಾನಗರಿ ಬೆಳಗಾವಿಗೆ ಆಗಮಿಸಿದ್ದಾರೆ. ನೆನ್ನೆ ಬೆಳಗ್ಗೆಯಿಂದಲೇ ಯುವತಿಯರ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಯಿತ್ತಿದ್ದು.

ದಕ್ಷಿಣ ಭಾರತದ ಐದು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಿಂದ ಸಾವಿರಾರು ಯುವತಿಯರ ದಂಡೇ ಕುಂದಾನಗರಿಗೆ ಆಗಮಿಸಿದೆ. ಸುರಿವ ಮಳೆಯನ್ನು ಲೆಕ್ಕಿಸದೇ ಬೆಳಗ್ಗೆ 6 ಗಂಟೆಗೆಯಿಂದಲೇ ದೈಹಿಕ ಪರೀಕ್ಷೆ ಪ್ರಕ್ರಿಯೆ ನಡೆಯುವ ಕ್ಯಾಂಪ್‌ ಪ್ರದೇಶದಲ್ಲಿನ ದಾಪುಗಾಲು ಹಾಕುತ್ತಿದ್ದರು. ರಾರ‍ಯಲಿಯ ಕುರಿತು ಸರಿಯಾದ ಮಾಹಿತಿ ಇಲ್ಲದೇ ಆಗಮಿಸಿದ ನೂರಾರು ಯುವತಿಯರು, ಭರ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೇ ಹಿಂತಿರುಗಬೇಕಾಯಿತು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌, ನಿಕೋಬಾರ್‌, ಪುದುಚೇರಿಯಿಂದ ಯುವತಿಯರು ಆಗಮಿಸಿದ್ದಾರೆ.

Also read: ಹಾಸನ ಜಿಲ್ಲೆಯಲ್ಲಿ ಹಲವಾರು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ರನ್ನಿಂಗ್, ಹೈಜಂಪ್, ಸದೃಢತೆ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಯಿತು. ಮೊದಲ ದಿನ ಕರ್ನಾಟಕ ಹಾಗೂ ಕೇರಳದ 800 ಮಂದಿ ದೈಹಿಕ ಪರೀಕ್ಷೆಗೆ ಹಾಜರಾದರು. ಮನೆಯಲ್ಲಿ ಅಣ್ಣ, ಅಪ್ಪ ದೇಶ ಸೇವೆಗೆ ಹೋಗಲು ಆಗಿಲ್ಲ. ಆದ್ದರಿಂದ ನಾನು ಪ್ರಯತ್ನ ಪಡುತ್ತಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು. ರ್‍ಯಾಲಿ ಆಗಸ್ಟ್‌ 5ರವರೆಗೆ ಮುಂದುವರಿಯಲಿದೆ. ಮಹಿಳಾ ಸೇನಾ ಭರ್ತಿ ರ್‍ಯಾಲಿ ಬಗ್ಗೆ ಮಾಹಿತಿ ಪಡೆದ ಸಾವಿರಾರು ಯುವತಿಯರು ನೇರವಾಗಿ ಎಂಎಲ್ಆರ್ ಸಿ ಬಂದಿದ್ದಾರೆ.

ಇಲ್ಲಿನ ಸೇನಾ ಅಧಿಕಾರಿಗಳು ಆನ್ ಲೈನ್ ಮೂಲಕ ಹೆಸರು ನೋಂದಾಯಿಸಿದ್ದ ಅಭ್ಯರ್ಥಿಗಳ ಪೈಕಿ ಮೆಟ್ರಿಕ್ಯುಲೇಷನ್ ಆಧಾರದ ಮೇಲೆ ಯುವತಿಯರ ದೈಹಿಕ ಪರೀಕ್ಷೆ ಆರಂಭಿಸಿ ಉಳಿದವರನ್ನು ವಾಪಸ್ ಕಳುಹಿಸಿದ್ದಾರೆ. ಇದರಿಂದ ನಿರಾಶೆಗೊಂಡವರು ಶಿವಾಜಿ ಕ್ರೀಡಾಂಗಣದ ಹೊರಗೆ ಉಳಿದು ತಮಗೂ ಅವಕಾಶಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಸೇನೆಯಲ್ಲಿ ಮಹಿಳೆಯರಿಗೆ ಇರುವ ಆಸಕ್ತಿ ಕಂಡು ದೇಶ ಮತ್ತಷ್ಟು ಸುಭದ್ರವಾಗಿ ಇರುತ್ತೆ ಎನ್ನುವುದರಲ್ಲಿ ಅನುಮಾನವಿಲ್ಲ ಎನ್ನುವುದು ಜನರ ಅಭಿಪ್ರಾಯವಾಗಿದೆ.