ಶಬರಿಮಲೆ ದರ್ಶನ ಪಡೆದ ಮಹಿಳೆಯರು ಮಾಂಸ ತಿಂದು ದರ್ಶನ ಮಾಡಿದ್ರ??

0
364

ಮಹಿಳೆಯರು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಬಾರದು ಎಂಬ ವಿಷಯಕ್ಕೆ ಇಡಿ ದೇಶದ ತುಂಬೆಲ್ಲ ವಿವಾದ ನಡೆದು ನಿರಂತರ ಹೋರಾಟ ನಡೆಯುತ್ತಿದೆ. ಈ ಗೊಂದಲದ ಮದ್ಯದಲ್ಲೇ ಬಿಂದು ಮತ್ತು ಕನಕದುರ್ಗ ಎಂಬ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿ 800 ವರ್ಷಗಳ ಹಿಂದಿನ ಸಂಪ್ರದಾಯ ಮುರಿದು ಇತಿಹಾಸ ಸೃಷ್ಟಿ ಮಾಡಿದರು. ಈ ಘಟನೆಗೆ ಇಡಿ ಕೇರಳವೆ ಜ್ವಾಲೆಯಾಗಿದೆ. ಅದರಂತೆ ಈ ಇಬ್ಬರು ಮಹಿಳೆಯರ ಪ್ರವೇಶದ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದು ದರ್ಶನದ ಮೊದಲು ಮಾಂಸ ತಿಂದಿದ್ದರು ಎಂದು ತಿಳಿದು ಬಂದಿದೆ.

@publictv.in

Also read: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್; ಬಿತ್ತನೆ ಅವಧಿಯಲ್ಲಿ ನೇರವಾಗಿ ಎಕರೆಗೆ 4 ಸಾವಿರ ನಗದು ಘೋಷಣೆ..

ಸಿಸಿ TV ಯಲ್ಲಿ ಮಾಂಸ ತಿಂದ ವೀಡಿಯೊ;

ಹೌದು ಕಡೆಗೂ ತಮ್ಮ ಹಠ ಬಿಡದ ಮಹಿಳೆಯರು ಅಯ್ಯಪ್ಪನ ದರ್ಶನ ಪಡೆಯಲೇ ಬೇಕು ಅಂತ ಸಂಚು ಹಾಕಿ ದರ್ಶನ ಪಡೆದ ಈ ಇಬ್ಬರು ಇಬ್ಬರೂ ಲಾಡ್ಜ್ ನಲ್ಲಿದ್ದ ಸಂದರ್ಭ ಯಾವುದೇ ರೀತಿಯ ವೃತ ಪಾಲಿಸದೆ ಬಿಂದಾಸ್ ಪಾರ್ಟ್ ಮಾಡಿದ್ದಾರೆ ಎಂದು ಲಾಡ್ಜ್ ಸಿಬ್ಬಂದಿ ಮತ್ತು ಮಾಲೀಕರಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಂತರ ತಿಳಿದ ಹಾಗೆ. 4 ದಿನಗಳ ಮೊದಲೇ ಅಂದ್ರೆ ಡಿಸೆಂಬರ್ 29ರ ಮಧ್ಯಾಹ್ನ 2 ಗಂಟೆ ವೇಳೆಗೆ ಬಿಂದು ಮತ್ತು ಕನಕದುರ್ಗ ಕೊಡಗಿನ ವಿರಾಜಪೇಟೆಗೆ ಬಂದಿಳಿದಿದ್ದರು. ದೊಡ್ಡೆಟ್ಟಿ ವೃತ್ತದ ಬಳಿಯಿರೋ ಸೀತಾಲಕ್ಷ್ಮೀ ಲಾಡ್ಜ್‍ನಲ್ಲಿ ಬಿಂದು ಹೆಸರಲ್ಲಿ ರೂಂ ಬುಕ್ ಮಾಡಿದ್ರು.
ಇವರೊಂದಿಗೆ ಬಂದಿದ್ದ ಪುರುಷ ಇವರನ್ನು ಬಿಟ್ಟು ವಾಪಸ್ ಹೋಗಿದ್ದನು. ಲಾಡ್ಜ್‍ನಲ್ಲಿ ಬಿರಿಯಾನಿ ಅದು ಇದು ಅಂತ ಭರ್ಜರಿ ಮಾಂಸದೂಟ ಮಾಡಿದ್ದ ಈ ಮಹಿಳೆಯರು ಯಾವುದೇ ವೃತ ಪಾಲಿಸಿರಲಿಲ್ಲ. 2 ದಿನ ಅಲ್ಲೇ ಉಳಿದುಕೊಂಡಿದ್ದ ಇವರು ಡಿಸೆಂಬರ್ 31ರಂದು ರೂಂ ಖಾಲಿ ಮಾಡಿದ್ರು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಅಂತ ಲಾಡ್ಜ್ ಮಾಲೀಕ ಹರಿಹರನ್ ತಿಳಿಸಿದ್ದಾರೆ.

@publictv.in

Also read: ನಿಮ್ಮ್ ಮಕ್ಕಳ ಮೆಚ್ಚಿನ ಆಹಾರವಾದ ಮ್ಯಾಗ್ಗಿ , ನೂಡಲ್ಸ್ ನಲ್ಲಿ ಸೀಸ ಮತ್ತು ವಿಷಕಾರಿ ಅಂಶ ಇದೆ ಎಂದು ಆಹಾರ ತಯಾರಿಕ ಕಂಪನಿ ನೆಸ್ಲೆ ಒಪ್ಪಿಕೊಂಡಿದೆ…

ಮಹಿಳೆಯರ ಮಾಸ್ಟರ್ ಪ್ಲಾನ್;

ಲಾಡ್ಜ್ ಗೆ ಬರುವಾಗ ಬಣ್ಣದ ಧಿರಿಸಿನಲ್ಲಿ ಬಂದಿದ್ದ ಬಿಂದು ಮತ್ತು ಕನಕದುರ್ಗಾ ಲಾಡ್ಜ್ ರೂಂ ಖಾಲಿ ಮಾಡಿ, ಈ ಲಾಡ್ಜ್ ನಿಂದಲೇ ಶಬರಿಮಲೆಗೆ ಎಂಟ್ರಿ ಪಡೆಯುವ ಸಂಬಂಧ ಪ್ಲಾನ್ ರೂಪಿಸಿದ್ದಲ್ಲದೇ, ಎಲ್ಲಾ ರೀತಿಯ ಸಿದ್ಧತೆಗಳನ್ನು ವಿರಾಜಪೇಟೆಯಲ್ಲಿಯೇ ಕೈಗೊಂಡಿರುವುದು ಸ್ಪಷ್ಟವಾಗಿದೆ. ಡಿ.31ರ ರಾತ್ರಿ ಕೊಡಗಿನಿಂದ ಹೊರಟ ಬಿಂದು ಮತ್ತು ಕನಕಾ ಕೇರಳಕ್ಕೆ ಪ್ರವೇಶಿಸಿದರು. ಅಲ್ಲಿಂದ ಖಾಸಗಿ ವಾಹನದಲ್ಲಿ, ಪೊಲೀಸ್‌ ಬೆಂಗಾವಲಿನಲ್ಲಿ ಜ.1ರಾತ್ರಿ 10.30ರ ವೇಳೆಗೆ ಪಂಬಾ ತಲುಪಿದರು. ಬಳಿಕ ಇಬ್ಬರನ್ನೂ ಅರಣ್ಯ ಇಲಾಖೆ ಆ್ಯಂಬುಲೆನ್ಸ್‌ನಲ್ಲಿ ಹತ್ತಿಸಿಕೊಳ್ಳಲಾಯಿತು. ಆ್ಯಂಬುಲೆನ್ಸ್‌ನಲ್ಲಿ ಆಕ್ಸಿಜನ್‌ ಸಿಲಿಂಡರ್‌ ಅಳವಡಿಸಿ, ಇಬ್ಬರೂ ಕೈಗೂ ಗ್ಲುಕೋಸ್‌ ಡ್ರಿಪ್‌ ಹಾಕಿ, ರೋಗಿಗಳೆಂಬಂತೆ ಬಿಂಬಿಸಿ ದೇಗುಲದ ಮಾರ್ಗದಲ್ಲಿ ಕರೆದೊಯ್ಯಲಾಯಿತು. ಈ ಮೂಲಕ, ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲಾಯಿತು.

Also read: ಯಶ್ ಮನೆಯಲ್ಲಿ ಐ.ಟಿ. ರೈಡ್ ಆದಾಗ ತಿಳಿದ ವಿಷಯ ಏನಂದ್ರೆ ಅವರ ಆಸ್ತಿಗಿಂತ ಸಾಲವೇ ಹೆಚ್ಚು, ಸಮಾಜ ಸೇವೆಗೆ ಸಾಲ ಮಾಡಿದ್ರ ಯಶ್??

ಶಬರಿಮಲೆ ಪ್ರವೇಶಿಸಿದ ಮತ್ತೊಂದು ಶ್ರೀಲಂಕಾ ಮಹಿಳೆ;

ಕೇರಳದ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿ ಸಾಕಷ್ಟು ವಿವಾದ ಸೃಷ್ಟಿಯಾದ ನಂತರ 46 ವರ್ಷ ವಯಸ್ಸಿನ ಶ್ರೀಲಂಕಾ ಮಹಿಳೆಯೊಬ್ಬರು ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿದ್ದಾರೆ. ಶ್ರೀಲಂಕಾ ಪಾಸ್ ಪೋರ್ಟ್ ಅನ್ನು ಹೊಂದಿದ್ದ ಶಶಿಕಲಾ ಎಂಬ ಮಹಿಳೆ, ಸಂಪ್ರದಾಯದಂತೆ ಶಬರಿಮಲೆ ದೇವಾಲಯದ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ಗರ್ಭಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಘಟನೆಯ ಸಿಸಿಟಿವಿ ಸೆರೆಯಾಗಿದ್ದು. ಮತ್ತೊಂದು ಮಹಿಳೆ ಪ್ರವೇಶಿಸಿದ್ದು ಸತ್ಯ ಎಂದು ಪೊಲೀಸರೇ ಖಚಿತಪಡಿಸಿದ್ದಾರೆ.