ರಾಜಕೀಯ ತಿರುವು ಪಡೆದ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರ; ಶಬರಿಮಲೆ ಉಳಸಿ ಘೋಷವಾಕ್ಯದಡಿ ಪಾದಯಾತ್ರೆ..!

0
378

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಕೇರಳದಲ್ಲಿ ‘ಶಬರಿಮಲೆ ಉಳಿಸಿ’ ಹೆಸರಿನಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ರಾಜ್ಯದ ಇಬ್ಬರು ಬಿಜೆಪಿ ಸಂಸದರು ಪಾಲ್ಗೊಳ್ಳಲಿದ್ದಾರೆ.

Also read: ನಾವು 2014ರ ಚುನಾವಣೆ ಗೆದಿದ್ದು ಸುಳ್ಳು ಭರವಸೇ ಕೊಟ್ಟೆ..!

‘ಸೇವ್ ಶಬರಿಮಲೆ’ ಹೆಸರಿನಲ್ಲಿ ಪಾಂಡಳಮ್‌ನಂದ ಶಬರಿಮಲೆವರೆಗೆ ಕೇರಳದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಪಾದಯಾತ್ರೆ ಹಮ್ಮಿಕೊಂಡಿವೆ. ಈ ಹೋರಾಟವನ್ನು ಬೆಂಬಲಿಸಿರುವ ಸಂಸದರಾದ ಬೆಂಗಳೂರು ಕೇಂದ್ರ ಕ್ಷೇತ್ರದ ಪಿ.ಸಿ.ಮೋಹನ್ ಹಾಗೂ ಮೈಸೂರಿನ ಪ್ರತಾಪ್ ಸಿಂಹ ಅಸಂಖ್ಯಾತ ಅಯ್ಯಪ್ಪ ಭಕ್ತರ ಜತೆ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ. ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆ ಕೂಡ ಪ್ರಜೆಗಳ ಹಕ್ಕು. ಇದು ಲಕ್ಷಾಂತರ ಭಕ್ತರ ಶ್ರದ್ಧೆಯ ಪ್ರಶ್ನೆಯಾಗಿದೆ. ಶಬರಿಮಲೆ ದೇಗುಲದ ಪ್ರಾಚೀನ ಪರಂಪರೆ ಮತ್ತು ಭಕ್ತರ ನಂಬಿಕೆಗಳ ಸಂರಕ್ಷಣೆ ಮತ್ತು ಜಾಗೃತಿಗಾಗಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದಾರೆ. ಅವರ ನಿಲುವುಗಳನ್ನು ಬೆಂಬಲಿಸಿ ತಾವೂ ಭಾಗವಹಿಸುತ್ತಿರುವುದಾಗಿ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ, ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಗುರುವಾರ ಕೇರಳ ದೇವಸ್ವಂ ಬೋರ್ಡ್‌ ಕಡಗಂಪಳ್ಳಿ ಸುರೇಂದ್ರನ್‌ ಮನೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರ ಮೇಲೆ, ಪೊಲೀಸರು ಜಲಫಿರಂಗಿ, ಆಶ್ರುವಾಯು ಪ್ರಯೋಗಿಸಿ ಗುಂಪು ಚದುರಿಸಲು ಮುಂದಾದರು. ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

Also read: ಕರ್ನಾಟಕ ಸರ್ಕಾರದ ಮೈತ್ರಿಯಲ್ಲಿ ಒಂದು ವಿಕೆಟ್ ಪತನ; ಮತೊಮ್ಮೆ ಶುರುವಾಯಿತೇ ಅಪರೇಷನ್ ಕಮಲ??

ಶಬರಿಮಲೆ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್‌  ಪಕ್ಷ, ರಾಜ್ಯದ ಎಲ್‌ಡಿಎಫ್‌ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗುತ್ತಿದೆ ಎಂದು ಪಕ್ಷದ ಹಿರಿಯ ನಾಯಕ ಎ.ವಿಜಯರಾಘವನ್‌  ಆರೋಪಿಸಿದ್ದಾರೆ. ಮುಖ್ಯಮಂತ್ರಿಗೆ ಅವಮಾನಿಸುವುದು, ದೇವಸ್ವಂ ಕಚೇರಿಗಳ ಮೇಲೆ ದಾಳಿ ನಡೆಸಿ ಸಮಸ್ಯೆ ಉಂಟುಮಾಡಲಾಗುತ್ತಿದೆ. ಕಳೆದ ತಿಂಗಳು ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ಬಳಿಕ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳಿಗೆ ತಡೆಒಡ್ಡಲಾಗುತ್ತಿದೆ ಎಂದು ದೂರಿದರು. ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ತಿರಸ್ಕರಿಸುವುದಿಲ್ಲ, ಈಗಿರುವ ತೀರ್ಪಿನಂತೆ ಜಾರಿಮಾಡಲಾಗುವುದು ಎಂದು ವಿಜಯರಾಘವನ್‌ ಸ್ಪಷ್ಟಪಡಿಸಿದರು. ಈ ನಡುವೆ, ವಿರೋಧ ಪಕ್ಷಗಳು ನಡೆಸುತ್ತಿರುವ ‘ಸುಳ್ಳು ಪ್ರಚಾರ’ದ ವಿರುದ್ಧ ಜನರಿಗೆ ಸರ್ಕಾರದ ನಿಲುವು ತಿಳಿಸಲು ರಾಜ್ಯದ 14 ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆ ನಡೆಸಲು ಆಡಳಿತರೂಢ ಎಲ್‌ಡಿಎಫ್‌ ನಿರ್ಧರಿಸಿದೆ. ಅಕ್ಟೋಬರ್‌ 16ರಂದು ಪತ್ತನಂತಿಟ್ಟ, ಅಕ್ಟೋಬರ್‌ 23 ಹಾಗೂ 24ರಂದು ಕೊಲ್ಲಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾಗವಹಿಸಲಿದ್ದಾರೆ’  ಎಂದು ಅವರು ತಿಳಿಸಿದರು.

Also read: ಇತ್ತೀಚಿನ ದಿನಗಳಲ್ಲಿ ಆತಂಕ ಹೆಚ್ಚಿಸಿದ ಆಕಾಶಯಾನ; ದುಬೈಗೆ ಹೋಗಬೇಕಿದ್ದ ವಿಮಾನ ಗೋಡೆಗೆ ಡಿಕ್ಕಿ ಹೊಡೆದು ತಿರುಗಿದ್ದು ಮುಂಬೈನತ್ತ!!

ಕಳೆದ ಕೆಲ ದಿನಗಳಿಂದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಮತ್ತು ಭಾರತ್‌ ಧರ್ಮ ಜನ ಸೇನಾ ಅಧ್ಯಕ್ಷ ತುಷಾರ್‌ ವೆಳ್ಳಪಳ್ಳಿ ಈ ರ‍್ಯಾಲಿಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಕೇರಳ ಸರ್ಕಾರ ಶಬರಿಮಲೆ ದೇವಾಲಯವನ್ನು ನಾಶಗೊಳಿಸಲು ಯತ್ನಿಸುತ್ತಿದೆ’ ಎಂದು ಶ್ರೀಧರನ್‌ ಪಿಳ್ಳೆ ಆರೋಪಿಸಿದ್ದಾರೆ. ನಾಯರ್‌ ಸೇವಾ ಸಂಸ್ಥೆಯ ನೇತೃತ್ವದಲ್ಲಿ ತಿರುವನಂತಪುರದಲ್ಲಿ ಬೃಹತ್‌ ರ‍್ಯಾಲಿ ನಡೆದಿದೆ. ಎರ್ನಾಕುಳಂ ಜಿಲ್ಲೆಯ ಆಲುವಾ ಮತ್ತು ಮೂವಾಟ್ಟುಪುಳದಲ್ಲಿ ಪ್ರತಿಭಟನಾಕಾರರರು ಮತ್ತು ಸಾರ್ವಜನಿಕರ ನಡುವೆ ಸಣ್ಣ ಪ್ರಮಾಣದಲ್ಲಿ ಘರ್ಷಣೆ ನಡೆದಿತ್ತು. ಪಟ್ಟನಂತಿಟ್ಟ ಜಿಲ್ಲೆಯ ಪಂದಳಂನಿಂದ ಎನ್‌ಡಿಎ ನೇತೃತ್ವದ ರ್‍ಯಾಲಿ ಬುಧವಾರ ಆರಂಭಗೊಂಡಿದ್ದು, ಅಕ್ಟೋಬರ್‌ 15ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ. ಇತ್ತ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ ತೆರವುಗೊಳಿಸಿರುವ ಸಂವಿಧಾನ ಪೀಠದ ಆದೇಶವನ್ನು ತುರ್ತಾಗಿ ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ತಳ್ಳಿ ಹಾಕಿದೆ. ಈ ಸಂಬಂಧ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಮಂಡಳಿ ಅಧ್ಯಕ್ಷೆ ಶೈಲಜಾ ವಿಜಯನ್ ಅವರು ಮೇಲ್ಮನವಿ ಸಲ್ಲಿಸಿ, ಸಂವಿಧಾನ ಪೀಠದ ಆದೇಶವನ್ನು ತುರ್ತಾಗಿ ಪರಾಮರ್ಶಿಸುವಂತೆ ಕೋರಿದ್ದರು. ಸುಪ್ರಿಂಕೋರ್ಟ್ ಸೆ.28ರಂದು ಐತಿಹಾಸಿಕ ತೀರ್ಪು ನೀಡಿ, ಪರ್ವತ ದೇಗಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶ ಮತ್ತು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು.