ವಿಜ್ಞಾನ ಉತ್ತರಿಸಲು ಸಾಧ್ಯವಾಗದ ಕೆಲವು ಅದ್ಭುತಗಳು ನಮ್ಮ ದೇಶದಲ್ಲಿ ಇವೆ ಗೊತ್ತಾ?

0
1947

ವಿಜ್ಞಾನ ಉತ್ತರಿಸಲು ಸಾಧ್ಯವಾಗದ ಕೆಲವು ಅದ್ಭುತಗಳು ನಮ್ಮ ಭೂಮಿಯ ಮೇಲೆ ಇವೆ. ಅವುಗಳ ಬಗ್ಗೆ ಸಾಕಷ್ಟು ತಿಳಿದುಕೊಂಡು ಅಧ್ಯಯನ ಮಾಡಿದರು ಸಹ, ಕೊನೆಗೆ ವಿಜ್ಞಾನಿಗಳಿಗೆ ಕಾಡುವುದು ಒಂದೇ ಪ್ರಶ್ನೆ “ಇದು ಹೇಗೆ ಸಾಧ್ಯ” ಎಂದು. ಇಂತಹ ಅದ್ಭುತಗಳಲ್ಲಿ ಕೆಲವು ಅದ್ಭುತಗಳು ನಮ್ಮ ದೇಶದಲ್ಲಿಯೇ ಇವೆ ಅವು ಯಾವುವು ಎಂದು ತಿಳಿದುಕೊಳ್ಳೋಣ.

ದೆಹಲಿಯ ಕಬ್ಬಿಣದ ಸ್ತಂಭ:

ಜನರಿಗೆ ತಂತ್ರಜ್ಞಾನ ಎಂದರೆ ಏನು ಎಂದು ಗೊತ್ತಿರದ ಕಾಲದಲ್ಲಿ ಗುಪ್ತ ಸಾಮ್ರಾಜ್ಯದ ಅರಸನಾದ ಕುಮಾರ ಗುಪ್ತನಿಂದ ನಿರ್ಮಿಸಲ್ಪಟ್ಟಿರುವ ದೆಹಲಿಯ ಕಬ್ಬಿಣದ ಕಂಬ ಇನ್ನು ತುಕ್ಕು ಹಿಡಿದಿಲ್ಲ. ಇದನ್ನು ಸ್ಥಾಪಿಸಿ ಸುಮಾರು 1600 ವರ್ಷಗಳೇ ಕಳೆದು ಹೋಗಿವೆ. ಇದು ಶೇ. 98 ರಷ್ಟು ಕಬ್ಬಿಣದಿಂದಲೇ ನಿರ್ಮಿಸಲ್ಪಟ್ಟಿದೆ, ಮಳೆ, ಗಾಳಿ ಮತ್ತು ಇತರೆ ಯಾವುದೇ ಪ್ರಕೃತಿ ಸಹಜ ಸ್ಥಿತಿಗೆ ಜಗ್ಗದೆ ಇನ್ನು ತನ್ನ ಹಿರಿಮೆಯನ್ನು ಸಾರುತ್ತಿದೆ ಈ ಕಂಬ.

ಆಂದ್ರಪ್ರದೇಶದ ಲೇಪಾಕ್ಷಿ:

ಆಂದ್ರಪ್ರದೇಶದ ಲೇಪಾಕ್ಷಿ ದೇವಾಲಯದಲ್ಲಿ ಕಲ್ಲಿನ ಕಂಬವೊಂದಿದೆ, ಅದು ನೆಲಕ್ಕೆ ಅಂಟಿಲ್ಲ, ಅಂದರೆ ನೀವು ಆ ಕಂಬದ ಕೆಳಗಿನಿಂದ ಒಂದು ಕರವಸ್ತ್ರವನ್ನು ಅಥವಾ ಹಾಳೆಯನ್ನು ಹಾಯಿಸಬಹುದಾಗಿದೆ. ವಿಜ್ಞಾನಿಗಳು ಇದು ಹೇಗೆ ಸಾಧ್ಯವಾಯಿತು ಅಷ್ಟು ಭಾರವಿರುವ ಕಲ್ಲಿನ ಕಂಬ ನೆಲಕ್ಕೆ ಅಂಟದೆ ಇರಲು ಹೇಗೆ ಸದ್ಯ ಎಂದು ಯೋಚಿಸುತ್ತಿದ್ದರೆ. ಪುರಾಣದ ಪ್ರಕಾರ, ಇದು ಶ್ರೀರಾಮನ ವರದಾನದಿಂದ ತೇಲುತ್ತದೆಯಂತೆ, ರಾವಣನ ಜೊತೆ ಯುದ್ಧವಾಡಿದ ಜಟಾಯು ಪಕ್ಷಿ ಗಾಯಗೊಂಡು ಇಲ್ಲಿ ಬಿದ್ದಾಗ ಶ್ರೀರಾಮಚಂದ್ರನು “ಲೇ” “ಪಕ್ಷಿ” ಎಂದಿದ್ದನಂತೆ, ತೆಲುಗು ಭಾಷೆಯಲ್ಲಿ ಲೇಪಾಕ್ಷಿ ಎಂದರೆ ಎದ್ದೇಳು ಪಕ್ಷಿ ಎಂದರ್ಥ.

ಹಿಮಾಚಲದ ಮಮ್ಮಿ:

ಹಿಮಾಚಲ್ ಪ್ರದೇಶದ ಸ್ಪಿಟಿ ಜಿಲ್ಲೆಯ, ಘೆವುನ್ ಎಂಬ ಗ್ರಾಮದಲ್ಲಿ 500 ವರ್ಶದಷ್ಟು ಹಳೆಯದಾದ ಟಿಬೆಟಿನ ಬೌಧಿ ಧರ್ಮದ ಬಿಕ್ಕುವಿನ ಅಥವಾ ಸನ್ಯಾಸಿಯ ಮಮ್ಮಿ ಇದೆ. ಇದರಲ್ಲಿನ ಹಲ್ಲುಗಳು ಇನ್ನು ಹಾಗೆ ಇವೆ ಮತ್ತು ಈ ಮುಮ್ಮಿಯನ್ನು ಕೇವಲ ಒಂದು ತೆಳುವಾದ ಗಾಜಿನಿಂದ ಕೂಡಿದ ಸಮಾಧಿಯಲ್ಲಿ ಸಂರಕ್ಷಿಸಲಾಗಿದೆ.

ಅನಂತಪದ್ಮನಾಭ ದೇವಾಲಯ:

ಕೇರಳದ ತಿರುವನಂತಪುರಮ್ ನಲ್ಲಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ನೆಲಮಹಡಿಯ 2 ಕೋಣೆಯನ್ನು ಶತಕಗಳು ಕಳೆದರು ಇನ್ನು ತೆರೆದಿಲ್ಲ. ಇದನ್ನು ಒಬ್ಬ ವಿಶೇಷ ದೈವೀ ಶಕ್ತಿ ಹೊಂದಿರುವ ಸಾಧುವಿನಿಂದ ಮಾತ್ರ ತೆರೆಯಬೇಕಂತೆ, ತಂತ್ರಜ್ಞಾನದ ಸಾಹಯದಿಂದ ಸಾಮಾನ್ಯ ಮನುಷ್ಯರು ತೆರೆದರೆ, ಮನುಕುಲಕ್ಕೆ ಕೆಡಕು ತಪ್ಪುವುದಿಲ್ಲವಂತೆ.

ಕುಲಾಧಾರದ ಪ್ರೇತ ಪೀಡಿತ ಗ್ರಾಮ:

ಈ ಗ್ರಾಮದಲ್ಲಿ ವಾಸವಿದ್ದ ಸುಮಾರು 1500 ಜನ ರಾತ್ರೋ-ರಾತ್ರಿ ಒಟ್ಟಿಗೆ ಹಳ್ಳಿ ಬಿಟ್ಟು ಹೊರತು ಹೋದರಂತೆ ಹೋಗುವಾಗ ಈ ಜಾಗಕ್ಕೆ ಶಾಪ ಹಾಕಿದರಂತೆ. ಅವರ ಪ್ರಕಾರ ಪ್ರೇತವಾದ ದುಷ್ಟ ಆಡಳಿತಗಾರ ಸಲಿಮ್ ಸಿಂಗ್ ನಿಂದ ತಮ್ಮ ಜೀವ ಉಳಿಸಿಕೊಳ್ಳಲು ಈ ರೀತಿ ಮಾಡಿದರಂತೆ. ಆಗಿನಿಂದ ಇಲ್ಲಿಯವರೆಗೆ ಇಲ್ಲಿ ಯಾರು ನೆಲೆಯೂರಿಲ್ಲ.