ಇಡೀ ದೇಶವೇ ಚೀನಾ ವಿರುದ್ಧ ಇರಬೇಕಾದರೆ ಐ.ಪಿ.ಎಲ್.ಗೆ ಮಾತ್ರ ಚೀನಾ ಕಂಪನಿ ವಿವೋ ಹೆಸರು ಯಾಕೆ? ಐ.ಪಿ.ಎಲ್.ನು ನಮ್ಮ ಜನ ಧಿಕ್ಕರಿಸುವರೇ?

0
133

ಬಿಸಿಸಿಐನ ಖಜಾಂಚಿ ಅರುಣ್‌ ಧುಮಾಲ್‌ ಈ ಬಗ್ಗೆ ಮಾತನಾಡಿದ್ದು, ‘ವಿವೋ’ ಸಂಸ್ಥೆ ಐಪಿಎಲ್‌ ಟೂರ್ನಿಯ ಮುಖ್ಯ ಪ್ರಾಯೋಜಕರಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ಸೀಸನ್ನಿಂದ ಪ್ರಾಯೋಜಕತ್ವ ನಿಯಮವನ್ನು ಮರು ವಿಮರ್ಶಿಸುವ ಬಗ್ಗೆ ಬಿಸಿಸಿಐ ಹೇಳಿದೆ. ಆದರೆ ಚೀನಾ ಮೊಬೈಲ್ ಕಂಪನಿ ವಿವೋದೊಂದಿಗಿನ ಐಪಿಎಲ್ ಟೈಟಲ್ ಸ್ಪಾನ್ಸರ್ ಕೊನೆಗೊಳಿಸುವ ಬಗ್ಗೆ ಯಾವುದೇ ಯೋಜನೆಯಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತ-ಚೀನಾ ಗಡಿ ವಿವಾದ ತೀವ್ರಗೊಂಡಿದ್ದರೂ ಚೀನಾ ಪ್ರಾಯೋಜಕತ್ವವನ್ನು ಕೊನೆಗೊಳಿಸಲು ಯಾಕೆ ಸಾಧ್ಯವಿಲ್ಲ ಎಂಬುದಕ್ಕೆ ಧುಮಾಲ್ ಪ್ರಮುಖ ಮತ್ತು ಅರ್ಥಪೂರ್ಣ ಕಾರಣಗಳನ್ನು ಕೊಟ್ಟಿದ್ದಾರೆ. ಚೀನಾ ಕಂಪನಿಯೊಂದಿಗಿನ ಪ್ರಾಯೋಜಕತ್ವದ ಬಗ್ಗೆ ಮಾತನಾಡಿರುವ ಅರುಣ್ ಧುಮಾಲ್, ಐಪಿಎಲ್ಗೆ ಚೀನಾ ಕಂಪನಿ ನೀಡುತ್ತಿರುವ ಪ್ರಾಯೋಜಕತ್ವ ಭಾರತದ ಆರ್ಥಿಕತೆಗೆ ನೆರವು ನೀಡುತ್ತಿದೆ. ಭಾವನಾತ್ಮಕವಾಗಿ ನಾವು ಏನಾದರೊಂದು ಹೇಳೋದು ಸುಲಭ. ಆದರೆ ಅದರ ಪಾಲನೆ ಅಷ್ಟು ಸುಲಭವಾಗಿಲ್ಲ ಎಂದು ಧುಮಾಲ್ ಹೇಳಿದ್ದಾರೆ. ನೀವು ಭಾವನಾತ್ಮಕವಾಗಿ ಮಾತನಾಡುವಾಗ, ನೀವು ತಾರ್ಕಿಕತೆಯನ್ನು ಬಿಟ್ಟುಬಿಡುತ್ತೀರಿ. ಚೀನಾದ ಕಾರಣಕ್ಕಾಗಿ ಚೀನೀ ಕಂಪನಿಯನ್ನು ಬೆಂಬಲಿಸುವುದು ಅಥವಾ ಭಾರತದ ಕಾರಣವನ್ನು ಬೆಂಬಲಿಸಲು ಚೀನೀ ಕಂಪನಿಯಿಂದ ಸಹಾಯ ಪಡೆಯುವುದು ನಡುವಿನ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು, ಎಂದು ಪಿಟಿಐ ಜೊತೆಗೆ ಮಾತನಾಡುತ್ತ ಧುಮಾಲ್ ಹೇಳಿದ್ದಾರೆ.

ಬಿಸಿಸಿಐ ಸದ್ಯ ವಿವೋದಿಂದ ವಾರ್ಷಿಕವಾಗಿ 440 ಕೋ.ರೂ. ಗಳಿಸುತ್ತಿದೆ. ಈ ಗಳಿಕೆಯಿಂದಲೇ ಭಾರತದಲ್ಲಿ ಸರ್ಕಾರದ ದುಬಾರಿ ತೆರಿಗೆ ಪಾವತಿಸಿ ಐಪಿಎಲ್ನಂತ ಕ್ರೀಡಾಕೂಟಗಳನ್ನು ಆಯೋಜಿಸಲು ಸಾಧ್ಯವಾಗುತ್ತಿದೆ ಎಂದು ಧುಮಾಲ್ ಹೇಳಿದ್ದಾರೆ. ಬಿಸಿಸಿಐ ಮತ್ತು ವಿವೊದೊಂದಿಗಿನ ಐದು ವರ್ಷಗಳ ಈ ಒಪ್ಪಂದ 2022ಕ್ಕೆ ಕೊನೆಗೊಳ್ಳಲಿದೆ.
ಭಾರತದ ಒಳಿತಿಗೆ ಚೀನಾ ಬೆಂಬಲಿಸಬೇಕು ‘ಚೀನಾದ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ನಾವು ಅನುಮತಿಸುವಾಗ, ಅವರು ಭಾರತೀಯ ಗ್ರಾಹಕರಿಂದ ಯಾವುದೇ ಹಣವನ್ನು ತೆಗೆದುಕೊಳ್ಳುತ್ತಾರೋ, ಅವರು ಅದರ ಒಂದು ಭಾಗವನ್ನು ಬಿಸಿಸಿಐಗೆ (ಬ್ರಾಂಡ್ ಪ್ರಚಾರವಾಗಿ) ಪಾವತಿಸುತ್ತಿದ್ದಾರೆ. ಬೋರ್ಡ್ ಆ ಹಣದ ಮೇಲೆ ಶೇಕಡಾ 42ರಷ್ಟು ತೆರಿಗೆಯನ್ನು ಭಾರತೀಯ ಸರ್ಕಾರಕ್ಕೆ ಪಾವತಿಸುತ್ತಿದೆ. ಹೀಗಾಗಿ ನಾವಿಲ್ಲಿ ಭಾರತದ ಕಾರಣಕ್ಕೆ ಚೀನಾ ಬೆಂಬಲಿಸಬೇಕಾಗುತ್ತದೆ, ಚೀನಾಕ್ಕೋಸ್ಕರ ಅಲ್ಲ,’ ಎಂದು ಅರುಣ್ ವಾಸ್ತವ ವಿವರಿಸಿದರು.

ಅಂದಹಾಗೆ 13ನೇ ಆವೃತ್ತಿಯ ಐಪಿಎಲ್ 2020 ಟೂರ್ನಿಯು ಮಾರ್ಚ್‌ 29ರಿಂದ ಮೇ24ರವರೆಗೆ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಬಿಸಿಸಿಐ ಮುಂದೂಡಿದೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್‌-ಅಕ್ಟೋಬರ್‌ ಅವಧಿಯಲ್ಲಿ ಟೂರ್ನಿ ಆಯೋಜಿಸಲು ಎದುರು ನೋಡುತ್ತಿದೆ.