ಕೋಕಕೋಲಾ, ನೂಡಲ್ಸ್ ಚಟಕ್ಕೆ ಬಿದ್ದ 10 ವರ್ಷದ ಬಾಲಕನ ಸ್ಥಿತಿ ನೋಡಿ! ಇದನ್ನು ತಪ್ಪದೆ ಓದಿ.!!

0
769
ಕೋಕಕೋಲಾ, ನೂಡಲ್ಸ್ ಚಟಕ್ಕೆ ಬಿದ್ದ 10 ವರ್ಷದ ಬಾಲಕನ ಸ್ಥಿತಿ ನೋಡಿ!

ಜಂಕ್‍ಫುಡ್‍ ಅಪಾಯಕಾರಿ ಮತ್ತು ಅಡ್ಡ ಪರಿಣಾಮಗಳ ಬಗ್ಗೆ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಆದರೆ ಅದರ ಪರಿಣಾಮ ಎಷ್ಟು ಎಂಬ ಅರಿವು ಯಾರಿಗೂ ಇಲ್ಲ. ಜಂಕ್‍ಫುಡ್‍ ಗಳಿಂದಾಗಿ ಭಾರತ ಮಾತ್ರವಲ್ಲ ಇಡೀ ಜಗತ್ತೇ ತತ್ತರಿಸುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಲಭಿಸಿದ್ದು, ಕೋಕಕೋಲಾ ಮತ್ತು ನೂಡಲ್ಸ್ ಚಟಕ್ಕೆ ಬಿದ್ದ 10 ವರ್ಷದ ಬಾಲಕನ ತೂಕ 190 ಕೆಜಿ ದಾಟಿದ್ದು, ಈತನ ವೀಡಿಯೋ ಈಗ ವೈರಲ್‍ ಆಗಿದ್ದು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅತ್ಯಂತ ಪ್ರಭಾವಿಯಾಗಿದೆ.

ಇಂಡೋನೇಷ್ಯಾದ 10 ವರ್ಷದ ಈ ಬಾಲಕನ ಹೆಸರು ಐರಾ. ಈತನಿಗೆ ಪ್ರತಿನಿತ್ಯ ಕೋಕಕೋಲಾ ಮತ್ತು ನೂಡಲ್ಸ್ ಬೇಕೇ ಬೇಕು. ಪ್ರತಿನಿತ್ಯ 5 ಕೆಜಿ ಅನ್ನ, ಮಾಂಸ ತಿನ್ನುತ್ತಿದ್ದರೂ ಹೊಟ್ಟೆ ಹಸಿವು ಎನ್ನುತ್ತಾನೆ ಎಂದು ಐರಾ ಹೆತ್ತವರು ಹೇಳಿದ್ದಾರೆ.ಐರಾ ಪರಿಸ್ಥಿತಿ ನೋಡಿ ಸ್ವತಃ ವೈದ್ಯರೇ ಆತಂಕಗೊಂಡಿದ್ದಾರೆ. ವಿಷಯ ಗೊತ್ತಾಗಿನಿಂದ ಆಹಾರ ಪದ್ಧತಿ ಬದಲಿಸಿದ್ದಾರೆ. ಮಿತ ಆಹಾರ ಸೇವನೆಗೆ ಸೂಚಿಸಿದ್ದಾರೆ. ಆದರೂ ತೂಕ ಇಳಿಯಲಿಲ್ಲ. ಕೊನೆಯ ಮಾರ್ಗವಾಗಿ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಬೊಜ್ಜು ತೆಗೆಯುವ ಮೂಲಕ 16 ಕೆಜಿ ತೂಕ ಇಳಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಮತ್ತೆ 2 ಕೆಜಿ ಇಳಿಸಿದ್ದಾರೆ.

190 ಕೆಜಿ ತೂಕದಿಂದಾಗಿ ಬಾಲಕ ನಿಲ್ಲಲೂ ಆಗುತ್ತಿಲ್ಲ. ಶಾಲೆಗೆ ಹೋಗುವವರೆಗೂ ನೀರಿನ ಟಬ್‍ನಲ್ಲೇ ಇರುತ್ತಾನೆ. ಈ ವಯಸ್ಸಿನ ಮಕ್ಕಳ ಬಟ್ಟೆಯೂ ಸಿಗುತ್ತಿಲ್ಲ. ವೈದ್ಯರು ಪ್ರತಿನಿತ್ಯ ಈತನ ಆರೋಗ್ಯದ ಮೇಲೆ ಗಮನ ಹರಿಸುತ್ತಿದ್ದು, ಇನ್ನೊಂದು ವರ್ಷದಲ್ಲಿ 100 ಕೆಜಿ ಇಳಿಯಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.