ಮಿಝೋರಾಂನಲ್ಲೊಂದು ಸುಖೀ ಅವಿಭಕ್ತ ಕುಟುಂಬ..!

0
1760

ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ಇತ್ತೀಚಿಗೆ ಏಕ ಪೋಷಕ (ವಿಭಕ್ತ ಕುಟುಂಬ) ಕುಟುಂಬವೊಂದು ನಿರ್ಮಾಣವಾಗಿದೆ. ಇದಕ್ಕೆ ಮೂಲ ಕಾರಣ ವಿದೇಶಿ ಸಂಸ್ಕೃತಿಯ ಪ್ರಭಾವ, ಹೆಚ್ಚುತ್ತಿರುವ ವಿವಾಹ ವಿಚ್ಛೇದನ. ಆದರೆ ಈಶಾನ್ಯ ಭಾರತದ ಮಿಝೋರಾಂನ ಒಂದು ಕುಗ್ರಾಮ ಬಕ್ಟಾಂಗ್‌ನಲ್ಲಿ ವಿಶ್ವದ ದೊಡ್ಡ ಕುಟುಂಬ ಒಂದಿದೆ. ಸದ್ಯ ಇದು ಭಾರತದ ಅತಿದೊಡ್ಡ ಕುಟುಂಬ.

ಇದರ ಮುಖ್ಯಸ್ಥ 67 ವರ್ಷದ ಜಿಯೋಂಘಕ ಚನ. ಇವರಿಗೆ ಬರೋಬ್ಬರಿ 39 ಮಂದಿ ಪತ್ನಿಯರಿದ್ದಾರೆ. 94 ಮಕ್ಕಳು, 33 ಮೊಮ್ಮಕ್ಕಳು, 14 ಸೊಸೆಯಂದಿರು. 180 ಕ್ಕೂ ಹೆಚ್ಚು ಮಂದಿ ಅಲ್ಲಿ ವಾಸಿಸುತ್ತಿದ್ದಾರೆ ಇಷ್ಟಿದ್ದರೂ ಇವರದ್ದು ಸುಖೀ ಕುಟುಂಬ. ಇದು ಕೇಳುಗರಿಗೆ ವಿಚಿತ್ರ ವಿಚಿತ್ರವಾದರೂ ಇದು ಸತ್ಯ. ಇವರಿಗೆ ಇವರೇ ಸಾಟಿ ಅನ್ನುವಹಾಗೆ ಜೀವನವನ್ನು ಸಾಗಿಸುತ್ತಿದ್ದಾರೆ. ಈ ವಿಡಿಯೋ ನೋಡಿ

ಇವರ ಮನೆ ಇರುವುದು ನಾಲ್ಕು ಅಂತಸ್ತಿನಲ್ಲಿ, 100 ಕೋಣೆಗಳಿದ್ದು ಅಡುಗೆ ಕೋಣೆ ಒಂದೇ ಇದೆ. ದಿನನಿತ್ಯ ಇಲ್ಲಿ ಎಲ್ಲ ಜನರಿಗೆ ಸೇರಿ ಸುಮಾರು 91 ಕೆ.ಜಿ. ಅಕ್ಕಿ ಹಾಗೂ 59 ಕೆ.ಜಿ ಆಲೂಗಡ್ಡೆ ಬೇಯಿಸಲಾಗುತ್ತದೆ. ಈ ಕುಟುಂಬಕ್ಕೆ ಒಮ್ಮೆ ಮಾಂಸಾಹಾರದ ಅಡುಗೆ ತಯಾರಿಸಲು ಬರೋಬ್ಬರಿ 30 ಕೆ ಜಿ ತೂಕದ ಕೋಳಿಗಳು ಬೇಕೇಬೇಕು. ಪತ್ನಿಯಂದಿರೆಲ್ಲ ಸರದಿ ಆಧಾರದ ಮೇಲೆ ಇಲ್ಲಿ ಅಡುಗೆ ತಯಾರಿಸುವುದನ್ನು ರೂಢಿಸಿಕೊಂಡಿದ್ದಾರೆ. ಮಕ್ಕಳು ಮನೆಯ ಇತರ ಕೆಲಸ ಮಾಡುತ್ತಾರೆ. ಈ ಮನೆಯಲ್ಲಿರುವ ಬೃಹತ್‌ ಕೋಣೆಯಲ್ಲಿ ಎಲ್ಲ ಪತ್ನಿಯಂದಿರು ಒಟ್ಟಿಗೇ ಮಲಗಿದರೆ, ಸರದಿ ಮೇಲೆ ಪತಿಯ ಬಳಿ ಮಲಗಿಕೊಳ್ಳಲು ಅವಕಾಶವಿದೆಯಂತೆ .

article-1358654-0d434692000005dc-733_964x557

ಇಂದಿನ ಕಾಲದಲ್ಲಿ ಒಬ್ಬ ಹೆಂಡತಿಯನ್ನೇ ಸುಧಾರಿಸಲು ಸಾಧ್ಯವಾಗದ ಸ್ಥಿತಿ ಇರುವಾಗ ಈತ 39 ಮಂದಿ ಪತ್ನಿಯರನ್ನು ಅದು ಹೇಗೆ ನಿಭಾಯಿಸುತ್ತಿದ್ದಾನೆಯೋ ಆ ದೇವರೇ ಬಲ್ಲ..!