ಶಿಯೋಮಿ ಮೊಬೈಲ್ ತೆಗೆದುಕೊಳ್ಳಲು ಆನ್ಲೈನ್-ನಲ್ಲಿ ಸಾಧ್ಯವಾಗುತ್ತಿಲ್ವಾ? ಇಲ್ಲಿ ಬಂದಿದೆ ದೇಶದ ಮೊದಲ ಶಿಯೋಮಿ ಮೊಬೈಲ್ ATM!!!

0
305

ಮೊಬೈಲ್ ಬಂದಾಗಿನಿಂದ ದಿನದಿನಕ್ಕೂ ಹೊಸದೊಂದು ಪ್ರಯೋಗಳು ನಡೆಯುತ್ತಾನೆ ಇವೆ. ಮೊದಲು ಗ್ರಾಹಕರು ಖುದ್ದಾಗಿ ಮಳಿಗೆಗಳಿಗೆ ಬೇಟಿ ನೀಡಿ ಮೊಬೈಲ್ ಖರೀಧಿ ಮಾಡಬೇಕಿತ್ತು ನಂತರ ಶುರುವಾದ ಸ್ಮಾರ್ಟ್ ಹಾಳಲಿ ಆನ್ಲೈನ್ ನಲ್ಲಿ ಮಾರಟಕ್ಕೆ ಲಗ್ಗೆ ಇಟ್ಟು ಏಟಿಎಂ ಮಾದರಿಯಲ್ಲಿ ಗ್ರಾಹಕರ ಕೈ ಸೇರಲು ತಯಾರಾಗಿವೆ. ಈ ಮಾದರಿಯನ್ನು ದೇಶದಲ್ಲೆ ಮೊದಲು ಬೆಂಗಳೂರಿನಲ್ಲಿ ತೆರೆಯಲಾಗಿದ್ದು. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಸಿ ಎಟಿಎಂಗಳಲ್ಲಿ ಹಣ ತೆಗೆಯಿವ ರೀತಿಯಲ್ಲಿ ಕ್ಸಿಯೋಮಿ ಸ್ಮಾರ್ಟ್‌ಫೋನ್‌ ಹಾಗೂ ಮೊಬೈಲ್‌ ಬಿಡಿಭಾಗಗಳನ್ನು ವೆಂಡಿಂಗ್ ಮೆಶಿನ್ ಮೂಲಕ ಖರೀದಿಸಬಹುದಾಗಿದೆ.

Also read: ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನುವ ಜನರಿಗೆ ಬಿಗ್ ಶಾಕಿಂಗ್ ನ್ಯೂಸ್; ಕತ್ತಲಲ್ಲಿ 30 ನಿಮಿಷ ಮೊಬೈಲ್ ನೋಡಿದ್ರೆ ಏನ್ ಆಗುತ್ತೆ ಗೊತ್ತ??

ಏನಿದು ವೆಂಡಿಂಗ್ ಮೆಶಿನ್?

ವೆಂಡಿಂಗ್ ಮೆಶಿನ್ ಮೂಲಕ ಎಂಐ ಎಕ್ಸ್‌ಪ್ರೆಸ್ ಕಿಯೋಸ್ಕ್ ಮೂಲಕ ದೇಶಾದ್ಯಂತ ಸ್ವಯಂಚಾಲಿತ ಯಂತ್ರದ ನೆರವಿನಿಂದ ಮೊಬೈಲ್ ಮಾರಾಟ ಮಾಡಲಿದೆ. ಶಿಯೋಮಿ ಮೆಶಿನ್, ಡೆಬಿಟ್, ಕ್ರೆಡಿಟ್ ಕಾರ್ಡ್, ನಗದು ಮತ್ತು ಯುಪಿಐ ಪಾವತಿ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಗ್ರಾಹಕರು ಬಯಸುವ ಮೊಬೈಲ್ ಖರೀದಿಗೆ ನೆರವಾಗಲಿದೆ. ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಶಿಯೋಮಿ ಮೊದಲ ವೆಂಡಿಂಗ್ ಮೆಶಿನ್ ಸ್ಥಾಪಿಸಿದ್ದು, ದೇಶದ ಇತರೆಡೆಗಳಲ್ಲೂ ಶೀಘ್ರದಲ್ಲೇ ಸ್ಥಾಪನೆಯಾಗಲಿದೆ.

ಮೊಬೈಲ್‌ ಖರೀದಿ ಹೇಗೆ?

Also read: ಬೆಂಗಳೂರಿನ ಈ ಮಾರುಕಟ್ಟೆಯಲ್ಲಿ ಕದ್ದ ಮೊಬೈಲ್-ಗಳ ವ್ಯಾಪಾರ ಜೋರ್ ಅಂತೆ; ಇಲ್ಲಿ ಸಿಗುವ ಮೊಬೈಲ್ ಖರೀದಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ.

‘ಎಂಐ ಎಕ್ಸ್‌ಪ್ರೆಸ್‌ ಕಿಯೋಸ್ಕ್‌’ ಎಂಬ ವಿತರಣಾ ಯಂತ್ರಗಳಲ್ಲಿ ಗ್ರಾಹಕರು ತಮಗೆ ಬೇಕಾದ ಮೊಬೈಲ್‌ಗಳನ್ನು ಖರೀದಿಸಬಹುದಾಗಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಡೆಬಿಟ್‌, ಕ್ರೆಡಿಟ್‌, ನಗದು ಹಾಗೂ ಯುಪಿಐ ಕೋಡ್‌ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಳಿಸಲಾದ ಈ ಯಂತ್ರ 200 ಮೊಬೈಲ್‌ಗಳನ್ನು ತನ್ನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಗತ್ಯಬಿದ್ದಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಕಿಯೋಸ್ಕ್‌ಗಳ ನಿರ್ವಹಣೆಗೆ ಜನರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಕಂಪನಿ ಹೇಳಿದೆ.

ಈ ಸೌಲಭ್ಯ ಬೆಂಗಳೂರಿನಲ್ಲಿ ಮಾತ್ರ?

ದೇಶದಲ್ಲೇ ಮೊದಲ ಬಾರಿಗೆ ಬೆಂಗಳುರಿನಲ್ಲಿ ಸ್ಥಾಪಿಸಿದ್ದು ಮುಂದಿನ ಕೆಲವು ತಿಂಗಳುಗಳಲ್ಲೇ ಭಾರತದ ಮೆಟ್ರೋ ನಗರಗಳಲ್ಲಿ ‘ಮಿ ಎಕ್ಸ್ಪ್ರೆಸ್ ಕಿಯೋಸ್ಕ್’ ಎಟಿಎಂ ಮಷಿನ್ ಅನ್ನು ಸ್ಥಾಪಿಸಲು ಶೀಯೋಮಿ ಕಂಪನಿ ಮುಂದಾಗಿದೆ. ಮೆಟ್ರೋ ನಗರಗಳ ಏರ್‌ಪೋರ್ಟ್‌, ಮೆಟ್ರೋ ನಿಲ್ದಾಣ, ಶಾಪಿಂಗ್‌ ಮಾಲ್‌ ಸೇರಿದಂತೆ ಇನ್ನಿತರ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್‌ ವಿತರಣಾ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಇದರ ಆರಂಭವಾಗಿ ಬೆಂಗಳೂರಿನಲ್ಲಿ ದೇಶದ ಮೊದಲ ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಂಡ ವೆಂಡಿಂಗ್ ಮೆಶಿನ್ ಸ್ಥಾಪಿಸಿದೆ.

ಈ ಮಶಿನ್ ಸ್ಥಾಪಿಸಿದ ಉದ್ದೇಶವೇನು?

2014ರಿಂದ ಭಾರತದಲ್ಲಿ ಆನ್‌ಲೈನ್‌ ಮೂಲಕ ಕ್ಸಿಯೋಮಿ ತನ್ನ ವಹಿವಾಟು ಆರಂಭಿಸಿತು. ಆದರೆ, ಭಾರತದಲ್ಲಿ ಮಾರಾಟವಾದ ಒಟ್ಟಾರೆ ಕ್ಸಿಯೋಮಿ ಮೊಬೈಲ್‌ಗಳ ಪೈಕಿ ಶೇ.50ರಷ್ಟುಮೊಬೈಲ್‌ಗಳು ರಿಟೇಲರ್‌ ಅಂಗಡಿಗಳಲ್ಲೇ ಮಾರಾಟವಾಗುತ್ತಿವೆ. ಇದೇ ಕಾರಣಕ್ಕಾಗಿಯೇ, ಭಾರತದಲ್ಲಿ ಎಂಐ ಎಕ್ಸ್‌ಪ್ರೆಸ್‌ ಕಿಯೋಸ್ಕ್‌ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ಅಗತ್ಯವಾಯಿತು. ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರ ಸೆಳೆಯುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಆನ್‌ಲೈನಿನಲ್ಲಿ ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ನೀಡುವಂತೆ ಇಲ್ಲೂ ಕ್ಯಾಶ್‌ಬ್ಯಾಕ್ ನೀಡಲು ಶಿಯೋಮಿ ಪ್ಲಾನ್ ಮಾಡಿದೆ ಎಂದು ಕಂಪನಿ ಹೇಳಿದೆ.