ಸಿಬಿಐ ವಿಶೇಷ ನ್ಯಾಯಾಲಯದಿಂದ ಬಿಎಸ್ವೈಗೆ ಕ್ಲೀನ್ ಚಿಟ್

0
655

ಬೆಂಗಳೂರು: ೪೦ ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಪ್ರಕರಣಕ್ಕೆ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದ ನಡೆಸಿದ ತನಿಖೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಿಗ್ ರಿಲೀಫ್ ಸಿಕ್ಕಿದೆ.

ಇವರ ವಿರುದ್ಧ ಇರುವ ಎಲ್ಲಾ ಆರೋಪಗಳಿಂದ ಇವರು ಮುಕ್ತವಾಗಿದ್ದು, ಬಿಎಸ್ವೈ ಸೇರಿದಂತೆ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ.

ಯಡಿಯೂರಪ್ಪ ಕಿಕ್ ಬ್ಯಾಕ್ ಪ್ರಕರಣ:ಪ್ರೇರಣಾ ಟ್ರಸ್ಟ್ ಗೆ 20 ಕೋಟಿ ಕಿಕ್ ಬ್ಯಾಕ್ ಪಡೆದ ಆರೋಪ. ಸಿಬಿಐ ವಿಶೇಷ ಕೋರ್ಟ್  ನ್ಯಾಯಾಧೀಶ ಆರ್.ಬಿ.ಧರ್ಮೇಗೌಡರ್ ಮುಂದೆ ಐದು ಪ್ರಕರಣಗಳು ವಿಚಾರಣೆ ನಡೆದಿದ್ದು ಈ ಎಲ್ಲಾ ಆರೋಪಗಳಿಂದ ಯಡಿಯೂರಪ್ಪ ಬಿಗ್ ರಿಲೀಫ್ ಸಿಕ್ಕಿದೆ.

ಈ ಆರೋಪದಲ್ಲಿ ಎ೧ ಆರೋಪಿ ಬಿಎಸ್ವೈ ಆಗಿದ್ದರು. ಎರಡನೇ ಪುತ್ರ ವಿಜಯೇಂದ್ರ ಎರಡನೇ, ಹಿರಿಯ ಪುತ್ರ ಹಾಗೂ ಶಾಸಕ ಬಿ.ವೈ. ರಾಘವೇಂದ್ರ ಮೂರನೇ, ಅಳಿಯಸೋಹನ್ ಕುಮಾರ್ ನಾಲ್ಕನೇ, ಪ್ರೇರಣಾ ಎಜ್ಯುಕೇಷನ್ ಅಂಡ್ ಸೋಶಿಯಲ್ ಟ್ರಸ್ಟ್ ಐದನೇ, ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಆರನೇ, ಸೌತ್ವೆಸ್ಟ್ ಮೈನಿಂಗ್ ಲಿಮಿಟೆಡ್, ಜೆಎಸ್ಡಬ್ಲ್ಯು ಸ್ಟೀಲ್ ಲಿಮಿಟೆಡ್, ಜೆಎಸ್ಡಬ್ಲ್ಯುನ ವಿನೋದ್ ನೋವೆಲ್, ಉಪಾಧ್ಯಕ್ಷ ವಿಕಾಸ್ ಶರ್ಮ, ರಿಯಲ್ ಟೆಕ್ನಿಕಲ್ ಸಲ್ಯೂಷನ್ ಲಿಮಿಟೆಡ್, ಜೈಭಾರತ್ ಟೆಕ್ನಿಕಲ್ ಸರ್ವಿಸ್ ಪ್ರೈ.ಲಿ., ಇಂಡಸ್ಟ್ರಿಯಲ್ ಸಪ್ಲೈ ಸರ್ವಿಸ್ ಪ್ರೈ.ಲಿ.,ಗಳನ್ನು ಚಾರ್ಜಶೀಟ್ ಸಿಬಿಐ ಆರೋಪಿಗಳನ್ನಾಗಿ ಗುರುತಿಸಿತ್ತು. ಇದೀಗ ಇವರೆಲ್ಲಾ ನಿರಾಳರಾಗಿದ್ದಾರೆ.

೨೦೧೨ರಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತನಿಖೆ ನಡೆಸಿ ಐಪಿಸಿ ಸೆಕ್ಷನ್ ೧೨೦ ರ ಅಡಿ ವಂಚನೆ, ೧೨೦ ಬಿ ಅಡಿ ಒಳಸಂಚು, ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ ೭,೧೧,೧೩/೧ಬಿ ಹಾಗೂ ೧೩/೨ ಅಡಿ ಚಾಜ್ಶೀಟ್ ದಾಖಲಿಸಲಾಗಿತ್ತು.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಇಂದು  ನ್ಯಾ. ಆರ್.ಬಿ. ಧರ್ಮಗೌಡರ್  ಸೂಕ್ತ ಸಾಕ್ಷ್ಯಾದಾರ ಕೊರತೆಯಿಂದಾಗಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲರನ್ನೂ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದರು.

ವಕೀಲ ಸಿ.ವಿ. ನಾಗೇಶ್ ಅವರು ಬಿಎಸ್ವೈ ಪರ ವಾದ ಮಂಡಿಸಿದ್ದರು