ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಗೆ ಯಶ್ ಏನ್ ಅಂದ್ರು ಗೊತ್ತ?

0
444

ಕೆಜಿಎಫ್ ಹವಾದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರವಿ ಎಂಬ ಅಭಿಮಾನಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ಮೊದಲು ಬರ್ತ್ ಡೇ ಆಚರಿಸಿಕೊಳ್ಳುವುದಿಲ್ಲ ಎಂದು ಯಶ್ ತಿಳಿಸಿದರು. ಆದರು ಹಲವು ಅಭಿಮಾನಿಗಳು ಮನೆಯ ಮುಂದೆ ಹೋಗಿ ಜೈ ಕಾರ ಹಾಕಿದ್ದಾರೆ, ಅಷ್ಟಾದರೂ ಯಶ್ ಬರಲಿಲ್ಲ ಎಂದು ಬೇಸರದಿಂದ ಈ ಯುವಕ ಆತ್ಮಹತ್ಯೆ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಇದಕ್ಕೆ ಸರಿಯಾದ ಕಾರಣ ಹುಟ್ಟು ಹಬ್ಬದ ಶುಭಾಶಯ ಕೋರಲು ಸಾಧ್ಯವಾಗದೆ ನೊಂದು ಪೆಟ್ರೋಲ್ ಸುರಿದುಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದ ರವಿ ಮಧ್ಯರಾತ್ರಿ 1.30ರ ಸಮಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Also read: ಯಶ್ ಮನೆಯಲ್ಲಿ ಐ.ಟಿ. ರೈಡ್ ಆದಾಗ ತಿಳಿದ ವಿಷಯ ಏನಂದ್ರೆ ಅವರ ಆಸ್ತಿಗಿಂತ ಸಾಲವೇ ಹೆಚ್ಚು, ಸಮಾಜ ಸೇವೆಗೆ ಸಾಲ ಮಾಡಿದ್ರ ಯಶ್??

ಈ ಅಭಿಮಾನಕ್ಕೆ ಯಶ್ ಅವರು ಹೇಳಿದ್ದು ಹೀಗೆ;

ಇದಕ್ಕೆ ಅಭಿಮಾನ ಅಂತ ಯಾರು ಹೇಳೋದಿಲ್ಲ, ಈ ವಿಷಯಕ್ಕೆ ನಾನ್ ಏನ್ ಹೇಳುವುದ್ದಕ್ಕೂ ಇಷ್ಟ ಪಡೋದಿಲ್ಲ, ಇಂತಹ ಅಭಿಮಾನದಿಂದ ನಾನ್ ಅಲ್ಲ ಯಾವ ನಟರು ಸಂತೋಷ ಪಡೋದಿಲ್ಲ, ಸಾವಿನ ಸ್ಥಿತಿಯಲ್ಲಿವೂ ವಿಶ್ ಮಾಡೋಕೆ ಬರುತ್ತಾನೆ. ಇದು ಅಭಿಮಾನ ಅಲ್ಲ ಯಾರ್ ಬೇಕಾದರೂ ನನ್ನ ಮನಸು ಕಲ್ಲು ಅನ್ಕೊಂದ್ರು ಪರವಾಗಿಲ್ಲ ಇಂತಹ ಅಭಿಮಾನ ಮನುಷ್ಯತ್ವ ಇರುವ ಯಾರಿಗೂ ಇಷ್ಟವಾಗೋದಿಲ್ಲ, ಈ ರೀತಿಯ ಅಭಿಮಾನ ತೋರಿಸುವವರು ನನಗೆ ಅಭಿಮಾನಿಗಳು ಅಲ್ಲ. ಏಕೆಂದರೆ ಅಷ್ಟು ದೊಡ್ಡ ಮಗನನ್ನು ಕಳೆದುಕೊಂಡ ತಂದೆ ತಾಯಿಗಳಿಗೆ ಏನ್ ಅಂತ ನಾನ್ ಹೇಳ್ಬೇಕು? ಅವರ ನಷ್ಟವನ್ನು ಹೇಗೆ ನಾನ್ ತುಂಬೋಕೆ ಆಗುತ್ತೆ? ಮಗನನ್ನು ಕಳೆದುಕೊಂಡ ತಂದೆ ತಾಯಿಗಳಿಗೆ ಕೈಮುಗಿದು ಕೇಳಿಕೊಳ್ಳಬಹುದು ಅಷ್ಟೇ. ನಾನ್ ಯಾವತ್ತು ಹೇಳುವುದು ಇಷ್ಟೇ ಯಶ್ ಅಭಿಮಾನಿ ಅಂದ್ರೆ ತಂದೆ ತಾಯಿಗಳಿಗೆ ಚೆನ್ನಾಗಿ ನೋಡಿಕೊಂಡರೆ ಸಾಕ್ ಅದೇ ನನಗೆ ದೊಡ್ಡ ಅಭಿಮಾನ ಈ ವಿಷಯವನ್ನು ಎಲ್ಲ ಕಡೆಗೂ ಹೇಳಿದ್ದೇನೆ.

Also read: ಬಾಕ್ಸ್ ಆಫೀಸ್-ನಲ್ಲಿ ಶಾರುಖ್ ಖಾನ್-ರ Zero ಚಿತ್ರವನ್ನೂ ಹಿಂದಿಕ್ಕಿ ಮುನ್ನುಗ್ಗುತಿದೆ ಕೆ.ಜಿ.ಎಫ್. ಕನ್ನಡಿಗರ ಚಿತ್ರ ಯಾರಿಗಿಂತ ಕಮ್ಮಿಯಿಲ್ಲ ಅನ್ನೋದನ್ನು ಸಾಧಿಸಿಯೇ ಬಿಟ್ಟರು ಯಶ್!!

ಹಾಗೆಯೇ ಈ ಸಮಯದಲ್ಲಿ ಕೈ ಮುಗಿದು ಎಲ್ಲರಿಗೂ ಕೇಳಿಕೊಳ್ಳುತ್ತೇನೆ ಯಾರು ಇಂತಹ ಅಭಿಮಾನ ತೋರಿಸುವುದು ಬೇಡ ನನ್ನ ಮೇಲೆ ಅಭಿಮಾನ ಇದ್ದರೆ ನೀವು ನಾಲ್ಕು ಕಾಸು ಸಂಪಾದನೆ ಮಾಡಿ ನಿಮ್ಮ ಮನೆಗೆ ಕೊಟ್ಟು ಸ್ವಲ್ಪ ಭಾರವನ್ನು ಹೊತ್ರೆ ಅದೇ ನನಗೆ ಆಶೀರ್ವಾದ, ದಯವಿಟ್ಟು ಈ ರೀತಿಯ ಅಭಿಮಾನವನ್ನು ತೋರಿಸಿ ಎಂದು ಹೇಳಿದ ಯಶ್ ಈಗ ರವಿಯವರ ತಂದೆ ತಾಯಿಗಳಿಗೆ ಏನ್ ಅಂತ ಉತ್ತರ ಕೊಡಬೇಕು? ಈ ರೀತಿಯ ಘಟನೆಗಳು ಮತ್ತೆ ನಡೆದರೆ ನಾನ್ ಕಂಡಿತ್ತ ಬರೋದಿಲ್ಲ. ಕೊನೆಯದಾಗಿ ಹೇಳುತ್ತಿದ್ದೇನೆ. ಇಂತಹ ಅಭಿಮಾನ ಬೇಕಾಗಿಲ್ಲ ಈ ಸಿನಿಮಾ ಫಿಲ್ಡ್ ಬೇಕಾಗಿಲ್ಲ. ಮುಖ್ಯವಾಗಿ ಮರ್ಯಾದಿ, ಅಭಿಮಾನ ಪ್ರೀತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸಮಾಡಿ. ಸಿನಿಮಾ ನೋಡಿ ನಮ್ಮಿಂದ ಏನಾದರೂ ಕಲಿತುಕೊಳ್ಳಬೇಕು ಅಂದ್ರೆ ಕಲಿತುಕೊಳ್ಳಿ ನಾಲ್ಕು ಜನರಿಗೆ ಉದ್ದಾರಮಾಡೋ ಹಾಗೆ ಬದುಕಿ ಈ ಘಟನೆ ನನಗೆ ತುಂಬಾ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಮಯದಲ್ಲಿ ಅಭಿಮಾನಿಗಳು ಹೇಳುವ ಪ್ರಕಾರ; ಕೆಜಿಎಫ್ ಹವಾದಲ್ಲಿರುವ ಯಶ್ ಅವರಿಗೆ ಒಂದಿಲ್ಲ ಒಂದು ಬೇಸರದ ಸಂಗತಿಗಳನ್ನು ಎದುರಿಸುತ್ತಾನೆ ಇದ್ದಾರೆ ಈ ಹಿಂದೆ ಅಂಬಿ ಕಳೆದುಕೊಂಡ ದುಃಖದಲ್ಲಿ ನೋವನ್ನು ಮರೆಸಲು ಮಗಳು ಹುಟ್ಟಿದಳು ನಂತರ ಕೆಜಿಎಫ್ ಸಿನಿಮಾ ಯಶಸ್ವಿಯ ಖುಷಿಯಲ್ಲಿದ ಯಶ್ ಅವರಿಗೆ IT ದಾಳಿ ನಡೆಯಿತ್ತು. ಅದು ಮರೆಯುವ ಸಮಯದಲ್ಲಿ ಹುಟ್ಟುಹಬ್ಬಕ್ಕೆ ಅಭಿಮಾನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ದೊಡ್ಡ ಘಟನೆಯೇ ನಡೆಯಿತು ಇದೆರೀತಿ ಇನ್ನೂ ಎಷ್ಟು ಘಟನೆಗಳು ಅನುಭವಿಸಬೇಕು ಅಂತ ಅಭಿಮಾನಿಗಳ ಪ್ರಶ್ನೆಯಾಗಿದೆ.