ಮನೆಗೆ ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ; ಎಂದು ಯಶ್ ಗೆ ಟೀಕೆ ಮಾಡಿದ ನಿಖಿಲ್ ಗೆ ಯಶ್ ಹೇಳಿದ್ದೇನು ಗೊತ್ತಾ..

0
244

ಮಂಡ್ಯದಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಹೊತ್ತಿ ಉರಿಯುತ್ತಿದ್ದು, ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಮತ್ತು ಸುಮಲತಾ ಅಂಬರೀಶ್ ನಡುವೆ ಪ್ರಚಾರದ ಸದ್ದು ಜೋರಾಗಿದೆ. ಕುಮಾರಸ್ವಾಮಿ ಮತ್ತು ನಿಖಿಲ್ ಹೋದ ಕಡೆಗಳಲ್ಲಿ ಸುಮಲತಾ ಬೆಂಬಲಕ್ಕೆ ನಿಂತ ನಟ ದರ್ಶನ್ ಯಶ್ ಬಗ್ಗೆ ಟೀಕೆ ಮಾಡುತ್ತಿದ್ದು, ಅವರಿಗೆ ಇವರು ಇವರಿಗೆ ಅವರು ಎಂದು ತಿರುಗೇಟು ನೀಡುತ್ತಿದ್ದು. ಬಾರಿ ಸದ್ದು ಮಾಡುತ್ತಿದೆ. ನಿನ್ನೆ ತಾನೇ ನಿಖಿಲ್ ಕುಮಾರಸ್ವಾಮಿ ಯಶ್ ವಿರುದ್ದ ಮಾತನಾಡಿ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಯ ಮಗನೋ ಅಥವಾ ಕಿರಿಯ ಮಗನೋ ಗೊತ್ತಿಲ್ಲ. ಆದರೆ ಇರುವ ಮನೆಗೆ ಬಾಡಿಗೆ ಕಟ್ಟಲು ಆಗದೆ ಇರುವರು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ’’ ಎಂದು ಯಶ್‌ ಹೆಸರೆತ್ತದೆ ವ್ಯಂಗ್ಯವಾಡಿದರು.

Also read: ಮಂಡ್ಯದಲ್ಲಿ ನಿಖಿಲ್ ಸೋಲಿಸಲು ಷಡ್ಯಂತ್ರ ನಡೀತಿದೆ: ಎಚ್.ಡಿ.ಕೆ; ಆದರೆ ಕೇಬಲ್ ಕಟ್ ಮಾಡಿಸ್ಸಿದ್ದವರು ಯಾರು??

ಹೌದು ಛತ್ರಿ ಹಿಡ್ಕೊಂಡು ಶೂಟಿಂಗ್ ಮಾಡುತ್ತಿದ್ದವರಿಗೆ ಕಷ್ಟ ಆಗ್ತಿರಬಹುದು’ ಎಂದು ಕುಮಾರಸ್ವಾಮಿ ಅವರು, ಯಶ್ ಮತ್ತು ದರ್ಶನ್ ಕುರಿತು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟ ಯಶ್ ‘ಅವರ ಅಭ್ಯರ್ಥಿ ಬಗ್ಗೆ ಹೇಳುತ್ತಿದ್ದಾರೆ’ ಎಂದು ವ್ಯಂಗ್ಯ ಮಾಡಿದ್ದರು. ಯಶ್ ಹೇಳಿದ ಆ ಮಾತಿಗೆ ತಿರುಗೇಟು ಕೊಟ್ಟಿದ್ದ ನಿಖಿಲ್, ‘ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ, ಮಾತಾಡಲಿ..ಮಾತಾಡಲಿ….ಎಷ್ಟು ದಿನ ಅಂತ ನೋಡೋಣ’ ಎಂದು ಟಾಂಗ್ ನೀಡಿದ್ರು. ಇದಕ್ಕೆ ಯಶ್ ಅವರು ನಿಖಿಲ್ ವಿರುದ್ದ ಗುಡುಗಿದ್ದು ಬಾರಿ ವೈರಲ್ ಆಗಿದೆ.

ನಿಖಿಲ್ ಗೆ ಯಶ್ ತಿರುಗೇಟು

Also read: ಮಂಡ್ಯದಲ್ಲಿ ಸುಮಲತಾರವರು ಗೆದ್ದರೆ ಯಾರಿಗೆ ಬೆಂಬಲ ಸೂಚಿಸಬೇಕು ಕಾಂಗ್ರೆಸ್-ಗಾ ಅಥವಾ ಬಿಜೆಪಿಗಾ??

ಚಿತ್ರರಂಗದ ಹಿನ್ನೆಲೆಯೇ ಇಲ್ಲದೆ ಬಂದ ನನ್ನ ಹಿಂದೆ ಅಂಬರೀಶ್ ನಿಂತಿದ್ದರು. ಅವರ ಕುಟುಂಬಕ್ಕೆ ನಾವು ಮಕ್ಕಳೇ. ಅದನ್ನು ಯಾರಾದರೂ ಟೀಕಿಸಿದರೆ ಇನ್ನಷ್ಟು ಪ್ರಚಾರ ಮಾಡುತ್ತೇನೆ. ನನ್ನನ್ನು ಎಷ್ಟು ಹೀಯಾಳಿಸುತ್ತಾರೋ ಅಷ್ಟೇ ಮೆರೀತೀನಿ ಎಂದು ಜೆಡಿಎಸ್​ ನಾಯಕರಿಗೆ ರಾಕಿಂಗ್ ಸ್ಟಾರ್​ ಯಶ್​ ಬಹಿರಂಗ ಸವಾಲು ಹಾಕಿದ್ದಾರೆ. ಇಂದು ಮಂಡ್ಯದ ಪೂರಿಗಾಲಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸಿರುವ ನಟ ಯಶ್​, ಇಷ್ಟು ದಿನ ಒಳ್ಳೆಯವರಾಗಿದ್ದ ನಾವು ಈಗ ಪ್ರಚಾರಕ್ಕೆ ಬಂದಿರುವ ಕಾರಣಕ್ಕೆ ಕೆಟ್ಟೋರಾಗಿದ್ದೇವೆ.

ನಮಗೆ ಮನೆ ಬಾಡಿಗೆ ಕಟ್ಟೋಕೆ ಆಗಿಲ್ಲ. ಆ ದುಡ್ಡಿನಲ್ಲಿ ಉತ್ತರ ಕರ್ನಾಟಕದ ಜನತೆಗೆ ಸಹಾಯ ಮಾಡಿದ್ದೀನಿ. ಈ ಸರ್ಕಾರಗಳು ಏನೂ ಮಾಡಿಲ್ಲ’ ಉತ್ತರ ಕರ್ನಾಟಕ ಜನರಿಗೆ ಕುಡಿಯೋಕೆ ನೀರು ಇರಲಿಲ್ಲ. ಬಹಳ ಕಷ್ಟಪಡ್ತಿದ್ರು. ಈ ಸರ್ಕಾರಗಳು ಬಂದಾಗ ಏನೂ ಕೆಲಸ ಮಾಡಿಲ್ಲ. ನಾವು ಆಗ ಸ್ವಲ್ಪ ಕಷ್ಟಪಟ್ಟು ದುಡಿದಿದ್ದ ದುಡ್ಡಿಂದ ಕೆರೆಯಲ್ಲಿ ನೀರು ಸಂಗ್ರಹಿಸುವಂತೆ ಮಾಡಿದ್ವಿ ಅಲ್ವಾ, ಆಗ ನಮ್ಮ ಹತ್ರ ಇದ್ದ ದುಡ್ಡು ಖರ್ಚು ಆಗೋಯ್ತು. ಅದಕ್ಕೆ ಬಾಡಿಗೆ ಕಟ್ಟೋಕೆ ಆಗಿಲ್ಲ” ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ರು.

ನಿಖಿಲ್ ಗೆ ಸುಮಲತಾ ತಿರುಗೇಟು:

Also read: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರದ ವೇಳೆ ದರ್ಶನ್ ಕಾರಿಗೆ ಕಲ್ಲು ತೂರಾಟ ನಡೆಸಿದ್ದು ಎಷ್ಟು ಸರಿ??

ನಟ ಯಶ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಆಡಿದ ಮಾತಿಗೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದು, ನಿಖಿಲ್‍ಗೆ ಇನ್ನೂ ವಯಸ್ಸಿದೆ. ಅವರ ಅತಿರೇಕದ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಕೂಡ ಫಿಲಂ ಇಂಡಸ್ಟ್ರಿಯಲ್ಲಿದ್ದಾರೆ. ಅದೇ ಇಂಡಸ್ಟ್ರಿಯಲ್ಲಿ ಬೆಳೆದಿರೊ ಒಬ್ಬ ನಟನ ಬಗ್ಗೆ ಮಾತಾಡೋದು ಸರಿಯಲ್ಲ. ಹಿರಿಯ ನಟರಿಗೆ ಕಿಂಚಿತ್ತೂ ಗೌರವ ನೀಡದೆ ಮಾತನಾಡಿರುವುದು ಅವರ ಅಹಂಕಾರವನ್ನ ಸೂಚಿಸುತ್ತದೆ. ವೈಯಕ್ತಿಕ ಟೀಕೆ ಬೇಕಾಗಿರಲಿಲ್ಲ. ಹೀಗೆ ನಾವು ಅವರ ಬಗ್ಗೆ ಮಾತನಾಡೋಕೆ ಹೊರಟರೆ ಏನಾಗಬಹುದು. ಅವರಿಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ ಎಂದು ನಯವಾಗಿ ತಿರುಗೇಟು ನೀಡಿದ್ದಾರೆ.