ಬತ್ತಿ ಬರಿದಾಗಿದ್ದ ತಲ್ಲೂರು ಕೆರೆಗೆ ಜೀವ ತುಂಬಿದ ಯಶ್ ನಿಜ ಜೀವನದ ಹೀರೋ.. ಯಶ್ ರವರ ರಾಜಕೀಯ ಪ್ರವೇಶ ನಿಜಾನಾ??

0
462

ಕೊಪ್ಪಳದ ತಲ್ಲೂರು ಕೆರೆ ಬರಿದಾಗಿ ಸುತ್ತ ಮುತ್ತಲಿನ ಹಳ್ಳಿಯ ಜನರಿಗೆ ನೀರಿನ ತೊಂದರೆಯಾಗಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದಾಗ ನೆರವಾಗಿ ನಿಂತವರು ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್.. ಹೌದು ಜೀವನದಲ್ಲಿ ಅಲ್ಪ ಸ್ವಲ್ಪ ದುಡ್ಡು ಮಾಡಿಕೊಂಡು ಸ್ಥಾನಮಾನ ಗಿಟ್ಟಿಸಿಕೊಂಡರೇ ಸಾಕು ಎನ್ನುವವರ ನಡುವೆ ಯಶ್ ಒಬ್ಬ ನಿಜ ಜೀವನದ ಹೀರೋ ಎಂದರೇ ತಪ್ಪಾಗಲಾರದು..

ಸಮಾಜ ಸೇವೆಗೆಂದೆ ಒಂದು ಯಶೋಮಾರ್ಗ ಎಂಬ ಫೌಂಡೇಷನ್ ಸ್ಥಾಪಿಸಿಕೊಂಡು ಸಮಾಜ ಸೇವೆ ಪರಿಸರ ಕಾಳಜಿ ತೋರಿಸುತ್ತಿರುವ ಯಶ್ ನಮಗೆಲ್ಲಾ ಮಾದರಿಯೇ ಸರಿ..
ಬತ್ತಿ ಹೋಗಿದ್ದ ತಲ್ಲೂರು ಕೆರೆಯ ಹೂಳನ್ನು ತೆಗೆಸಿದ್ದಾರೆ.. ಈಗ ಕೆರೆ ನೀರಿನಿಂದ ತುಂಬಿ ತುಳುಕುತ್ತಿದೆ‌.. ಇದೇ ಸಂದರ್ಭದಲ್ಲಿ ಕೆರೆಗೆ ಬಾಗೀನ ಅರ್ಪಿಸಿದ ಯಶ್ ದಂಪತಿ ತಮ್ಮ ಸಾರ್ಥಕತೆಯ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.. ನಮ್ಮ ಸಣ್ಣದೊಂದು ಕನಸು ನನಸಾಗಿದೆ ಎಂದು ಹೇಳಿದ್ದಾರೆ..

ಹೆಲಿಕಾಪ್ಟರ್ ಮೂಲಕ್ ತುಂಬಿದ ಕೊಪ್ಪಳದ ತಲ್ಲೂರು ಕೆರೆಯನ್ನು ವೀಕ್ಷಿಸಿದ ಯಶ್ ದಂಪತಿ ಬಾಗೀನ ಅರ್ಪಿಸಿ ಮಾಧ್ಯಮದವರೊಂದಿಗೆ ಮಾತನಾಡುವ ಸಂಧರ್ಬದಲ್ಲಿ.. ಇದೆಲ್ಲಾ ರಾಜಕೀಯ ಉದ್ದೇಶದಿಂದ ಮಾಡಿದ ಕೆಲಸವೇ ಎಂದು ಒಬ್ಬ ವರದಿಗಾರ ಕೇಳಿದ ಪ್ರಶ್ನೆಗೆ.. ಮುಕ್ತವಾಗಿ ಉತ್ತರ ನೀಡಿದ ಯಶ್.. “ ರಾಜಕೀಯ ಮಾಡುವುದಿದ್ದರೇ ನಮ್ಮ ಊರಲ್ಲೇ ಈ ಕೆಲಸ ಮಾಡಿರುತ್ತಿದ್ದೆ.. ಆದರೇ ಎಲ್ಲಿ ತೊಂದರೆ ಇದೆಯೋ ಅಲ್ಲಿ ಕೆಲಸ ಮಾಡಬೇಕು” ಎಂದಿದ್ದಾರೆ..

ಇದೇ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಊರು ಕೆರೆಗಳನ್ನು ತಾವೇ ಮುಂದೆ ಬಂದು ಅಭಿವೃದ್ಧಿ ಮಾಡಿಕೊಳ್ಳಬೇಕು.. ಒಬ್ಬನಿಂದ ಆಗದ ಕೆಲಸ ಹಲವಾರು ಮಂದಿಯಿಂದ ಸಾಧ್ಯವಿದೆ.. ಎಲ್ಲರೂ ತಮ್ಮ ಕೈಲಾದಷ್ಟು ಸಮಾಜಕ್ಕಾಗಿ ಕೆಲಸ ಮಾಡಬೇಕು ಎಂದು ಸ್ಪೂರ್ತಿ ತುಂಬುವ ಮಾತನಾಡಿದ್ದಾರೆ..  ಏನೇ ಆಗಲಿ ಸಮಾಜದ ಬಗ್ಗೆಗಿನ ಯಶ್ ರವರ ಕಾಳಜಿಗೆ ನಮ್ಮದೊಂದು ಹ್ಯಾಟ್ಸ್ ಆಫ್..

ಮಾಹಿತಿ ಇಷ್ಟವಾದರೇ ಶೇರ್ ಮಾಡಿ.. ಇತರರಿಗೂ ತಿಳಿಯಲಿ.. ಧನ್ಯವಾದಗಳು