ಯಶ್ ಗೆ tong ಕೊಡಲು ನೆಡೆಯಿತು ಹೈಡ್ರಾಮಾ…!! ಓದಿ ಈ ಎಂಟು ವಿಚಾರಗಳನ್ನು

0
1381

ಮೊದಲೇ ರಂಗಣ್ಣನಿಗೆ ಸಿನಿಮಾದವರನ್ನು ಕಂಡ್ರೆ ಆಗಲ್ಲ ಆದ್ರೂ ಕನ್ನಡದ ಪ್ರಸಿದ್ಧ ನಟರನ್ನು ಕೂರಿಸಿಕೊಂಡು ಇಂಟರ್ವ್ಯೂ ಮಾಡ್ತಾರೆ ಅಂದ್ರೆ ಇದರಲ್ಲಿ ಏನೋ ಇದೆ ಎನ್ನಿಸದೆ ಇರಲಾರದು. ಹೌದು, ಇತ್ತೀಚಿನ ಸಿನಿಮಾಗಳನ್ನೇ ನೋಡದ ಪಬ್ಲಿಕ್ ಟಿವಿ ರಂಗಣ್ಣ ಮೊನ್ನೆ ಮುಕುಂದ ಮುರಾರಿ ಚಿತ್ರವನ್ನು ವೀಕ್ಷಿಸಿದ್ದಾರೆ, ಕೇವಲ ವೀಕ್ಷಣೆಗೆ ಮಾತ್ರ ಸೀಮಿತವಾಗಿದ್ದರೆ ಈ ವಿಚಾರ ಇಷ್ಟೊಂದು ಪ್ರಾಶಸ್ತ್ಯ ಪಡೆದುಕೊಳ್ಳುತ್ತಿರಲಿಲ್ಲವೇನೋ…!!

ಆದ್ರೆ ಸಿನಿಮಾ ನೋಡಿದ ರಂಗಣ್ಣ ಆಚೆ ಬಂದು ಚಿತ್ರವನ್ನು ಹಾದಿ ಹೊಗಳಿದ್ದಾರೆ. ಹೊಗಳಿದ್ದು ಅಲ್ಲದೆ ಆ ಚಿತ್ರದಲ್ಲಿ ನಟಿಸಿದ ಉಪೇಂದ್ರ ಸುದೀಪ್ ರನ್ನು ಕೂರಿಸಿಕೊಂಡು ಚರ್ಚೆ ಮಾಡಿದ್ದಾರೆ ಕೂಡ. ಆದ್ರೆ ಎಲ್ಲವು ಗಿಮಿಕ್ ಎನ್ನಿಸದೆ ಇರಲಾರದು.

ಈ ಕೆಳಗಿನ ಅಂಶಗಳನ್ನು ಒಮ್ಮೆ ಗಮನಿಸೋಣ :

  • ಎಲ್ಲೋ ಒಂದು ಕಡೆ ಮುಕುಂದ ಮುರಾರಿ ಬಿಡುಗಡೆಯಾದ ದಿನದಂದೇ ಬಿಡುಗಡೆಯಾದ ಮತ್ತೊಂದು ಚಿತ್ರ ಸಂತು straight ಫಾರ್ವರ್ಡ್ ಚಿತ್ರದ ನಾಯಕ ಯಶ್ ತೇಜೋವದೆ ಮಾಡುವ ತಂತ್ರವೇ…?
  • ಉಪೇಂದ್ರ ಸುದೀಪ್ರನ್ನು ಕೂರಿಸಿಕೊಂಡು ಯಶ್ ಅವರ ಪರೋಕ್ಷ ಟೀಕೆ ಮಾಡಲಾಯಿತು ಎನ್ನಬಹುದೇ…?
  • ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ನಟರು ತಮ್ಮ ನಿಲುವುಗಳನ್ನು ಹೇಳಲೂ ಸಹ ಬಿಡದ ರಂಗಣ್ಣ ಏನು ಸಾದಿಸಲು ಹೊರಟಿದ್ದರು…? ತಿಳಿಯುತ್ತಿಲ್ಲ. ಇದರ ಬಗ್ಗೆ ಸುದೀಪ್ ಒಮ್ಮೆ ಎಚ್ಚರಿಸಿದರು ಕೂಡ…
  • ಕಾರ್ಯಕ್ರಮದುದ್ದಕ್ಕೂ ರಂಗಣ್ಣ ಪ್ರೆಶ್ನೆ ಹಾಕಿದರು ಆದ್ರೆ ಉಪೇಂದ್ರ ಸುದೀಪ್ ಅವರು ಕೇಳಿದ ಯಾವುದೇ ಪ್ರೆಶ್ನೆಗಳಿಗೆ ರಂಗಣ್ಣ ಅಡ್ಡ ಗೋಡೆಯ ಮೇಲೆ ದೀಪ ಇಟ್ಟರು ಎಂದರೆ ತಪ್ಪಲ್ಲ…!!
  • ಒಂದನ್ನು ಗಮನಿಸಿ ಸತತ 1 ಗಂಟೆಗೂ ಹೆಚ್ಚು ಹೊತ್ತು ನೆಡೆದ ಕಾರ್ಯಕ್ರಮದಲ್ಲಿ ಉಪೇಂದ್ರ ಆಗಲಿ ಸುದೀಪ್ ಆಗಲಿ ಯಶ್ ಅವರ ಬಗ್ಗೆ ಒಂದೂ ಮಾತನಾಡದೆ ಇರುವುದು ಅವರ ಹೆಚ್ಚುಗಾರಿಕೆಯನ್ನು ತೋರುಸುತ್ತದೆ.
  • ಯಾವಾಗಲೂ ಸಿದ್ದಣ್ಣ, ಯಡ್ಡಿ ಎನ್ನುತಿದ್ದ ರಂಗಣ್ಣ ದಿಢೀರನೆ ಸಿನಿಮಾ ಜೊತೆಗಿನ ನಂಟನ್ನು ಏಕೆ ಬೆಳಿಸಿಕೊಂಡರು…?
  • Interview ನೆಡೆಯುವ ಸಂದರ್ಭದಲ್ಲಿ ಮಾತಿನ ಬರದಲ್ಲಿ ಸುದೀಪ್ ಅವರನ್ನು ಕ್ಷಮೆ ಕೇಳಿದಿರಿ ಆದ್ರೂ ನೀವು ಮಾತಿನ ಮೇಲೆ ಹಿಡಿತ ಇಲ್ಲದೆ ಮಾತಾಡಿದಿರಿ ರಂಗಣ್ಣ.
  • ಯಾವುದೊ ವಿಚಾರಕ್ಕೆ ನನ್ನಿಂದಲೇ ಪಬ್ಲಿಕ್ ಟಿವಿ ಗೆ TRP ಎನ್ನುವ ಅಹಂಕಾರದ ಮಾತು ಆಡಿದೀರಿ ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ..?