ಬಾಹುಬಲಿಯ ರೆಕಾರ್ಡ್-ಅನ್ನು ಮೀರಿ ಇನ್ನೂ ಮುನ್ನುಗುತ್ತಿದೆ ನಮ್ಮ ಕೆ.ಜಿ.ಎಫ್!! ಇನ್ಮುಂದೆ ಯಾರೂ ಕನ್ನಡ ಸಿನಿಮಾವನ್ನು ಹೀಯಾಳಿಸುವಂತಿಲ್ಲ!!

0
536

ರಾಕಿಂಗ್​ ಸ್ಟಾರ್​ ನಟನೆಯ ‘ಕೆಜೆಎಫ್​’ ಚಿತ್ರ ತೆರೆಕಂಡು 40 ದಿನಗಳಲ್ಲಿ ಬಾಕ್ಸ್ ಆಫೀಸ್- ನಲ್ಲಿ ತನ್ನದೇ ಇತಿಹಾಸ ಸೃಷ್ಟಿಸಿ ಪ್ರಭಾಸ್ ನಟನೆಯ ಬಾಹುಬಲಿ 2 ರೆಕಾರ್ಡ್ ಮುರಿದಿದೆ. ಕೆಜಿಎಫ್ ಸಿನಿಮಾ ಬರುವ ವರೆಗೂ ಒಂದು ತರಹದ ಹವಾ ಸೃಷ್ಟಿ ಮಾಡಿತ್ತು ಬಂದ ನಂತರ ಕನ್ನಡ ಸಿನಿಮಾ ರಂಗವನ್ನೇ ಬಹು ಎತ್ತರಕ್ಕೆ ತೆಗೆದುಕೊಂಡು ಹೋಗಿ ದೇಶ ವಿದೇಶಗಳಲ್ಲಿ ಕನ್ನಡ ಭಾವುಟವನ್ನು ಬಹು ಎತ್ತರಕ್ಕೆ ಹಾರಿಸಿದೆ. ಇಡಿ ಸ್ಯಾಂಡಲ್ ವುಡ್-ನಲ್ಲೆ 200 ಕೋಟಿ ಹಣ ಗಳಿಸಿದ ಮೊದಲನೇಯ ಸಿನಿಮಾ ಇದಾಗಿದೆ.

ಹೌದು ಗಲ್ಲಾಪೆಟ್ಟಿಗೆಯಲ್ಲಿ ಯಶ್ ಅಭಿನಯದ ಕೆಜಿಎಫ್ ಭಾರತೀಯ ಸಿನಿಮಾದಲ್ಲಿ ರ ಅತಿ ದೊಡ್ಡ ದಾಖಲೆ ಮಾಡಿದ ಬಾಹುಬಲಿ 2 ಚಿತ್ರದ ದಾಖಲೇಯನ್ನು ಮೀರಿಸಿದೆ. ಕೆಜಿಎಫ್ ಮೊದಲು ಚಿತ್ರ ತೆರೆ ಕಂಡು ತಿಂಗಳಾಗುತ್ತ ಬಂದರೂ ಸಿನಿಮಾದ ಹವಾ ಮಾತ್ರ ಇನ್ನೂ ನಿಂತಿಲ್ಲ. ಚಿತ್ರಕ್ಕೆ ಎಲ್ಲಕಡೆಗಳಿಂದ ಮೆಚ್ಚುಗೆ ಕೇಳಿ ಬರುವುದರ ಜೊತೆಗೆ, ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲೂ ಏರಿಕೆ ಆಗುತ್ತಿದೆ. ಅಚ್ಚರಿ ಎಂದರೆ, ಗಳಿಕೆ​ ವಿಚಾರದಲ್ಲಿ ಕಳೆದ ವರ್ಷ ತೆರೆಕಂಡಿದ್ದ​ ‘ಬಾಹುಬಲಿ 2’ ಚಿತ್ರ ಮಾಡಿದ ದಾಖಲೆ ಮುರಿಯಲು ‘ಕೆಜಿಎಫ್’​ ಸಿದ್ಧವಾಗಿದೆ. ಎಂಬ ಸುದ್ದಿ ಹರಿದಾಡುತ್ತಿತು ಆ ನಿರೀಕ್ಷೆಯನ್ನು ಹುಸಿಗೊಳಿಸದೆ ಮುನ್ನುಗಿದೆ.

ವಿಶ್ವ ಮಟ್ಟದಲ್ಲಿ ‘ಕೆಜಿಎಫ್​’240 ಕೋಟಿ ರೂ. ಗಳಿಕೆ ಮಾಡಿದೆ ಎಂಬುದು ಬಾಕ್ಸ್​ ಆಫೀಸ್​ ತಜ್ಞರ ಲೆಕ್ಕಾಚಾರ. ಸ್ಯಾಂಡಲ್​ವುಡ್​ನಲ್ಲೂ ಚಿತ್ರದ ಇದರ ಹವಾ ಜೋರಾಗಿದೆ. ಕನ್ನಡದಲ್ಲಿ ಯಾವ ಚಿತ್ರವೂ ಮಾಡದಷ್ಟು ಕಲೆಕ್ಷನ್ ‘ಕೆಜಿಎಫ್’​ ಚಿತ್ರ ಮಾಡಿದೆ. ಹಾಗಾಗಿ ಕನ್ನಡದ ನೆಲದಲ್ಲಿ ‘ಬಾಹುಬಲಿ 2′ ಮಾಡಿದ ದಾಖಲೆಯನ್ನು ‘ಕೆಜಿಎಫ್’​ ಪುಡಿಗಟ್ಟದೆ ಎಂಬುದು ಗಾಂಧಿನಗರದ ಮರೆಯದ ಮಾತಾಗಿದೆ.

ಇನ್ನೂ ಈ ಸಿನಿಮಾ ಬಿಡುಗಡೆಯಾದಾಗ ಕನ್ನಡದಲ್ಲಿ ದೊರೆತಷ್ಟು ಪ್ರಚಾರ ಬಾಲಿವುಡ್​ನಲ್ಲಿ ಸಿಕ್ಕಿರಲಿಲ್ಲ. ಆದಾಗ್ಯೂ ಈ ಚಿತ್ರ ಹಿಂದಿ ಭಾಷೆಯಲ್ಲಿ ದಿನೇ ದಿನೇ ಕಲೆಕ್ಷನ್​ ಹೆಚ್ಚಿಸಿಕೊಳ್ಳುಲು ಶುರುಮಾಡಿತು. ಕೋಟಿ ಕೋಟಿ ರೂ. ಗಳಿಸುವ ಮೂಲಕ ಬಾಲಿವುಡ್​ನ ಕಲೆಕ್ಷನ್​ ತೆಕ್ಕೆಗೆ ಹಾಕಿಕೊಂಡಿದೆ. ಕೆಜಿಎಫ್​’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುದ್ದು ಗೊತ್ತೇ ಇದೆ. ಸಿನಿಮಾ ನೋಡಿದ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​, ಪುನೀತ್​ ರಾಜ್​ಕುಮಾರ್​, ಬಾಲಿವುಡ್​ ನಟಿ ರವೀನಾ ಠಂಡನ್​, ಸುಮಲತಾ ಅಂಬರೀಶ್​, ಜಗ್ಗೇಶ್​ ಸೇರಿ ಅನೇಕರು ಗಣ್ಯರು ಸಿನಿಮಾದ ಕುರಿತು ಹಲವು ಅಭಿಪ್ರಾಯಗಳನ್ನು ಹಂಚ್ಚಿಕೊಂಡಿದ್ದರು.

ವಾಸ್ತವವಾಗಿ ವಿಶ್ವಾದ್ಯಂತದ ಒಟ್ಟು ಮೊತ್ತವು 240.11 ಕೋಟಿ ರೂ. ಗಳಿಸಿದೆ ಚಲನಚಿತ್ರವು ಯು.ಎಸ್ ಗಲ್ಲಾಪೆಟ್ಟಿಗೆಯಲ್ಲಿ ಅಪರೂಪದ ಮರು-ಬಿಡುಗಡೆಯನ್ನು ಕಂಡಿತ್ತು, ಅದರಂತೆಯೇ ಬಿಡುಗಡೆಯ ಸಮಯದಲ್ಲಿ ಚಿತ್ರವು ಚೆನ್ನಾಗಿಯೇ ನಡೆದಿತ್ತು ಆದರೆ ಬಿಡುಗಡೆಯ ಸಮಯದಲ್ಲಿ ಕೆಲವೊಂದು ವಾಗ್ದಾಳಿ ಕಾರಣದಿಂದಾಗಿ ಹೆಚ್ಚಿನ ಲಾಭವನ್ನು ಪಡೆಯುವುದಿಲ್ಲ ಎಂದು ವರದಿಗಳು ತಿಳಿಸಿದ್ದವು. ಆದರೆ, ಬಿಡುಗಡೆಗಳ ಕಡಿಮೆ ಹರಿವು ಇರುವುದರಿಂದ, ವಿತರಕರು ಮರು-ಬಿಡುಗಡೆಗೆ ವಿನಂತಿಸಿದ್ದಾರೆ. ಪುನಃ ಬಿಡುಗಡೆಯಲ್ಲಿ ಪರಿಣಾಮ ಬೀರುತ್ತದೆ ಎಂದು ಸುದ್ದಿಯಲ್ಲಿದೆ. ಮತ್ತು ಇದರಲ್ಲಿ ವಿಶ್ವಾದ್ಯಂತ ಒಟ್ಟು 250 ಕೋಟಿ ರೂ. ಗಳಿಸುವ ಸಂಭವವಿದೆ ಎಂದು ತಿಳಿದು ಬಂದಿದೆ.
ಇನ್ನೊಂದು ಇತಿಹಾಸ ಅಂದರೆ ಕನ್ನಡದ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿದೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಅಲ್ಲಿದ ಕೂಡ ಕೆಲವು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇದೆಲ್ಲ ನೋಡಿದರೆ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಅಡಿಪಾಯ ಎಂದರೆ ತಪ್ಪಾಗಲಾರದು.

Also read: ಬಾಕ್ಸ್ ಆಫೀಸ್-ನಲ್ಲಿ ಶಾರುಖ್ ಖಾನ್-ರ Zero ಚಿತ್ರವನ್ನೂ ಹಿಂದಿಕ್ಕಿ ಮುನ್ನುಗ್ಗುತಿದೆ ಕೆ.ಜಿ.ಎಫ್. ಕನ್ನಡಿಗರ ಚಿತ್ರ ಯಾರಿಗಿಂತ ಕಮ್ಮಿಯಿಲ್ಲ ಅನ್ನೋದನ್ನು ಸಾಧಿಸಿಯೇ ಬಿಟ್ಟರು ಯಶ್!!