ಯಾಸಿನ್ ಭಟ್ಕಳ್‍ ಸೇರಿ ನಾಲ್ವರು ಇಂಡಿಯನ್ ಮುಜಾಹಿದ್ದೀನ್ ಗಳಿಗೆ ಗಲ್ಲು: ನ್ಯಾಯಾಲಯ ಮಹತ್ವದ ಆದೇಶ

0
546

ಇದು ಅತ್ಯಂತ ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಅಭಿಪ್ರಾಯಪಟ್ಟ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ, ಇಂಡಿಯನ್‍ ಮುಜಾಹಿದ್ದೀನ್‍ ಸಂಘಟನೆಯ ಸಹ ಸಂಸ್ಥಾಪಕ ಯಾಸಿನ್‍ ಭಟ್ಕಳ್‍ ಮತ್ತಿ ತರ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಹೈದರಾಬಾದ್‍ನ ದಿಲ್‍ಸುಖ್ ನಗರದ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ನಾಲ್ವ ರನ್ನು ದೋಷಿ ಎಂದು ಡಿಸೆಂಬರ್‍ 13ರಂದು ನ್ಯಾಯಾಲಯ ತೀರ್ಪು ನೀಡಿತ್ತು.

438775-german-bakery

ಯಾಸಿನ್‍ ಭಟ್ಕಳ್‍ ಅಲ್ಲದೇ ಪಾಕಿಸ್ತಾನ ಮೂಲದ ಜಿಯಾ- ಉರ್‍- ರೆಹಮಾನ್‍ ಅಲಿಯಾಸ್‍ ವಕಾಸ್‍, ಅಸಾದುಲ್ಲಾ ಅಖ್ತರ್‍ ಅಲಿಯಾಸ್‍ ಹಡ್ಡಿ, ತಹಸೀನ್‍ ಅಲಿಯಾಸ್‍ ಮೊನು ಮತ್ತು ಅಜಿಜ್‍ ಶೇಖ್ ಅವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾದ ಗಲ್ಲು ವಿಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ರಿಯಾಜ್‍ ಭಟ್ಕಳ್‍ ಹುಡುಕಾಟ ಇನ್ನೂ ಮುಂದುವರಿದಿದೆ.

ತೀರ್ಪು ಪ್ರಕಟಿಸುವ ಮುನ್ನ ಜನರಲ್ಲಿ ಭೀತಿ ಸೃಷ್ಟಿಸಲು ಹಾಗೂ ಭಯೋತ್ಪಾದನೆ ನಡೆಸಲು ಇವರು ಆಯ್ಕೆ ಮಾಡಿಕೊಂಡ ರೀತಿ ಗಮನಿಸಿದರೆ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.