ಯಾವ ರೋಗಕ್ಕೆ ಯಾವ ಗ್ರಹಗಳು ಕಾರಣ ನಿಮಗೆ ಗೊತ್ತೇ….?

0
1028

ಮನುಷ್ಯನ ಶರೀರವು ಜಲ, ಅಗ್ನಿ, ವಾಯು ತತ್ವಗಳಿಂದ ಕೂಡಿದಾಗಿದೆ ಹಾಗೆಯೇ ಗ್ರಹಗಳು ಕೂಡ ಈ ತತ್ವಕ್ಕೆ ಸಂಭಂದಿಸಿದ ರೋಗಗಳು ಕೊಡುತ್ತದೆ. ಮುಖ್ಯವಾಗಿ ಗ್ರಹಗಳ ದಶಾಭುಕ್ತಿ ಸಮಯದಲ್ಲಿ ಮತ್ತು, ನೀಚ ಗ್ರಹಗಳ ದೃಷ್ಟಿಬಿದ್ದಾಗ ಸಮಾನ್ಯವಾಗಿ ಮನುಷ್ಯನ ದೇಹದದಲ್ಲಿ ರೋಗಗಳು ಕಾಣಿಸುತ್ತದೆ. ಯಾವ ರೋಗಕ್ಕೆ ಯಾವ ಗ್ರಹಗಳು ಕಾರಣ ಎಂಬ ವಿವರ ಈ ಕೆಳಗಿನಂತಿದೆ.

ರವಿ – ಉಷ್ಣಸಂಬಂದಿಸಿದು, ನೇತ್ರ ಸಂಬಂದ, ಬೆನ್ನು ಮೂಳೆ, ರಕ್ತಹೀನತೆ, ಹೃದಯ ಸಂಬಂಧ, ಪುರುಷರಿಗೆ ಬಲಗಣ್ಣು, ಮಹಿಳೆಯರಿಗೆ ಎಡಗಣ್ಣು, ಕಣ್ಣಿನ ಪೊರೆ, ಮುಖದಲ್ಲಿನ ಮೊಡವೆ, ಮೂರ್ಛೆ, ತಲೆತಿರುಗುವುದು, ಮೆದುಳು.

ಚಂದ್ರ – ಚಂದ್ರ ಮನಸ್ಸಿನ ಕಾರಕನಾಗಿರುವುದರಿಂದ ಮಾನಸಿಕ ತೊಂದರೆ, ಚಂದ್ರನು ಜಲಕಾರಕ ಶೀತಕ್ಕೆ ಸಂಬಂಧಿಸಿದು, ಕೆಮ್ಮು, ಚರ್ಮವ್ಯಾದಿ, ದಡಾರ, ಸ್ತ್ರೀಯರಿಗೆ ಸಂಬಂಧಿಸಿದು, ಜಠರ, ಮಕ್ಕಳಿಗೆ ನಾಲ್ಕುವರ್ಷ ಚಂದ್ರನೇ ಅಧಿಪತಿ, ಬಾಲಗ್ರಹ, ಪುರುಷರಿಗೆ ಎಡಗಣ್ಣು, ಸ್ತ್ರೀಯರಿಗೆ ಬಲಗಣ್ಣು.

ಕುಜ -ಬೆಂಕಿ,ವಿದ್ಯುತ್,ಅಪಘಾತ ಸಂಬಂಧಪಟ್ಟ ತೊಂದರೆ,ಮೂಗು, ಹಣೆ, ಖಂಡಗಳು, ಕಾಮಾಲೆ, ಮೂತ್ರಕೋಶದಲ್ಲಿನ ಕಲ್ಲು, ಪಿತ್ತಕೋಶ, ಉರಿಯೂತ, ವೀರ್ಯನಾಶದಿಂದ, ಮೂಲವ್ಯಾದಿ, ಗಾಯಗಳು, ಮಗುವಿನ ಜನನ ಸಮಯದಲ್ಲಿ ಕುಜ ಬಹಳ ಅಪಕಾರಿ, ಸರ್ಪಸುತ್ತು, ಹುಣ್ಣು.

ಬುಧ – ಕೈಗಳು, ನಾಲಿಗೆ, ಬಾಯಿ, ಮೆದುಳಿನ ನರಗಳು, ಮೆದುಳಿನಲ್ಲಿ ಹೆಪ್ಪುಗಟ್ಟುವುದು, ತಲೆನೋವು, ನೆನಪಿನ ತೊಂದರೆ, ಶ್ವಾಸಕೋಶ.

ಗುರು – ರಕ್ತನಾಳಗಳು, ಮದುಮೇಹ, ಹೃದಯದ ತೊಂದರೆಗಳು, ಬಲಕಿವಿ, ತೊಡೆಗಳು, ಉಸಿರಾಟ ತೊಂದರೆ, ಹಲ್ಲು, ರಕ್ತದ ಚಲನೆ.

ಶುಕ್ರ – ಗಂಟಲು, ಕುತ್ತಿಗೆ, ಕೂದಲು, ಜನನಾಂಗ, ಅಂಡಾಣುಗಳು, ವೀರ್ಯಾಣುಗಳು, ಗರ್ಭಕ್ಕೆ ಸಂಬಂಧಪಟ್ಟ, ಎದೆಯಭಾಗ.

ಶನಿ – ಮೊಣಕಾಲು, ಕೀಲುನೋವು, ಚರ್ಮರೋಗ, ಆಲಸ್ಯ, ಕುಷ್ಠ, ನರದೌರ್ಬಲ್ಯ, ನಿರುತ್ಸಾಹ, ಸಂಧಿವಾತ, ಕಿವಿ ಸಂಬಂಧ, ಕಫವೂ, ದೀರ್ಘಕಾಲ ಕಾಯಿಲೆಗಳು.

ರಾಹು ಕೇತು – ಆತಂಕಗಳು, ಹೃದಯ ತಾಪ, ಪಾದಗಳನೋವು, ಕೆಟ್ಟಕನಸುಗಳು, ನಿದ್ದೆಯ ತೊಂದರೆ, ತಲೆನೋವು, ಸೊಂಟದಭಾಗ ನೋವು, ಸಣ್ಣಗಾಯವನ್ನು ದೊಡ್ಡಗಾಗಿ ಮಾಡಿಕೊಳ್ಳುವುಗು, ದೇಹದಲ್ಲಿ ಕೆಟ್ಟ ವಾಸನೆ, ಚರ್ಮರೋಗ, ಸಾಂಕ್ರಾಮಿಕ ರೋಗ, ಸರ್ಪಸುತ್ತು, ಮಾನಸಿಕ ತೊಂದರೆಗಳು.

ಎನ್. ಶರತ್ ಶಾಸ್ತ್ರಿ
ಚಾಮುಂಡೇಶ್ವರಿ ದೇವಸ್ಥಾನ
ಸುಣ್ಣದಕೇರಿ ಮೈಸೂರು
9845371416