ಯಡಿಯೂರಪ್ಪ ವಿರುದ್ಧ 1800 ಕೋಟಿ ಆರೋಪ; ದಾಖಲೆ ಸಮೇತ ಡೈರಿ ಪ್ರದರ್ಶಿಸಿದ ಕಾಂಗ್ರೆಸ್​ ವಕ್ತಾರ ಸುರ್ಜೆವಾಲಾ..

0
242

ಲೋಕಸಭಾ ಚುನಾವಣೆಯ ಕೆಂಡದಲ್ಲಿ ಯಡಿಯೂರಪ್ಪನವರ ಡೈರಿ ಬಿಡುಗಡೆ ಮಾಡಿದ ಕಾಂಗ್ರೇಸ್ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬಿಜೆಪಿ 2690 ಕೋಟಿ ಕೇಳಿತು. ಅದರಲ್ಲಿ, 1800 ಕೋಟಿಯನ್ನು ರಾಷ್ಟ್ರೀಯ ನಾಯಕರಿಗೆ ನೀಡಲಾಗಿದೆ. ಪ್ರತಿ ಪುಟದಲ್ಲಿ ಅವರ ಸಹಿ ಇದೆ. ಈ ಹಣವನ್ನು ಕೇಂದ್ರ ತಂಡಕ್ಕೆ ನೀಡಲಾಗಿದೆ ಎಂದು ಸುರ್ಜೇವಾಲ ಆರೋಪಿಸಿ. ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕಪ್ಪಕಾಣಿಕೆ ನೀಡಿರುವ ಕುರಿತು ನಮ್ಮ ಬಳಿ ದಾಖಲೆ ಇದೆ ಎಂದು ಕಾಂಗ್ರೆಸ್​ ವಕ್ತಾರ ರಂದೀಪ್​ ಸುರ್ಜೆವಾಲಾ ಹೊಸ ಬಾಂಬ್​ ಡೈರಿ ಬಿಡುಗಡೆ ಮಾಡಿದ್ದಾರೆ.

Also read: ಕಡೆಗೂ ಕ್ರಿಕೆಟಿಗರು ರಾಜಕೀಯ ಪ್ರವೇಶ; ಅಧಿಕೃತವಾಗಿ ಬಿಜೆಪಿಗೆ ಸೇರಿದ ಗೌತಮ್ ಗಂಭೀರ್ ನವದೆಹಲಿ ಕ್ಷೇತ್ರದಿಂದ ಚುನಾವಣೆಗೆ ಅಕಾಡಕ್ಕೆ

ಈ ಡೈರಿಯಲ್ಲಿ ಇರುವಂತೆ ಐದು ಸತ್ಯಾಂಶಗಳು ಹೊರಬಿದಿದ್ದು 2009ರಲ್ಲಿ ಕರ್ನಾಟಕ ಶಾಸಕರು ಪಾವತಿ ಮಾಡಿದ್ದನ್ನು ಯಡಿಯೂರಪ್ಪ ತಮ್ಮ ಕೈ ಬರೆಹದಲ್ಲಿ ಕನ್ನಡದಲ್ಲಿ ದಾಖಲು ಮಾಡಿದ್ದಾರೆ. ಡೈರಿಯ ಪುಟದಲ್ಲಿ ಬಿಜೆಪಿಯ ಕೇಂದ್ರ ಸಮಿತಿಗೆ ಯಡಿಯೂರಪ್ಪ 1000 ಕೋಟಿ ನೀಡಿದ್ದರು. ಅವರು ಹಣಕಾಸು ಸಚಿವ ಅರುಣ್​ ಜೇಟ್ಲಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ತಲಾ 150 ಕೋಟಿ ನೀಡಿದ್ದಾರೆ. ಗೃಹ ಸಚಿವ ರಾಜನಾಥ್​ ಸಿಂಗ್​ ಅವರಿಗೆ 100 ಕೋಟಿ, ಎಲ್.ಕೆ.ಆಡ್ವಾನಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ತಲಾ 50 ಕೋಟಿ ಹಾಗೂ ನಿತಿನ್ ಗಡ್ಕರಿ ಮಗನ ಮದುವೆಗೆ ಯಡಿಯೂರಪ್ಪ 10 ಕೋಟಿ ನೀಡಿದ್ದಾಗಿ,” ಕಾರವಾನ್​ ವರದಿ ಮಾಡಿದೆ ಎಂದು ಸರ್ಜೆವಾಲಾ ಮಾಧ್ಯಮ ವರದಿ ಉಲ್ಲೇಖಿಸಿ ಆರೋಪ ಮಾಡಿದ್ದಾರೆ.

ಡೈರಿಗೆ ವಿಷಯಕ್ಕೆ ಬಿಜೆಪಿಯ ಪ್ರತಿಕ್ರಿಯೆ

ಬಿಜೆಪಿಯ ಜನಪ್ರಿಯ ಮಾಜಿ ಮುಖ್ಯಮಂತ್ರಿಯವರು ಪ್ರಸ್ತುತ ಸಂಪುಟ ದರ್ಜೆ ಸಚಿವರೊಬ್ಬರಿಗೆ 150 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತ ನೀಡಿರುವ ಕುರಿತಾದ ವಿವರಗಳನ್ನೊಳಗೊಂಡ ಡೈರಿಯೊಂದು ಆದಾಯ ತೆರಿಗೆ ಇಲಾಖೆ ಬಳಿ ಇದೆ ಎಂಬ ಮಾಧ್ಯಮವೊಂದರ ಮಸಾಲೆ ಸುದ್ದಿ ಹಾಸ್ಯಾಸ್ಪದವಾಗಿದೆ. ವಿಧಾನಪರಿಷತ್ ಸದಸ್ಯ ಕರ್ನಾಟಕ ಕಾಂಗ್ರೆಸ್‍ನ ಗೋವಿಂದರಾಜ್ ಅವರ ಮನೆಯಲ್ಲಿ 2018ರ ಆರಂಭದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕರಿಗೆ ಮಾಡಿದ್ದ ಪಾವತಿಗಳ ವಿವರಗಳನ್ನೊಳಗೊಂಡ ಸ್ಟೀಲ್ ಫ್ಲೈಓವರ್ (ಉಕ್ಕಿನ ಸೇತುವೆ) ನೈಜ ಡೈರಿಗೆ ವಿರುದ್ಧವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಪರಮಾಪ್ತ ಡಿ.ಕೆ.ಶಿವಕುಮಾರ್ ಸೃಷ್ಟಿಸಿದ್ದ ನಕಲಿ ಡೈರಿ ಕುರಿತು ಕರ್ನಾಟಕದ ಪ್ರತಿಯೊಬ್ಬರಿಗೂ ತಿಳಿದೇ ಇದೆ.

Also read: ಈ ಹೊಸ ಸಮೀಕ್ಷೆ ನೋಡಿ ಇದರ ಪ್ರಕಾರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ!! ನೀವು ಈ ಸಮೀಕ್ಷೆ ನಿಜವಾಗುತ್ತೆ ಅಂತೀರಾ??

ಸ್ಟೀಲ್‍ಬ್ರಿಡ್ಜ್ ಹೆಸರಲ್ಲಿ 65 ಕೋಟಿ ರೂಗಳನ್ನು ಸ್ವೀಕರಿಸಿರುವ ಕುರಿತೂ ಡೈರಿಯಲ್ಲಿ ದಾಖಲಿಸಲಾಗಿತ್ತು. 7 ಕೋಟಿ ರೂಗಳನ್ನು ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಗಾಗಿ ಮಾಧ್ಯಮವೊಂದಕ್ಕೆ ಪಾವತಿಸಿರುವುದನ್ನೂ ದಾಖಲಿಸಿತ್ತು. ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ. ಆದರೆ ಡೈರಿಯಲ್ಲಿರುವಂತೆ ಕೇಂದ್ರ ತಂಡದಲ್ಲಿ ಮೋದಿ ಸೇರಿದಂತೆ ದೊಡ್ಡ ದೊಡ್ಡವರ ಹೆಸರಿದೆ. ನ್ಯಾಯಾಧೀಶರು ಹಾಗೂ ವಕೀಲರಿಗೆ 250 ರಿಂದ 50 ಕೋಟಿವರೆಗೆ ನೀಡಿದ್ದಾರೆ. ಕ್ಯಾರವಾನ್​ ಪತ್ರಿಕೆ ವರದಿ ಪ್ರಕಾರ ಈ ಡೈರಿ 2017ರಿಂದ ಆದಾಯ ತೆರಿಗೆ ಅಧಿಕಾರಿಗಳ ಬಳಿಯೇ ಇದೆ ಎಂದು ಹೇಳಿದ್ದಾರೆ. ಇದೆಲ್ಲವೂ ಸುದ್ದ ಸುಳ್ಳು ಎಂದು ಹೇಳಿದ್ದಾರೆ.

ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

Also read: ಕರ್ನಾಟಕದಲ್ಲಿ ಮೋದಿ ಅಬ್ಬರ; ರಾಹುಲ್ ಸಂವಾದದಲ್ಲೇ ಮೋದಿ ಪರ ಘೋಷಣೆ..

ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ಬಂದಾಗ ಕಾಂಗ್ರೆಸ್​​​ನವರಿಗೆ ಸಿಡಿ ನೆನಪಾಗುತ್ತೆ. ಅಭಿವೃದ್ಧಿಯಲ್ಲಿ ಗೆಲ್ಲಲಾಗದವರು ಸಿಡಿ ರಾಜಕಾರಣ ಮಾಡುತ್ತಾರೆ. ಇವೆಲ್ಲಾ ಸುಳ್ಳು, ಎಲ್ಲವೂ ನಕಲಿ. ರಾಜ್ಯದಲ್ಲಿರುವ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆಯಾಗಬಹುದು. ಇವರು ಚುನಾವಣೆ ಎದುರಿಸಲಾದ ಪುಕ್ಕಲು ರಾಜಕಾರಣಿಗಳು. ಕಾಂಗ್ರೆಸ್​​ನವರು ಚುನಾವಣೆ ಎದುರಿಸಲಾಗದ ಪುಕ್ಕಲು ರಾಜಕಾರಣಿಗಳು ಎಂದು ಪ್ರತಿಕ್ರಿಯೆ ನೀಡಿದ ಅವರು. ಬಿ.ಎಸ್.ಯಡಿಯೂರಪ್ಪ ಅವರಿಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಸುಳ್ಳು ಆರೋಪ ಮಾಡುತ್ತಿದ್ದಾರೆ. ಡೈರಿಯನ್ನು ಕಾಂಗ್ರೆಸ್‍ನವರೇ ಬರೆದಿದ್ದಾರೆ. ಅವರೇ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಿ.ಎಸ್.ಯಡಿಯೂರಪ್ಪ ಅವರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಿದರು.