ಎಕ್ಕ ಗಿಡ ವಿಷ ಅಂತ ಹಲವಾರು ಜನರು ನಂಬಿದ್ದಾರೆ, ಆದರೆ ಅದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರ..

0
2467

Health Tips In Kannada | Kannada News

ಎಕ್ಕ ಗಿಡ, ಅರ್ಕ ಅಥವಾ ದೇವ ರೇಖಾ ಎಂಬ ಹೆಸರಿನಿಂದ ಕರೆಯಲ್ಪಡುವ ಒಂದು ಜಾತಿಯ ಹೇರಳವಾದ ಔಷಧ ಗುಣ ಹೊಂದಿರುವ ಸಸ್ಯಕ್ಕೆ ಈಗ ಬಹು ಬೇಡಿಕೆ ಬಂದಿದೆ. ಆಯುರ್ವೇದ ಪ್ರಕಾರ ಚರ್ಮ ಸುಕ್ಕುಗಟ್ಟಿದರೆ, ವಿಷದ ಮುಳ್ಳು ತಾಗಿದರೆ, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದರೆ, ಮನುಷ್ಯರ ಮೇಲಿನ ಕೆಡು ನಾಶಕ್ಕೆ ಈ ಸಸ್ಯದ ಔಷಧವನ್ನು ಬಳಸಲಾಗುತ್ತದೆ. ಈಗ ಸಕ್ಕರೆ ಕಾಯಿಲೆ, ಬಿಪಿ ಕಂಟ್ರೋಲ್‌ಗೆ ಕೂಡ ಬಳಸಲಾಗುತ್ತಿದೆ.

ಸಕ್ಕರೆ ಕಾಯಿಲೆ ಅಥವಾ ಬಿಪಿ ಕಾಯಿಲೆ ಇದ್ದವರು ಸಾಮಾನ್ಯವಾಗಿ ಮಾತ್ರೆ ನುಂಗೋದು, ಕಹಿಯಾದ ಹಾಗಲಕಾಯಿ ರಸ ಕುಡಿಯುವುದು ಹೀಗೆ ಅನೇಕ ಔಷಧಿಗಳನ್ನು ತೊಗೊಳೋ ಬದಲು ಎಕ್ಕದ ಎಲೆಯನ್ನು ಕಾಲಿನ ಅಡಿಭಾಗದಲ್ಲಿ ಇಟ್ಟರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಎಕ್ಕ ಗಿಡದ ಎಲೆಯಲ್ಲಿ ಔಷಧೀಯ ಗುಣವಿರುವುದು ವೈದ್ಯಕೀಯವಾಗಿ ದೃಡಪಟ್ಟಿದೆ. ಕಾಲಿನ ಅಡಿಯಲ್ಲಿ ಇಟ್ಟರೆ ದೇಹಕ್ಕೆ ತಂಪು ಕೊಡುತ್ತದೆ. ಹಿಂದಿನ ಕಾಲದಲ್ಲಿ ಇದರ ಉಪಯೋಗ ಬಹಳವಾಗಿತ್ತು ಆದರೆ ಈಗ ಅದನ್ನು ಬಳಕೆ ಮಾಡುವುದು ಕಡಿಮೆಯಾಗಿದೆ.

ಔಷಧ ಗುಣವುಳ್ಳ ಈ ಸಸ್ಯ ಸಾಮಾನ್ಯವಾಗಿ ಎಲ್ಲೋ ರಸ್ತೆ ಬದಿಯಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುತ್ತದೆ. ಹೀಗೆ ಬೆಳೆದಿರುವ ಸಸ್ಯದ ಪ್ರತೀಯೊಂದು ಭಾಗವು ಅತ್ಯಂತ ಸೂಕ್ಷ್ಮ ಮತ್ತು ಅಪಾಯಕಾರಿಯಾಗಿರುವ ಕಾರಣ ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಇದರ ಹಾಲು ತುಂಬಾ ಖಾರವಾಗಿದ್ದು, ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಬೇಕು.

Also Read: ಇಂತಹ ಬಾಟಲಿಗಳಲ್ಲಿ ನೀರು ಕುಡಿದರೆ ಕ್ಯಾನ್ಸರ್ ಕಾಯಿಲೆ ಬರುವುದು ಗ್ಯಾರೆಂಟಿ, ನೀವು ಇದನ್ನು ಬಳಸುತ್ತಿದೀರಾ ಎಚ್ಚರ…!!