ಎಳೆ ಅಷ್ಟಮಿ ಹಬ್ಬದ ವಿಶಿಷ್ಟತೆ ಮತ್ತು ಪೂಜಾ ವಿಧಿ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ..!

0
1064

ಭಾದ್ರಪದ ಶುಕ್ಲ ಜೇಷ್ಠಾ ನಕ್ಷತ್ರದಂದು. ಗ್ರಹಸ್ಥರ ಸೇವೆ. ಹಿಂದಿನ ದಿನ ರಾತ್ರಿ ದೇವರಿಗೆ ಹತ್ತಿಯೇರಿಸಿ, ಪ್ರಸಾದ ರುಪದ ಹತ್ತಿಯಿಂದ ಎಳೆ ತಯಾರಿಸುವುದು. ಎಳೆಗಳ ಪೂಜೆ ಮಾಡಿ ವೃತದಾರಿಗಳಿಗೆ ನೀಡುವುದು. ಶುಕ್ಲ ಸಪ್ತಮಿಯಿಂದ ಪ್ರಾರಂಭಗೊಂಡು ದಶಮಿಯ ಪರ್ಯಂತ ನಡೆಯುವ ಈ ಆರಾಧನೆಯಲ್ಲಿ ಲಕ್ಷ್ಮೀ, ವಿಷ್ಣು, ಕೇದಾರೇಶ್ವರ, ಪಶುಪತಿ, ನವದುರ್ಗಾ, ಧಾನ್ಯ ಶಂಕರಿ ದೇವತೆಗಳನ್ನು ಆರಾಧಿಸಲಾಗುವುದು.

ಪ್ರತಿ ವರ್ಷವೂ ಭಾದ್ರಪದ ಶುದ್ಧ ಅಷ್ಟಮಿ ದಿನ ಹಿಂದೆ ದೇವಸ್ಥಾನಗಳಲ್ಲಿ ಎಳೆ ಗೌರಮ್ಮನನ್ನು ಕೂರಿಸುತ್ತಿದ್ದರು. ಅಷ್ಟಮಿ ದಿನ ರಾತ್ರಿ ಪೂಜೆ ಮಾಡುವುದು ವಾಡಿಕೆ. ನವಮಿಯಂದು ಬೆಳೆಗ್ಗೆ ಅಷ್ಟಮಿ ದೇವಕಾರ್ಯವಿದ್ದ ಮನೆಯವರು ದೇವಸ್ಥಾನಕ್ಕೆ ಹೋಗಿ ಎಳೆತಂದು ದೇವರಿಗೆ ರುದ್ರಾಭಿಷೇಕ ಪೂಜೆ ಮಾಡಿ ಎಳೆಗೆ ಪೂಜೆ ಮಾಡಿ ಬಂದವರಿಗೆಲ್ಲಾ ತೀರ್ಥಪ್ರಸಾದಕೊಟ್ಟು ಕೈಗೆ ಎಳೆ ಕಟ್ಟುವರು. (ಬಂದ ಜನರಿಗೆಲ್ಲಾ ಕಟ್ಟಿ ಎರಡು ಎಳೆ ಉಳಿಯುವಂತೆ ಎಳೆ ತರಬೇಕೆಂಬುವುದು ವಾಡಿಕೆ) ನಂತರ ಬಂದ ನೆಂಟರಿಷ್ಟರಿಗೆಲ್ಲಾ ಹಸ್ತೋದಕ ಹಾಕುವುದು.

source: drikpanchang.com

ಮಹಾಲಕ್ಷ್ಮಿ, ಕೇದಾರೇಶ್ವರ, ಧನ್ಯಶಂಕರ ಮೂರು ದೇವರಿಗೂ ಪೂಜೆ ನೈವೇದ್ಯೆ ಮಹಾಲಕ್ಷ್ಮಿಗೆ ಹುಗ್ಗಿ ನೈವೇದ್ಯೆ, ಕೇದಾರೇಶ್ವರನಿಗೆ ಒಬ್ಬಟ್ಟು, ಗೋಧಿಯಲ್ಲಿ ಮಾಡಿದ ಪದಾರ್ಥ ಧಾನ್ಯ ಶಂಕರನಿಗೆ ಪಾಯಸ ಹೊಸಮಡಿಕೆಗೆ ಸುಣ್ಣದಲ್ಲಿ ದೇವರನ್ನು ಚಿತ್ರಿಸಿ ಅದರ ತುಂಬಾ ಧಾನ್ಯವನ್ನು ತುಂಬಿಟ್ಟು ಪೂಜಿಸುತ್ತಿದ್ದರು.

ಎಳೆಗೌರಿ ಇಟ್ಟ ಮನೆಯಲ್ಲಿ ನಾಲ್ಕು ಬಗೆಯ ಅನ್ನ, ನಾಲ್ಕು ಬಗೆಯ ಕಡುಬು, ಎರಡು ಪಲ್ಯ, ಎರಡು ಕೋಸಂಬರಿ, ತೊವ್ವೆ, ಸಾರು, ಪಾಯಿಸ, ಮಜ್ಜಿಗೆ ಪದಾರ್ಥ ನೈವೇದ್ಯೆ ಮಾಡಬೇಕು. ಈಗ ಇಷ್ಟೆಲ್ಲಾ ಮಾಡಲು ಆಗದ ಕಾರಣ ಮನೆದೇವರಿಗೆ ರುದ್ರಾಭಿಷೇಕ ಪೂಜೆ ಮಾಡಿ ಹುಗ್ಗಿ ಪಾಯಸ ಮಾಡಿ ನೈವೇದ್ಯ ಮಾಡಿ ಇಬ್ಬರಿಗೆ ಹಸ್ತೋದಕ ಹಾಕುವರು.