ಏನಿದು ಬೆಂಗಳೂರಿನಲ್ಲೆಲ್ಲಾ ಹಳದಿ ರೇಖೆಗಳು??

0
1092

ನಿಮಗೆ ಬೆಂಗಳೂರಿನಲ್ಲಿ ಹಳದಿ (yellow) ಬಣ್ಣದ ಜಿಗ್ ಜಾಗ್ ರೇಖೆಗಳು ಆಕರ್ಷಿಸುತ್ತವೆ. ಅದು ಸಹ ರಸ್ತೆಯ ಮಧ್ಯದಲ್ಲಿ ಇವುಗಳು ಜನರ ಕೇಂದ್ರವನ್ನು ಸೆಳೆಯುತ್ತವೆ. ಹಾಗಿದ್ದರೆ ಈ ಚೌಕ್, ಚೌಕ್ (puzzl) ಹಾಕಲುಕಾರಣವೇನು ಎಂಬುದರ ವಿವರಣೆ ಇಲ್ಲಿದೆ.

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. ಇದನ್ನುನಿಯಂತ್ರಿಸುವ ಉದ್ದೇಶದಿಂದ ಹೊಸ ವ್ಯವಸ್ತೆ ಅಳವಡಿಸಿ ಕೊಳ್ಳಲಾಗುತ್ತಿದೆ.

ಎಂ.ಜಿ.ರಸ್ತೆ, ಕಾರ್ಲ್‌ಟನ್‌ ಭವನ, ಹೈಗ್ರೌಂಡ್ಸ್‌ ರಸ್ತೆ, ಶಿವಾನಂದ ವೃತ್ತದಲ್ಲಿ‘ಕ್ರಿಸ್‌ ಕ್ರಾಸ್‌’ ಹಾಗೂ ‘ಜಿಗ್‌–ಜಾಗ್‌’ ಎಂಬ ಎರಡು ಬಗೆಯ ಗುರುತುಗಳನ್ನುಹಾಕಲಾಗಿದೆ.

ಜಿಬ್ರಾ ಕ್ರಾಸ್ ಬಾಕ್ಸ್ ನಿಂದ ಹಳದಿ ಬಣ್ಣದ ಗೆರೆಗಳನ್ನು ಚೌಕ್ ಚೌಕ್ ಆಗಿಎಳೆಯಲಾಗಿದ್ದು, ಇವುಗಳು ಹಳದಿ ಬಣ್ಣದಿಂದ ಕೂಡಿವೆ. ಈ ವೃತ್ತಕ್ಕೆಬರುವ ವಾಹನಗಳು ಹಸಿರು (green) ಸಿಗ್ನಲ್ ಹತ್ತಿದ್ದಾಗ ಮಾತ್ರ ಈ ಗುರುತುದಾಟಬಹುದಾಗಿದೆ.

ಎಂ.ಜಿ.ರಸ್ತೆ, ಕಾರ್ಲ್‌ಟನ್‌ ಭವನ, ಹೈಗ್ರೌಂಡ್ಸ್‌ ರಸ್ತೆ, ಶಿವಾನಂದ ವೃತ್ತದಲ್ಲಿಸದ್ಯ ನೂತನ ವ್ಯವಸ್ಥೆ ಕಲ್ಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಇವುಗಳಸಂಖ್ಯೆ ಹೆಚ್ಚಿಸಲಾಗುವುದು.

ಪೊಲೀಸರು ನೀಡಿದ ಮಾಹಿತಿಯಂತೆ ಕೆಂಪು ದೀಪ ಹತ್ತಿಕೊಂಡ ವೇಳೆವಾಹನಗಳು ಹಳದಿ ಬಾಕ್ಸ್ ನಲ್ಲಿ ನಿಂತಿದ್ದರೆ ಮಾಲೀಕರು ದಂಡತೆರಬೇಕಾಗುತ್ತದೆ.

ಕೆಲವು ಪ್ರದೇಶದ ವಾಹನ ಸವಾರರು ಜಿಗ್ ಜಾಗ್ ಲೈನ್ ಇರುವುದನ್ನೇನೋಡದೆ, ವಾಹನ ಚಲಾಯಿಸುತ್ತಾರೆ. ಇದರಿಂದ ರಸ್ತೆ ದಾಟುವಪಾದಚಾರಿಗಳಿಗೆ ತೊಂದರೆ ಆಗುವದನ್ನು ಮನಗೊಂಡು ಈ ತೀರ್ಮಾನಕೈಗೊಳ್ಳಲಾಗಿದೆ. ಸದ್ಯ ಬೆಂಗಳೂರಿನಲ್ಲಿ 11 ಕಡೆಗಳಲ್ಲಿ ಈ ವ್ಯವಸ್ಥೆಅಳವಡಿಸಲಾಗಿದೆ. ಇನ್ನು 100 ಜಂಕ್ಷನ್ ಗಳಲ್ಲಿ ಈ ವ್ಯವಸ್ಥೆ ಅಳವಡಿಸುವಗುರಿ ಹೊಂದಲಾಗಿದೆ.

ಕಳೆದ ಶನಿವಾರ ಬೆಂಗಳೂರಿನಲ್ಲಿ ಸುಮಾರು 1800ಕ್ಕೂ ಹೆಚ್ಚು ಸಂಚಾರನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹೆಚ್ಚಾಗಿದ್ವಿಚಕ್ರವಾಹನ ಸವಾರರೆ ಹೆಚ್ಚು. ನಗರದಲ್ಲಿ ಹೆಚ್ಚಾಗಿ ಟ್ರಾಫಿಕ್ಸಮಸ್ಯೆಯಿದ್ದು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದುಪೊಲೀಸರು ತಿಳಿಸಿದ್ದಾರೆ.