ಈ ಎಂಟು ಯೋಗ ಮುದ್ರೆಗಳನ್ನ ಅಭ್ಯಾಸ ಮಾಡ್ತಾ ಬನ್ನಿ, ನಿಮ್ಮ ದೇಹದಲ್ಲಿ ಶಕ್ತಿ ಮತ್ತೆ ಆರೋಗ್ಯ ಎರಡೂ ವೃದ್ಧಿಯಾಗಿ ಸಂತೋಷದಿಂದ ಇರುತ್ತೀರಿ!!

0
13387

ಮುದ್ರೆಗಳು ಎಂಬುವ ಕೈ ಸನ್ನೆಗಳಾಗಿವೆ ಇವುಗಳಿಂದ ದೇಹದಲ್ಲಿ ಶಕ್ತಿ ಸಂಚಾರವಾಗುತ್ತದೆ.

ಈ 8 ಮುದ್ರೆಗಳನ್ನು ಅಭ್ಯಾಸ ಮಾಡಿ ಹಾಗು ರೋಗ ಮುಕ್ತರಾಗಿ.

೧.ಜ್ಞಾನ ಮುದ್ರೆ :
ಇದು ಜ್ಞಾನಕ್ಕೆ ಸಂಭಂದಿಸಿದ ಮುದ್ರೆಯಾಗಿದೆ, ಈ ಮುದ್ರೆ ಅಭ್ಯಾಸ ಮಾಡುವುದರಿಂದ ನಿಮ್ಮ ಜ್ಞಾನ ವೃದ್ಧಿಯಾಗಿ, ನೆನಪಿನಶಕ್ತಿ ಮತ್ತು ಏಕಾಗ್ರತೆ ಹೆಚ್ಚಗಾಗುತ್ತದೆ.

೨.ವಾಯು ಮುದ್ರೆ :
ಇದು ಗಾಳಿಗೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಹೆಚ್ಚಿನ ಹಾಗು ಕೆಟ್ಟ ವಾಯುವನ್ನು ಬಿಡುಗಡೆಮಾಡಲು ಸಹಾಯಮಾಡುತ್ತದೆ.

೩.ಪ್ರಿಥ್ವಿ ಮುದ್ರೆ :
ಇದು ಭೂಮಿಗೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ, ನಿಶಕ್ತಿಯನ್ನು ದೂರ ಮಾಡಿ ಸದಾ ಚಟುವಟಿಗೆಯಿಂದಿರಲು ಸಹಾಯ ಮಾಡುತ್ತದೆ.

೪.ಅಗ್ನಿ ಮುದ್ರೆ :
ಇದು ಅಗ್ನಿ ಅಥವಾ ಬೆಂಕಿಗೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ಥೈರಾಯ್ಡ್ ಗ್ರಂಥಿ ಚೆನ್ನಾಗಿ ಕೆಲಸಮಾಡಲು, ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುವುದಲ್ಲದೆ ನಿಮ್ಮ ಆತಂಕವನ್ನು ದೂರಮಾಡುತ್ತದೆ.

೫.ವರುಣ ಮುದ್ರೆ :
ಇದು ನೀರಿಗೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ದ್ರವಗಳನ್ನು ನಿಯಂತ್ರಿಸಿ ನಿಮ್ಮ ಚರ್ಮದ ಆರೋಗ್ಯಕ್ಕೆ ತುಂಬ ಸಹಾಯಮಾಡುತ್ತದೆ.

೬.ಶೂನ್ಯ ಮುದ್ರೆ :
ಈ ಮುದ್ರೆ ಅಭ್ಯಾಸ ಮಾಡುವುದರಿಂದ ವಿಶೇಷವಾಗಿ ನಿಮ್ಮ ಕೇಳುವ ಶಕ್ತಿ ವೃದ್ಧಿಸುತ್ತದೆ. ಈ ಮುದ್ರೆ ಕಿವುಡುತನದಿಂದ ಬಳಲುತ್ತಿರುವವರಿಗೆ ತುಂಬ ಸಹಕಾರಿ.

೭.ಪ್ರಾಣ ಮುದ್ರೆ :
ಇದು ಜೀವಕ್ಕೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದಣಿವಾರಿಸಿ ದೇಹದಲ್ಲಿರುವ ಶಕ್ತಿಯನ್ನು ಸಮತೋಲನದಲ್ಲಿಡುತ್ತದೆ.

೮.ಅಪನು ವ್ಯ ಮುದ್ರೆ :
ಇದು ಹೃದಯಕ್ಕೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಹೃದಯವನ್ನು ಸದೃಢ ಗೊಳಿಸುತ್ತದೆ. ಈ ಮುದ್ರೆ ವಿಶೇಷವಾಗಿ ಹೃದಯಕ್ಕೆ ಸಂಭಂದಿಸಿದ ಕಾಯಿಲೆಗಳಿಂದ ನರಳುತ್ತಿರುವವರಿಗೆ ಸಹಕಾರಿಯಾಗುತ್ತದೆ.