ನೀವು ಕಳೆದುಕೊಂಡ ಪರ್ಸ್’ ಗಳು Post Box’ ಗಳಲ್ಲಿ ಪತ್ತೆಯಾಗುತ್ತಿವೆ! ಪರ್ಸ್ ಕಳೆದುಕೊಂಡವರು Post office-ಅಲ್ಲಿ ವಿಚಾರಿಸಿ ನೋಡಿ..

0
401

ಕಳ್ಳರ ಕರಾಮತ್ತು ದಿನದಿಂದ ದಿನಕ್ಕೆ ವಿಚಿತ್ರವಾಗುತ್ತಿದೆ ಮೊದಲು ಕದ್ದ ವಸ್ತುಗಳಲ್ಲಿರುವ ಹಣ ಒಡವೆಯನ್ನು ಕಿತ್ತುಕೊಂಡು ಬ್ಯಾಗ್, ಪರ್ಸ್-ಗಳನ್ನ ಯಾವುದೋ ಕೆರೆ ಬಾವಿಯಲ್ಲಿ ಎಸೆದು ಹೋಗುತ್ತಿದ್ದರು, ಈಗ ಯಾಕೋ ಏನೋ ಕಳ್ಳರಿಗೂ ಮಾನವಿತೆ ಬಂದಿದೆಯೋ! ಇಲ್ಲ ಪೊಲೀಸ್-ರಿಗೆ ಸಿಗುವ ಭಯದಿಂದ ತಾವು ಕದ್ದ ವಸ್ತುಗಳನ್ನು ಏನೇನು ಮಾಡುತ್ತಿದ್ದಾರೆ ಅಂತ ಕೇಳಿದ್ರೆ ನಿಮ್ಮಗೆ ಆಶ್ಚರ್ಯವಾಗುತ್ತೆ.

Also read: #MeToo ಅಭಿಯಾನ: ಲೈಂಗಿಕ ಕಿರುಕುಳದ ಗಂಭೀರ ಆರೋಪ ಎದುರಿಸುತ್ತಿರುವ ಕೇಂದ್ರ ಮಂತ್ರಿ ಎಂ.ಜೆ.ಅಕ್ಬರ್-ರವರಿಂದ ಮೋದಿ ರಾಜಿನಾಮೆ ಕೇಳಬೇಕಲ್ಲವೇ??

ಹೌದು ಹಿಂದೊಂದು ಕಾಲವಿತ್ತು. ಪೋಸ್ಟ್​ಮ್ಯಾನ್​ನ ಸೈಕಲ್​ ಬೆಲ್​ ಶಬ್ದ ಕೇಳಿತೆಂದರೆ ಒಳಗೆಲ್ಲೋ ಕುಳಿತಿದ್ದವರ ಕಿವಿಗಳು ನೆಟ್ಟಗಾಗುತ್ತಿತ್ತು. ಯಾಕೆಂದರೆ ಪ್ರತಿಯೊಬ್ಬರೂ ಪೋಸ್ಟ್ ಮಾಡುವ ಕಾಲವಿತ್ತು ಆದ ಕಾರಣ ಯಾವುದೋ ಊರಿನ ಸುದ್ದಿಯನ್ನು, ಹೊತ್ತುತರುವ ಪೋಸ್ಟ್​ಮ್ಯಾನ್​, ಅಲ್ಲಲ್ಲಿ ನೆಟ್ಟಗೆ ಕುಳಿತಿರುವ ಕೆಂಪು ಪೋಸ್ಟ್​ ಡಬ್ಬಿಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ, ಈಗೀಗ ಫ್ಯಾಕ್ಸ್​, ಇ-ಮೇಲ್​, ವಾಟ್ಸಾಪ್​ಗಳು ಬಂದಮೇಲೆ ಪತ್ರ ಬರೆಯುವವರೇ ಕಡಿಮೆಯಾಗಿದ್ದಾರೆ. ಯಾವುದಾದರೂ ಪ್ರಮುಖವಾದ ದಾಖಲೆ, ಆರ್ಡರ್​ಗಳು ಬರುವುದಾದರೂ ಕೊರಿಯರ್​ ಮೂಲಕ ಬರುವುದರಿಂದ ಪೋಸ್ಟ್​ ಆಫೀಸ್​ಗಳತ್ತ ಮುಖ ಮಾಡುವವರೇ ಇಲ್ಲದಂತಾಗಿದೆ ಎನ್ನಬಹುದು. ಇಂತಹ ದಿನಗಳಲ್ಲಿ ಚೆನ್ನೈನ ಪೋಸ್ಟ್​ ಬಾಕ್ಸ್​ಗಳು ಮಾತ್ರ ತುಂಬಿರುತ್ತೆವಂತೆ ಇದೊಂದು ರೋಚಕ ಅಲ್ಲವೇ?

ಏನಿದು ಸ್ಟೋರಿ?

Also read: ನೀವು ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೆ, ನಾವು 10 ಅಂತಹ ದಾಳಿ ಮಾಡುತ್ತೀವಿ; ಭಾರತಕ್ಕೆ ಪಾಕ್-ನ ಎಚ್ಚರಿಕೆ!!

ಚೆನ್ನೈನಲ್ಲಿ ಇತ್ತೀಚೆಗೆ ಪಿಕ್​ಪಾಕೆಟ್​ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗೆ ಕದ್ದ ಪರ್ಸ್​ಗಳಲ್ಲಿರುವ ದುಡ್ಡನ್ನು ಎತ್ತಿಕೊಳ್ಳುವ ಕಳ್ಳರು ಆ ಪರ್ಸ್​ಗಳನ್ನು ಕಂಡಕಂಡಲ್ಲಿ ಎಸೆದರೆ ಯಾರಿಗಾದರೂ ಗೊತ್ತಾಗುತ್ತದೆ ಎಂದು ಅಂಚೆ​ ಡಬ್ಬಿಗಳಲ್ಲಿ ಹಾಕಿಹೋಗುತ್ತಾರಂತೆ. ಹೀಗೆ ಖಾಲಿ ಅಂಚೆ ಡಬ್ಬಿಗಳಲ್ಲಿ ಬಿಸಾಡಿದ ಪರ್ಸ್​ಗಳಲ್ಲಿ ಅನೇಕರ ಐಡಿ ಕಾರ್ಡ್​ಗಳು ಕೂಡ ಸಿಕ್ಕಿವೆಯಂತೆ. ಕಳೆದ 6 ತಿಂಗಳಿಂದ ಅಂಚೆ ಡಬ್ಬಿಗಳನ್ನು ಪರಿಶೀಲಿಸುತ್ತಿರುವ ಅಂಚೆ ಇಲಾಖೆ ಈ ಸಂಗತಿಯನ್ನು ಹೊರಹಾಕಿದೆ. ಪೋಸ್ಟ್​ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ ಪೋಸ್ಟ್​ ಡಬ್ಬಿಗಳ ಬೀಗ ತೆಗೆದು ನೋಡುವ ರೂಢಿಯನ್ನೂ ಪೋಸ್ಟ್​ಮ್ಯಾನ್​ಗಳು ಬಿಟ್ಟಿದ್ದಾರೆ. ಆದರೆ, ಇತ್ತೀಚೆಗೆ ಚೆನ್ನೈನ ಪೋಸ್ಟ್​ ಡಬ್ಬಿಗಳನ್ನು ತೆಗೆದುನೋಡಿದಾಗ. ಸಾವಿರಾರು ಪರ್ಸ್ ಸಿಕ್ಕಿದು. ಕಳೆದ 6 ತಿಂಗಳ ಇತ್ತೀಚೆಗೆ ಈ ರೀತಿಯ 70 ಪ್ರಕರಣಗಳು ಪತ್ತೆಯಾಗಿವೆ.

Also read: ಸಂಸದ್ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಮೋದಿ ಸರ್ಕಾರದ ಮಂತ್ರಿಗಳ ಗ್ರಾಮಗಳ ಸ್ಥಿತಿ ಸಂಪೂರ್ಣ ಹಾಳಾಗಿವೆ..

ಇನ್ನೂ ಇಲ್ಲಿ ಸಿಕ್ಕಿದ ಪರ್ಸ್​ಗಳಲ್ಲಿ ಅಂಚೆ ಇಲಾಖೆ ಸಿಬ್ಬಂದಿಗೆ ಆಧಾರ್​ ಕಾರ್ಡ್​, ಪಾನ್​ ಕಾರ್ಡ್​, ಡ್ರೈವಿಂಗ್​ ಲೈಸೆನ್ಸ್​ ಸೇರಿದಂತೆ ಮುಖ್ಯ ಐಡಿ ಕಾರ್ಡ್​ಗಳು ಕೂಡ ಸಿಕ್ಕಿವೆ. ದುಡ್ಡು ತೆಗೆದುಕೊಂಡ ಕಳ್ಳರು ಆ ಕಾರ್ಡ್​ಗಳಾದರೂ ಸಂಬಂಧಪಟ್ಟವರಿಗೆ ಪೋಸ್ಟ್​ ಮೂಲಕ ಸೇರಲಿ ಎಂಬ ಉದ್ದೇಶದಿಂದಲೂ ಈ ಪೋಸ್ಟ್​ ಡಬ್ಬಿಗಳೊಳಗೆ ಹಾಕಿರುವ ಸಾಧ್ಯತೆಯೂ ಇರಬಹುದು ಎಂಬ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಫೋನ್​ ನಂಬರ್​ ಇರುವ ಐಡಿ ಕಾರ್ಡ್​ ಸಿಕ್ಕಿರುವ ಪರ್ಸ್​ಗಳನ್ನು ಸಂಬಂಧಿಸಿದವರಿಗೆ ತಲುಪಿಸುವ ಉದ್ದೇಶದಿಂದ ಅವರಿಗೆ ಫೋನ್​ ಮಾಡಿ ಕಳೆದ ದಾಖಲಾತಿಗಳು ತೆಗೆದುಕೊಂಡು ಹೋಗುವಂತೆ ಪೋಸ್ಟ್​ ಆಫೀಸ್​ ಸಿಬ್ಬಂದಿ ಮಾಹಿತಿ ತಿಳಿಸುತ್ತಿದ್ದಾರೆ. ಇನ್ನೂ ಫೋನ್​ ನಂಬರ್​ ಇಲ್ಲದ ಐಡಿ ಕಾರ್ಡ್​ಗಳನ್ನು ಅದರಲ್ಲಿರುವ ವಿಳಾಸಕ್ಕೆ ಸಿಬ್ಬಂದಿಯೇ ಕಳುಹಿಸುತ್ತಿದ್ದಾರೆ. ಒಟ್ಟಾರೆಯಾಗಿ; ಈ ಹಿಂದೆ ಪೋಸ್ಟ್​ ಡಬ್ಬಿಗಳು ಬೇರೆ ಕಾರಣಕ್ಕೆ ಬಳಕೆಯಾಗುತ್ತಿವೆ ಎಂಬ ಸುದ್ದಿಯು ದೇಶದ್ಯಾದಂತ ಹರಡಿತ್ತು ಆದರೆ ಅದು ಯಾವುದಕ್ಕೆ ಬಳಕೆ ಯಾಗುತ್ತಿದೆ ಎಂಬುದು ಮಾತ್ರ ತಿಳಿದಿರಲಿಲ್ಲ. ಈಗ ಬೆಳಕಿಗೆ ಬಂದ ಚೆನ್ನೈನ ಪ್ರಕರಣದಿಂದ ಸತ್ಯ ಹೊರಬಿದಿದೆ. ನೀವು ನಿಮ್ಮ ಪರ್ಸ್ ಕಳೆದುಕೊಂಡರೆ ಪೋಸ್ಟ್ ಆಫೀಸ್ ನಲ್ಲಿ ವಿಚಾರಿಸುವುದು ಒಳ್ಳೆಯದು.