ಆರೋಗ್ಯದ ದೃಷ್ಟಿಯಿಂದ ನೀವು ಕುಡಿಯುತ್ತಿರುವ ಪ್ಯಾಕೆಟ್ ಹಾಲು ಹಾಲಲ್ಲ; ಅದು ಬೆಳ್ಳಗಿರುವ ವಿಷ..

0
1167

ಬೆಳ್ಳಗಿರುವುದೆಲ್ಲಾ ಹಾಲಲ್ಲ: ನೀವು ಕುಡಿಯುತ್ತಿರುವುದು ರಾಸಾಯನಿಕ ವಿಷ..!

ಹಾಲು ಕೈಗೆ ಸಿಗುವ ಅಮೃತವೆಂದು ಕೇಳುತ್ತಾರೆ ಏಕೆಂದರೆ ಅದರಲ್ಲಿರುವ ಶಕ್ತಿಯ ಗುಣಗಳು ಮತ್ತು ಆರೋಗ್ಯಕ್ಕೆ ಬೇಕಾದ ಕ್ಯಾಲ್ಶಿಯಂ ಸಿಗುತ್ತದೆ ಎಂದು ಹೆಚ್ಚು ಹೆಚ್ಚು ಹಾಲನ್ನು ಕುಡಿಯಲು ಹೇಳುತ್ತಾರೆ. ಆದರೆ ಈಗೀಗ ಬರುತ್ತಿರುವ ಪ್ಯಾಕೆಟ್ ಹಾಲನ್ನು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಹಾಲು ಸೇವಿಸುವುದರಿಂದ ಎಷ್ಟೊಂದು ಪ್ರಯೋಜನವಿದೆ ಎಂದು ಯಾರು ತಿಳಿದಿದಲ್ಲ.
ಹೌದು ನಗರ ಪ್ರದೇಶಗಳಿಗೆ ಬರುತ್ತಿರುವ ಪ್ಯಾಕೆಟ್ ಹಾಲನ್ನು ಕೃತಕವಾಗಿ ತಯಾರಿಸುತ್ತಿದು ಅದರಲ್ಲಿ ವಿಷಕಾರಕ ಅಂಶಗಳು ಇವೆ. ಮೇಲ್ನೋಟಕ್ಕೆ ಶುದ್ಧ ಹಾಲಿನಂತೆ ಕಾಣುವ ಇಂತಹ ಹಾಲನ್ನು ಕುಡಿದರೆ ವಿಷ ಕುಡಿದಂತೆನೆ. ಅಷ್ಟೊಂದು ಕಲಬೆರೆಕೆ ಮಾಡುತ್ತಿದು ಮುಂದೊಂದು ದಿನ ಹಾಲು ಸೇವಿಸುವರು ಅಪಾಯಕ್ಕೆ ಒಳಗಾಗುವುದು ಗ್ಯಾರಂಟಿ.


Also read: ಪೂರ್ವಜರ ಕಾಲದಿಂದ ಪುಜಿಸುತ್ತ ಬಂದಿರುವ ರುದ್ರಾಕ್ಷಿಯಲ್ಲಿರುವ ಔಷಧಿಯ ಗುಣಗಳು ಗೊತ್ತಾದ್ರೆ ಇಗಲೇ ರುದ್ರಾಕ್ಷಿ ಹುಡುಕುತ್ತಿರ.

ಹೇಗೆ ತಯಾರಾಗುತ್ತೆ ಈ ಹಾಲು:

ಕಲಬೆರಕೆ ಹಾಲು ತಯಾರಿಸಲು 100 ಲೀಟರ್ ನೀರಿಗೆ 5 ಕೆ.ಜಿ ಯೂರಿಯಾವನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕ ಸೇರಿಸಿದರೆ ನೀರಿನ ಬಣ್ಣವು ಹಾಲಿನಂತೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದಾದ ಬಳಿಕ ಹಾಲಿನಂತೆ ನೊರೆ ಮೂಡಿಸಲು 250 ಗ್ರಾಂ ನಾವು ಬಟ್ಟೆ ಹೊಗೆಯಲು ಬಳಸುವ ವಾಷಿಂಗ್ ಪೌಡರ್​ನ್ನು ಮಿಶ್ರಣ ಮಾಡುತ್ತಾರೆ. ಇದಕ್ಕೆ ರಿಫೈಂಡ್ ಎಣ್ಣೆಯನ್ನು ಬೆರೆಸಿದಾಗ ಈ ನೀರು ಹಾಲಿನಂತೆ ನಯವಾಗುತ್ತದೆ. ಇದಕ್ಕೆ ಹಾಲಿನ ವಾಸನೆಯನ್ನು ಸೃಷ್ಟಿಸಲು ಬಿಳಿ ರಾಸಾಯನಿಕ ಪೌಂಡರ್​ನ್ನು ಮಿಶ್ರಣಗೊಳಿಸುತ್ತಾರೆ. ಇಷ್ಟನ್ನು ಮಿಶ್ರಣಗೊಳಿಸಿದರೆ ಇದು ಅಸಲಿ ಹಾಲಿನ ರೂಪವನ್ನು ಪಡೆಯುತ್ತದೆ. ಹೀಗೆ ತಯಾರಿಸಿದ 40 ಲೀಟರ್​ ನಕಲಿ ಹಾಲನ್ನು 60 ಲೀಟರ್​ ಅಸಲಿ ಹಾಲಿಗೆ ಸೇರಿಸಲಾಗುತ್ತದೆ. ಇದರಿಂದ ನಿಮಗೆ ಯಾವುದೇ ರೀತಿಯ ಸಂಶಯ ಮೂಡುವುದಿಲ್ಲ.


Also read: ಹಣೆಗೆ ಹಚ್ಚುವ ಕುಂಕುಮದಲ್ಲಿ ವಿಷದ ಅಂಶ ಪತ್ತೆ; ಕೃತಕ ಕುಂಕುಮದಿಂದ ಮಾರಕ ರೋಗಗಳು ಬರುವ ಸಾಧ್ಯತೆ..

ವಿಷದ ಹಾಲನ್ನು ಪತ್ತೆ ಹಚ್ಚುವುದು ಹೇಗೆ?

    • ಇಲ್ಲಿ ಶುದ್ಧ ಹಾಲಿಗೆ ನಕಲಿ ಹಾಲನ್ನು ಬೆರೆಸುವುದರಿಂದ ಮೇಲ್ನೋಟಕ್ಕೆ ಶುದ್ದ ಹಾಲು ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ನೀವು ಖರೀದಿಸಿದ ಹಾಲನ್ನು ಕೆಲ ಸುಲಭ ವಿಧಾನಗಳ ಮೂಲಕ ಮನೆಯಲ್ಲೇ ಪತ್ತೆ ಹಚ್ಚಬಹುದು. ಇದಕ್ಕಾಗಿ ಯಾವುದೇ ಪ್ರಯೋಗಾಲಯದ ಅವಶ್ಯಕತೆ ಮತ್ತು ಹೆಚ್ಚಿನ ಖರ್ಚು ಮಾಡಬೇಕಾಗಿಲ್ಲ. ನೀವು ಹಾಲಿನ ಪರಿಶುದ್ಧತೆಯನ್ನು ಪರೀಕ್ಷಿಸಿಕೊಳ್ಳಲು ಮಾಡಬೇಕಿರುವುದು ಇಷ್ಟೇ..
    • ಮೃದುವಾದ ಮೈಮೇಲೆ ಹಾಲಿನ ಕೆಲ ಹನಿಗಳನ್ನು ಹಾಕಿ. ಈ ಹಾಲಿನ ಹನಿಗಳನ್ನು ಹಾಕಿದ ಜಾಗದಲ್ಲಿ ಬಿಳಿಯ ಗುರುತುಗಳು ಕಂಡು ಬಂದರೆ ಅದು ಶುದ್ಧ ಹಾಲು, ಕಲೆ ಮೂಡಿಸದಿದ್ದರೆ ಅದನ್ನು ಕಲಬೆರಕೆ ಹಾಲು ಎಂದು ಪರಿಗಣಿಸಿ.
    • ಹಾಲಿನಲ್ಲಿರುವ ಸ್ಟಾರ್ಚ್​ ಪತ್ತೆ ಮಾಡಲು ನೀವು ಅಯೋಡಿನ್ ಹನಿಗಳನ್ನು ಹಾಲಿಗೆ ಹಾಕಿ. ಕೆಲವು ನಿಮಿಷಗಳಲ್ಲಿ ಹಾಲು ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಸ್ಟಾರ್ಚ್ ಮಿಶ್ರಣ ಮಾಡಲಾಗಿದೆ ಎಂದರ್ಥ.
    • ಒಂದು ಟ್ಯೂಬ್​ನಲ್ಲಿ ಒಂದು ಚಮಚದಷ್ಟು ಹಾಲು ತೆಗೆದುಕೊಳ್ಳಿ. ಅದಕ್ಕೆ ಸೋಯಾಬೀನ್ ಪುಡಿ ಅಥವಾ ಆಹಾರ ಪುಡಿಗಳನ್ನು ಸೇರಿಸಿ ಚೆನ್ನಾಗಿ ಅಲ್ಲಾಡಿಸಿ. ಐದು ನಿಮಿಷದ ನಂತರ ಅದರಲ್ಲಿ ಕೆಂಪು ಲಿಟ್ಮಸ್ ಪೇಪರ್​ನ್ನು ಅದ್ದಿ. ಅರ್ಧ ನಿಮಿಷದ ನಂತರ ಪೇಪರ್ ತೆಗೆದಾಗ ಕಾಗದದ ಬಣ್ಣ ನೀಲಿ ವರ್ಣಕ್ಕೆ ತಿರುಗಿದರೆ ಅದರಲ್ಲಿ ಯೂರಿಯಾದ ಅಂಶ ಇದೆ ಎಂದರ್ಥ.
    • ಹಾಲಿನಲ್ಲಿ ಫಾರ್ಮಾಲಿನ್ ಅಂಶವಿದೆಯೇ ಎಂಬುದನ್ನು ತಿಳಿಯಲು 10 ಮಿ.ಲೀಟರ್​ ಹಾಲಿಗೆ 5 ಮಿ.ಲೀ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸಿ. ಹಾಲಿನ ಬಣ್ಣವು ಕೆನ್ನೇರಳೆ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಫಾರ್ಮಾಲಿನ್​ನ್ನು ಸೇರಿಸಲಾಗಿದೆ ಎಂದರ್ಥ. ಈ ರಾಸಾಯನಿಕವನ್ನು ಹಾಲು ಕೆಡದಂತೆ ಇಡಲು ಬಳಸಲಾಗುತ್ತದೆ.ಅತಿ

ಸುಲಭ ವಿಧಾನ:


Also read: ದೇವರಿಗೆ ಭಕ್ತಿಯಿಂದ ಹಚ್ಚೋ ಅಗರಬತ್ತಿ ಯಿಂದ ಆರೋಗ್ಯಕ್ಕೆ ಹಾನಿಕಾರಕ, ಬೆಚ್ಚಿ ಬೀಳಿಸುವ ಸಂಗತಿ; ನೀವು ಓದಲೇ ಬೇಕು!

ಮಿಲ್ಕ್ ಟೆಸ್ಟಿಂಗ್ ಕಿಟ್: ಹರಿಯಾಣದ ಕರ್ನಾಲ್​ನ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಲಿನ ಗುಣಮಟ್ಟವನ್ನು ಪರೀಕ್ಷಿಸುವ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಹಾಲಿನಲ್ಲಿರುವ ಡಿಟರ್ಜೆಂಟ್ ಅಂಶವನ್ನು ಪತ್ತೆಹಚ್ಚಲು ಇದು ತುಂಬಾ ಸಹಾಯಕಾರಿ. ಕೇವಲ 3 ರೂಪಾಯಿಗಳಲ್ಲಿ ಸಿಗುತ್ತಿರುವ ಈ ಉಪಕರಣದಿಂದ ದೊಡ್ಡ ಅಪಾಯದಿಂದ ಪಾರಾಗಬಹುದು. ಅನೇಕ ಖಾಸಗಿ ಕಂಪನಿಗಳು ಕೂಡ 50 ರೂ.ನಲ್ಲಿ ಹಾಲಿನ ಗುಣಮಟ್ಟ ಪರೀಕ್ಷಿಸುವ ಸಾಧನಗಳನ್ನು ಕಂಡು ಹಿಡಿದು ಮಾರಾಟ ಮಾಡುತ್ತಿವೆ ಅಂತವುಗಳನ್ನು ಖರೀದಿಸಿ ಮನೆಯಲ್ಲಿಯೇ ಹಾಲಿನ ಗುಣಮಟ್ಟ ಪರೀಕ್ಷಿಸಿ ಉಪಯೋಗ ಮಾಡುವುದು ಒಳ್ಳೆಯದು.