ATM ಮಷೀನ್ ಮೂಲಕ ಇಷ್ಟೊಂದೆಲ್ಲ ವ್ಯವಹಾರ ಮಾಡಬಹುದೆಂದು ನೀವು ಊಹಿಸಿರಲೇ ಇಲ್ಲ!!

0
791


1. ಮೊದಲೆಲ್ಲಾ ಎಟಿಎಮ್ ಗಳನ್ನು ಹಣವನ್ನು ಪಡೆಯಲು ಮಾತ್ರ ಬಳಕೆ ಮಾಡ್ತಾ ಇದ್ದರು. ಆದ್ರೆ ಈಗ ಇದರ ಉಪಯೋಗ ಬಹಪಯೋಗಿ ಆಗಿದೆ. ಹಾಗಿದ್ರೆ ನೀವು ಎಟಿಎಮ್ ಮಶೀನ್‌ಗಳು ಏನೆಲ್ಲಾ ಕೆಲಸವನ್ನು ಮಾಡುತ್ತವೆ ಎನ್ನುವುದನ್ನು ತಿಳಿದ್ರೆ ಅಚ್ಚರಿ ಎನಿಸದೆ ಇರದು.

2. ಎಟಿಎಮ್‌ಗಳಲ್ಲಿ ಹಣ ಪಡೆಯುವುದು ಎಲ್ಲರಿಗೂ ಗೊತ್ತೆ ಇದೆ. ನೋಟ್ ನಿಷೇಧದ ಬಳಿಕ ಎಟಿಎಮ್ ಕೇಂದ್ರಗಳಿಂದ ಒಂದು ಬಾರಿ ಅಥವಾ ವಾರಕ್ಕೆ ೫೦ ಸಾವಿರ ಡ್ರಾ ಮಾಡಬಹುದು.

3. ಮೊದಲೆಲ್ಲಾ ನಿಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲು ಬ್ಯಾಂಕ್‌ಗೆ ಹೋಗಬೇಕಿತ್ತು. ಆದ್ರೆ ಈಗ ಎಟಿಎಮ್‌ಗಳಲ್ಲಿ ಇದರ ಸೇವೆ ಲಭ್ಯ.

4. ಹಣವನ್ನು ತಮ್ಮ ಬ್ಯಾಂಕ್‌ನಿಂದ ವರ‍್ಗಾವಣೆ ಮಾಡಲು ಸಹ ಸಹಾಯಕ. ಹಣ ಕಳುಹಿಸಲು ಡೆಬಿಟ್ ಕಾರ್ಡ್ನ ೧೬ ಅಂಕಿ ನಂಬರ್ ಹಾಕಿ ೫೦೦೦ ರಿಂದ ೪೯ ಸಾವಿರದ ವರೆಗೆ ಹಣ ಕಳುಹಿಸಬಹುದು.

5. ನಿಮ್ಮ ಖಾತೆಯಲ್ಲಿನ ಮಿನಿ ಸ್ಟೇಟ್ಮೆಂಟ್ ಪಡೆಯಲು

6. ಡೆಬಿಟ್ ಕಾರ್ಡ್ನ ೪ ಡಿಜಿಟ್ ನಂಬರ್ ಬದಲಾವಣೆ ಮಾಡಬಹುದು.

7. ಇನ್ನು ಬ್ಯಾಂಕ್ ಗ್ರಾಹಕರು ಎಟಿಎಮ್ ಬಳಸಿ ಸ್ಥಿರ ಠೇವಣೆ ಮಾಡಬಹದು. ಗ್ರಹಾಕ ಗರಿಷ್ಠ ೪೯ ಸಾವಿರ ರೂಪಾಯಿ ವರೆಗೂ ಡಿಪಾಸಿಟ್ ಮಾಡಬಹುದು.

8. ಎಟಿಎಮ್ ಮೂಲಕವೇ ಕೆಲವು ಖಾಸಗಿ ಬ್ಯಾಂಕ್‌ಗಳಲ್ಲಿ ಮ್ಯೂಚವಲ್ ಫಂಡ್, ಎಲ್‌ಐಸಿ ಪ್ರೀಮಿಯಂ ಪಾವತಿ ಸೌಲಭ್ಯ ಇದೆ. ಎಟಿಎಮ್‌ನಲ್ಲಿ ನಮಿಮ್ಮ ಪಾಲಿಸಿ ನಂಬರ್ ಹಾಕಿ ಹಣ ಪಾವತಿ ಮಾಡಬಹುದು.

9. ಆದಾಯ ತೆರಿಗೆ ಪಾವತಿಸಲು ಸಹ ಇದನ್ನು ಬಳಸಬಹುದು. ಇದಕ್ಕಾಗಿ ಗ್ರಾಹಕ special information number (SIN) ಮೊದಲೇ ಬ್ಯಾಂಕ್‌ಗೆ ಲಿಖಿತ ರೂಪದಲ್ಲಿ ತಿಳಿಸಬೇಕು. ಆಯ್ಕೆ ಮೂಲಕ ಬಿಲ್ ಲಭ್ಯ.

10. ಹಣವನ್ನು ನೀವು ದೇಣಿಗೆ ಮಾಡಲು ಸಹ ಎಟಿಎಮ್ ಮಶೀನ್ ಬಳಿಸಬಹುದು. ಎಟಿಎಮ್ ಗಳ ಮೂಲಕ ಡೆಪಾಸಿಟ್ ಮಾಡುವ ಖಾತೆಯ ನಂಬರ್ ಒತ್ತಿ ಹಣ ಕಳುಹಿಸಬಹುದು. ನಂತರ ನಿಮಗೆ ರಸೀದಿ ಸಹ ಲಭ್ಯ.

11.ಇನ್ನು ಕೆಲ ಬ್ಯಾಂಕ್‌ಗಳಲ್ಲಿ ಫೋನ್ ಬಿಲ್, ವಿದ್ಯುತ್ ಬಿಲ್, ಸಿಲೆಂಡರ್ ಬಿಲ್, ಯುಟಿಲಿಟ್ ಬಿಲ್ ಪೇ ಮಾಡಬಹುದು.

12. ಇನ್ನು ನಿಮ್ಮ ಚೆಕ್ ಬುಕ್ ಖಾಲಿಯಾಗಿದ್ರೆ, ಐಸಿಐಸಿಐ ಹಾಗೂ ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಗ್ರಾಹಕ ಎಟಿಎಮ್ ಮಶೀನ್ ಮೂಲಕ ಹೊಸ ಬುಕ್ ಪಡೆಯಬಹುದು.

13. ಮೊಬೈಲ್ ಬ್ಯಾಂಕ್‌ಗಳನ್ನು ಬಳಸಲು ಎಟಿಎಮ್‌ನಲ್ಲಿ ನೊಂದಾಯಿಸ ಬಹುದು.

14. ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಹ ಎಟಿಎಮ್ ಮೂಲಕ ಪಾವತಿಸಬಹುದು.

15. ಎಟಿಎಮ್ ಮಶೀನ್‌ಗಳ ಮೂಲಕ ರೈಲು ಟಿಕೇಟ್ ಕಾಯ್ದಿರಿಸಬಹುದು.

16. ಇನ್ನು ನಿಮ್ಮ ಮೊಬೈಲ್ ರಿಚಾರ್ಜಗಳನ್ನು ಸಹ ಎಟಿಎಮ್ ಮೂಲಕ ಮಾಡಬಹುದು.