ಜಿಯೋನಿಂದ ಅನೇಕ ಜನರು ತಿಂಗಳಿಗೆ 50 ಸಾವಿರ ದುಡಿಯುತ್ತಿದ್ದಾರೆ, ನೀವು ಜಿಯೋನಿಂದ ದುಡ್ಡು ಮಾಡಬಹುದು… ಮುಂದೆ ಓದಿ!!

6
2161

ಜಿಯೋ ಸದ್ಯ ವಿಶ್ವದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಮೊಬೈಲ್​ ಸಿಮ್​ ಕಂಪನಿಗಳಲ್ಲಿ ಒಂದು. ಈ ಕಂಪನಿ ನೀಡಿದ ಉಚಿತ ಸೇವೆಯನ್ನು ಪಡೆದ ಗ್ರಾಹಕರು ಫುಲ್​ ಖುಷ್. ಈ ಕಂಪನಿ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಕಾಲ್​ ಹಾಗೂ ಇಂಟರ್ನೆಟ್​​ ನೀಡಿ ಸೈ ಎನಿಸಿಕೊಂಡಿತ್ತು. ಈ ಕಂಪನಿಯ ಎದುರು ತಮ್ಮ ಬೇಳೆ ಏನು ಬೇಯದು ಎಂದು ಕೊಂಡು ಬೇರೆ ಕಂಪನಿಗಳು ಸಹ ಜಿಯೋ ಹಾದಿ ಹಿಡಿದವು. ಸದ್ಯ ಭಾರತದಲ್ಲಿ ಎಲ್ಲ ಕಂಪನಿಗಳು ಕರೆಗಳು ಉಚಿತ ಮಾಡಿವೆ. ಅದು ಕೈಗೆಟುಕವ ದರದಲ್ಲಿ. ಈ ಬೆಳವಣಿಗೆ ಮೂಲ ಕಾರಣ ಜಿಯೀ ಅಂದ್ರೆ ತಪ್ಪಾಗಲಾರದು.

ಅಂತರ್ಜಾಲ ಬಳಕೆದಾರರ ಮೊದಲ ಆದ್ಯತೆ ಜಿಯೋ.. ಈ ಕಂಪನಿ ಈಗ ಮತ್ತೊಂದು ಸಾಧನೆ ಮಾಡಲು ಹೊರಟಿದೆ. ಇದರ ಅನ್ವಯ ಕಂಪನಿ ತನ್ನ ವಿಸ್ತಾರವನ್ನು ಇನ್ನು ಹೆಚ್ಚಿಸುವ ಪ್ಲಾನ್​ ಮಾಡಿಕೊಂಡಿದೆ. 100 ಮಿಲಿಯಿನ್ ಗಿಂತ ಹೆಚ್ಚು ಗ್ರಾಹಕರನ್ನು ಸಂಪಾದಿಸಿರುವ ಜಿಯೋ ಇದೀಗ ತನ್ನ ನೆಟ್ವರ್ಕ್ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳಲು ಹಾತೊರೆಯುತ್ತಿದೆ.

ಈಗ ಜಿಯೋ ಕಂಪನಿ ಗ್ರಹಾಕರ ಕೈ ಬಿಸಿ ಮಾಡಲು ಯೋಜನೆಯನ್ನು ಹೆಣೆದುಕೊಂಡಿದೆ. ಅದರ ಅನ್ವಯ ನಗರ ಹಾಗೂ ಗ್ರಾಮೀಣ ಭಾಗದ ಜನ, ಮನೆಯಲ್ಲಿ ಕುಳಿತು ಹಣವನ್ನು ಗಳಿಸಬಹುದಾಗಿದೆ. ಅದು ಹೇಗಪ್ಪ ಎನ್ನೋ ಕುತೂಹಲ ಎಲ್ಲರಿಗೂ ಸಾಮಾನ್ಯ. ಅಂದಹಾಗೆ ಜಿಯೋ ತನ್ನ ಕಾಲ್​ ಹಾಗೂ ಸೌಲಭ್ಯಗಳಲ್ಲಿ ಉನ್ನತಿ ಕರಣ ಮಾಡಲು ಮುಂದಾಗಿದೆ. ಇದರ ಅನ್ವಯ ಸುಮಾರು 50 ಸಾವಿರ ಕೊಟಿ ಹೂಡಿಕೆ ಮಾಡಲು ಸಿದ್ಧವಾಗಿದೆ.

ಜಿಯೋ ಕಂಪನಿ ಬಲವರ್ಧನೆಗೆ ಹಣವನ್ನು ಹೂಡಿದ್ರೆ, ಇದರಿಂದ ಗ್ರಹಾಕರಿಗೆ ಹೇಗೆ ಲಾಭ ಎಂಬ ಪ್ರಶ್ನೆ ಮೂಡೋದು ಸಹಜ. ಇದರ ಅನ್ವಯ ಜಿಯೋ ನೆಟ್ವರ್ಕ್​ ಬೂಸ್ಟ್​ ಮಾಡಲು ಹೆಚ್ಚು ಟವರ್​​ ಸ್ಥಾಪಿಸಲು ಮುಂದಾಗಿದೆ. ಗ್ರಾಮೀಣ ಭಾಗಗಳಲ್ಲಿ 25 ರಿಂದ 30 ಸಾವಿರ ಹಾಗು ನಗರ ಪ್ರದೇಶಗಳಲ್ಲಿ 50 ಸಾವಿರ ತನಕ ಬಾಡಿಗೆ ನೀಡಲಾಗುವುದು.

ಹಾಗಿದ್ರೆ ನಿಮ್ಮಲ್ಲಿ ಹಣ ಗಳಿಸಲು ಏನು ಇರಬೇಕು? ಹೇಗೆ ಸಲ್ಲಿಸಬೇಕು

ಜಿಯೋದಿಂದ ಹಣ ಪಡೆಯಲು ನಿಮ್ಮ ಬಳಿ 2000 ಚದರ ಅಡಿ ಭೂಮಿ ಇರಬೇಕು
ಮೇಲ್ಛಾವಣಿಯಾದ್ರೆ 500 ಚದರ ಅಡಿ
ನಿಮ್ಮ ಆಸ್ತಿಯಲ್ಲಿ ನೆಟ್​ ವರ್ಕ್​ ಸ್ಥಾಪಿಸಲು ಜಿಯೋ ವೆಬ್​ಸೈಟ್​​ನಲ್ಲಿ ವಿವರಗಳಿವೆ
ನಂತರ ನಿಮ್ಮ ಆಸ್ತಿಯ ಮಾಹಿತಿ, ಪುರಾವೆ, ಆಸ್ತೀಯ ಛಾಯಾಚಿತ್ರ ನೀಡಿ
ಕಂಪನಿ ಒಪ್ಪಿಕೊಂಡ್ರೆ, ಹಣ ಗಳಿಕೆ ಆರಂಭ. ಸಹಿ ಹಾಕುತ್ತದೆ.